ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಕವಿತೆ- ಸುಡು ಹೊತ್ತಿನ ಸಾಲುಗಳು..

ಸತೀಶ ಕುಲಕರ್ಣಿ

ಸೂರ್ಯ ಸಂಜೆಯ ತನಕ,
ಹದಿನೈದು ದಿನ ಮಾತ್ರ, ಚಂದ್ರ.
ಇದು, ಪೂರ್ಣ ಸತ್ಯ

ಗಾಯಗೊಂಡ
ಕಲ್ಲಂಗಡಿ ಬೀಜಗಳೀಗ
ನೆಲ ಹೀರಿ ಹಬ್ಬಿವೆ

ಶಾಯಿ, ಪೆನ್ನಿಗೆ
ರಕ್ತ, ಜೀವವಾಹಿನಿ
ಶಾಯಿ ಒಣಗಿದರೆ ಅರ್ಥ
ರಕ್ತ ಒಣಗಿದರೆ ವ್ಯರ್ಥ

ಜೈ ಜೈಕಾರ
ಸಿಗಬಹುದು
ಜಯ ಮಾಲೆಯಲ್ಲ!

ಹೂವು ಚೆಲ್ಲಿದಿರಿ,
ಸೇಬು ಹಾರ ಹರಿದಿರಿ
ಆದರೇನು
ಆತ ಬರೆದ ಸತ್ಯ ಬೇರೆಯದೇ ಆಗಿತ್ತು

ಆಗ ಅವರು
ಈಗ ಇವರು
ನಾಳೆ ಮತ್ಯಾರೊ
ಮರೆಯಬಾರದು ಕಾಲದ ಸತ್ಯ

ನಮಗೆ
ನೂರು ಜಗದ್ಗುರುಗಳು
ಆದರೆ
ಒಬ್ಬನೇ ವಿಶ್ವಗುರು ;
ಅಣ್ಣ ಬಸವಣ್ಣ

ಅಕ್ಷರ ಮತ್ತು ಮಾತು
ತುಳಿಯಬಾರದು
ತಿರುಗಿ ನಿಲ್ಲುತ್ತವೆ ಒಂದು ದಿನ

ಅಹಂಕಾರವನ್ನು
ಯಾರು ಮಟ್ಟುತ್ತಾರೊ ?
ನಾಳೆ
ಉತ್ತರಿಸುತ್ತದೆ

‍ಲೇಖಕರು avadhi

20 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading