ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯ…

ಎಂ ವಿ ಶಶಿಭೂಷಣ ರಾಜು  

ಓಡುತ್ತಲೇ ಇದ್ದೆ
ಯಾರೋ ಓಡಿಸಿಕೊಂಡು ಬಂದಂತೆ
ನಿಂತು ನೋಡಿದರೆ ಎಲ್ಲವೂ ಶೂನ್ಯ
ಮತ್ತೆ ನಡೆದೆ,
ಯಾರೋ ಹಿಂದೆ ಇರುವುದಂತೋ ಸತ್ಯ

ಅರಸುತ್ತಲೇ ಇದ್ದೆ
ಯಾರು ಉಳಿಸುತ್ತಿರುವವರೆಂದು  
ಕಲೆತು ಹುಡುಕಿದರೆ ಯಾರೂ ಕಾಣರು
ಮೌನವಾದೆ,
ಯಾರೋ ಇರುವುದಂತೋ ಸತ್ಯ

ಅಲೋಚಿಸುತ್ತಲೇ ಇದ್ದೆ
ಹೇಗೆ ಮನವ ಸಮರ್ಥಿಸಿಕೊಳ್ಳುವುವುದೆಂದು
ಇಳಿದು ಚಲಿಸಿದರೂ ಏನೂ ಕಾಣದು
ಸುಮ್ಮನಾದೆ,
ಆಳದಲಿ ನಿಜವಿರುವುದಂತೋ ಸತ್ಯ

ನೋಡುತ್ತಲೇ ಇದ್ದೆ
ಯಾರು ಸೃಜಿಸಿದರೀ ವೈವಿಧ್ಯವ
ನಿಂತು ನೋಡಿದೆ, ಯಾರೂ ಕಾಣಲಿಲ್ಲ
ತಿಳಿಯದಾದೆ,
ಇದು ಯಾರದೋ ಸೃಷ್ಟಿಯಂತೋ ಸತ್ಯ

ಕೇಳುತ್ತಲೇ ಇದ್ದೆ
ಎಲ್ಲಿಂದಲೋ ಬರುವ ಮೌನಗಾನವ
ಕುಳಿತು ಆಲಿಸಿದೆ , ಕತ್ತ ತಿರುಗಿಸಿ
ಅರಿಯದಾದೆ,
ಯಾರೋ ಹಾಡುತ್ತಿರುವದಂತೋ ಸತ್ಯ

ಬರೆಯುತ್ತಲೇ ಇದ್ದೆ
ಆವರಿಸಿದ ಸ್ಪೂರ್ತಿಯಿಂದ
ನಿಲ್ಲಿಸಿ ಅರಸಿದೆ, ಕಾಣಸಿಗಲಿಲ್ಲ
ಆದರೂ,
ಎಲ್ಲಿಂದಲೋ ಸ್ಫೂರ್ತಿಸಿಗುವುದಂತೋ ಸತ್ಯ

‍ಲೇಖಕರು Admin

17 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading