ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ತವರ ಮನೆಯಲ್ಲಿ RIP ಗಳ ರಾಶಿ..

Bhaskar Bangera

ಭಾಸ್ಕರ್ ಬಂಗೇರ

ಊರು ಬದಲಾಗಿದೆ ಗೆಳತಿ
ವಾರ ವ್ರತಗಳಿಗೆ ಮೀನು ಬಿಟ್ಟ ಜನ
moon boatನಾಮ ಬಳಿದುಕೊಂಡ ದೋಣಿಗಳು
ಸೇತುವೆ ಕೆಳಗಡೆ ಕಣ್ಣೀರು.

ಅಕ್ವೇರಿಯಮ್ಮಿನಲ್ಲಿ ಅಳುವ ವಾಸ್ತು ಮೀನು
ಅಂಗಳಕ್ಕೆ ಹಾಕಿದ ಕಾಂಕ್ರೀಟು
ಬೊಂಬಾಯಿಯ ಅಣ್ಣ ತಂದ ವಾಸ್ತು ಗಿಡ
ಜಗಳಕ್ಕೆ ಬೆಳೆದ ಕಾಂಪೌಂಡು.

ಜಾತ್ರೆಯಲ್ಲಿ ನೂರರ ನೋಟಿಗೆ ಸಿಗುವ ನಗುವ ಬುದ್ಧ
ನಡುಮನೆಯಲ್ಲಿ ಜಗಳ ತೋರಿಸುವ ಟೀವಿ
ಅಂಗಳದಲ್ಲಿ ವೀಡಿಯೊ ಗೇಮ್ ಆಡುವ ಮಕ್ಕಳು
ಅಜ್ಜಿ ಜೊತೆ ಸತ್ತ ಶೋಭಾನೆ ಹಾಡು.

ಮದುವೆ ಮನೆಯಲ್ಲಿ ತಟ್ಟೆ ಹಿಡಿದು ನಿಂತ ಭಿಕ್ಷುಕರು
ಮಾರಾಟವಾಗದೇ ಉಳಿದ ಬಾಳೆ ಎಲೆ
ಜೋಡು ರಸ್ತೆಯ ಹಣೆಗೆ ಶ್ರದ್ಧಾಂಜಲಿ ಫ್ಲೆಕ್ಸು
ಸತ್ತವರ ಮನೆಯಲ್ಲಿ RIP ಗಳ ರಾಶಿ
ಊರು ಬದಲಾಗಿದೆ ಗೆಳತಿ.

‍ಲೇಖಕರು admin

16 July, 2016

1 Comment

  1. Kusuma patel

    Kavin he tumbaa Ishtar aaytu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading