ಮಂಸೋರೆ ಕಂಡಂತೆ ‘ಡೇರ್ ಡೆವಿಲ್ ಮುಸ್ತಾಫಾ’

ಮಂಸೋರೆ

ಕನ್ನಡಕ್ಕೆ ಕಾಣಿಕೆ ನಮ್ಮ ‘ಡೇರ್ ಡೆವಿಲ್ ಮುಸ್ತಾಫಾ’

ಈ ಸಿನೆಮಾದ ಬಗ್ಗೆ ಇದ್ದ ಮುಖ್ಯ ಕುತೂಹಲ 10-12 ಪೇಜಿನ ಕತೆಯನ್ನು ಸಿನೆಮಾದಲ್ಲಿ ಹೇಗೆ ತೆರೆಗೆ ತಂದಿರಬಹುದು ಹಾಗೂ ಸಿನೆಮಾದ ಕೊನೆ ಹೇಗೆ ಮಾಡಿರಬಹುದು ಅನ್ನೋದು.

ಸಿನೆಮಾ ಪ್ರಾರಂಭದಲ್ಲಿ ಅಬಚೂರಿಗೆ ಪ್ರವೇಶಿಸಿದವನು ಕೊನೆಗೆ ಹೊರ ಬಂದಿದ್ದು ಸಂತೃಪ್ತ ಭಾವುಕತೆಯಿಂದ. ಅಷ್ಟೊಂದು ಅಚ್ಚುಕಟ್ಟಾದ, ಮನರಂಜನೆಯ ಜೊತೆಜೊತೆಗೆ ಚಿಂತನೆಗೂ ಹಚ್ಚಿದ ಸಂಪೂರ್ಣ ಸಿನೆಮಾ ನೋಡಿ ಬಂದ ಸಾರ್ಥಕತೆ ದಕ್ಕಿದ್ದು ನಮ್ ‘ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾದಲ್ಲಿ.

ನಮ್ಮೆಲ್ಲರ ಹೆಮ್ಮೆಯ ತೇಜಸ್ವಿಯವರು ಇಂದಿಗೂ ಯಾಕೆ ಪ್ರಸ್ತುತ ಎನ್ನುವುದು ಅವರ ಕತೆಗಳನ್ನು ಓದಿರುವ ಪ್ರತಿಯೊಬ್ಬ ಓದುಗನಿಗೂ ಗೊತ್ತಿರುವಂತದ್ದೇ. ಅಂತಹ ತುಂಬಾ ಮುಖ್ಯವಾದ ಹಾಗೂ ಇಂದಿಗೆ ನಮ್ಮ ಸಮಾಜಕ್ಕೆ ಅತ್ಯುತ್ತಮ ಸಂದೇಶ ಕೊಡುವ ಸಿನೆಮಾ ಆಗಿ ಮೂಡಿ ಬಂದಿದೆ.

ಸಿನೆಮಾ ವಿಚಾರದ ಜೊತೆಜೊತೆಗೆ ಭರಪೂರ ಮನರಂಜನೆಯೂ ಗ್ಯಾರಂಟಿ ಕೊಡುವ ಈ ಸಿನೆಮಾ ನನ್ನ ಪ್ರಕಾರ ಸರಿಯಾದ ಸಮಯಕ್ಕೆ ಬಂದಿದೆ. ಇಂದಿನ ಬಹು ಮುಖ್ಯ ಸಮಸ್ಯೆಯೊಂದನ್ನು ಗೆಳಯನಂತೆ ತೇಜಸ್ವಿಯವರು ಹೆಗಲ ಮೇಲೆ ಕೈಹಾಕಿಕೊಂಡು ಸರಳವಾಗಿ ವಿವರಿಸಿದಂತೆ ಇಡೀ ಸಿನೆಮಾವನ್ನು ಕಟ್ಟಿಕೊಡಲಾಗಿದೆ.

ಈ ಸಿನೆಮಾದ ನಿರೂಪಣೆಯಂತೂ ಅಷ್ಟೇ. ನಾನು ಗಮನಸಿದ ಒಂದು ಮುಖ್ಯ ಅಂಶ, ಸಿನೆಮಾ ಪ್ರಾರಂಭವಾಗುವುದು ಅಯ್ಯಂಗಾರಿಯಿಂದ, ಅಂತ್ಯವಾಗುವುದು ಮುಸ್ತಾಫಾನಿಂದ Thats the beauty of craftsmen’ship ಮತ್ತು ಸರ್ವ ಜನಾಂಗದ ಶಾಂತಿಯ ತೋಟದ ಅತ್ಯುತ್ತಮ ಉದಾಹರಣೆ ಈ ಸಿನೆಮಾ. Raghavendra Mayakonda ಸಂಭಾಷಣೆ ಸರಳ ಹಾಗೂ ಅಷ್ಟೇ Sharp ಮತ್ತು ಖುಷಿ ಕೊಡುತ್ತದೆ.
ನಿರ್ದೇಶಕ Shashank Soghal ಹಾಗೂ ತಂಡದ ಬರವಣಿಗೆ, ಬದ್ಧತೆ ಹಾಗೂ ಬುದ್ಧಿವಂತಿಕೆಗೆ ಶರಣು. ಈ ಸಿನೆಮಾ ಮುಗಿದ ಮೇಲೆ ಶಶಾಂಕ್ ಅವರು ವಿನಮ್ರವಾಗಿದ್ದರೂ ಸಹ, ನನಗೆ ಅವರಲ್ಲಿ ಕಂಡಿದ್ದು ‘ನಾನ್ ಬಿಡಿ ಡೇರ್ ಡೆವಿಲ್’ ಎಂಬ ಆತ್ಮವಿಶ್ವಾಸವಷ್ಟೇ. ಯಾಕೆಂದರೆ ಇಂದಿನ ಕಾಲಘಟ್ಟದಲ್ಲಿ ಇಂತಹ ಸಿನೆಮಾ ಮಾಡಬೇಕೆಂದರೆ ಬೇಕಿರುವುದು ಅದೇ ‘ಡೇರ್‌ನೆಸ್’ ಅದು ಶಶಾಂಕ್ ರವರಿಗಿದೆ. ಬಹುಶಃ ಕನ್ನಡ ಚಿತ್ರರಂಗದ ಏಕೈಕ ‘ಡೇರ್ ಡೆವಿಲ್’ ಶಶಾಂಕ್ ಸೋಗಲ್ ಅವರು.

ಸಿನೆಮಾ ಬಗ್ಗೆ ಬರೆದಷ್ಟೂ ಬರೆಸಿಕೊಳ್ಳುವಷ್ಟು ಅತ್ಯುತ್ತಮವಾಗಿ ಸಿನೆಮಾ ಮೂಡಿ ಬಂದಿದೆ, ಪ್ರತಿಯೊಂದನ್ನು ಬರೆದು ವೀಕ್ಷಕರಿಗೆ ನೋಡುವ ರಸಭಂಗ ಮಾಡುವುದಿಲ್ಲಾ. ಆದರೆ ಸಿನೆಮಾದಲ್ಲಿ ನಟಿಸಿರುವ ನಟರ ಬಗ್ಗೆ ಬರೆಯದೇ ಹೋದರೆ ಈ ನನ್ನ ಅನಿಸಿಕೆ ಅಪೂರ್ಣವಾದಂತೆಯೇ.

ಕತೆ ಓದಿದಾಗ ನನಗೆ ದಕ್ಕಿದ್ದ ಮುಸ್ತಾಫಾ ನಿಜವಾಗಿಯೂ ಎದುರಿಗೆ ಬಂದು ನಿಂತಿದ್ದಾನೆ ಎನ್ನುವಷ್ಟು ಅತ್ಯುತ್ತಮ ಆಯ್ಕೆ ಶಿಶಿರ್ (Shishir Baikady) ಅವರು. ಹಾಗೂ ಅಷ್ಟೇ ಸಕತ್ ಅಭಿನಯ Aditya Ashree ರಾಮಾನುಜಮ್ ಅಯ್ಯಂಗಾರಿ. ಜೊತೆಗೆ ಅಷ್ಟೇ ಸಕತ್ ಆಗಿ ನಟಿಸಿರುವವರು ಶಂಕ್ರ, ಸೀನ, ಪಿಟಿ ಮೇಸ್ಟ್ರು (Vijay Shobharaj Pavoor) ಕನ್ನಡ ಮೇಸ್ಟ್ರು (ನಾಗಭೂಷಣ್) ಓಎಸ್‌ಟಿ ಟೀಚರ್, ಪ್ರಿನ್ಸಿಪಲ್ (Mandya Ramesh Natana ಸರ್) ಹಾಗೂ ವಿಶೇಷವಾಗಿ ರಮಾಮಣಿ ಹಾಗೂ ಉಸ್ಮಾನ್ (Poornachandra Mysore) ಮತ್ತು ಉಳಿದ ಎಲ್ಲಾ ನಟರು. ಪ್ರತಿಯೊಂದು ಪಾತ್ರವೂ perfect casting.

ಈ ಸಿನೆಮಾ ಗೆಲ್ಲಬೇಕು, ಗೆಲ್ಲಿಸುವ ಜವಾಬ್ದಾರಿ ನಮ್ಮ ಪ್ರೇಕ್ಷಕ ಹಾಗೂ ತೇಜಸ್ವಿ ಓದುಗರದ್ದು.

ಇಂತಹ ಸಿನೆಮಾದೊಂದಿಗೆ ಜೊತೆಯಾಗಿ ನಿಂತಿರುವ Daali Dhananjaya ಅವರಿಗೆ ಹೃದಯಪೂರ್ವಕ ಧನ್ಯವಾದಗಳು.

ಈ ಸಿನೆಮಾದ ತಂಡದೊಂದಿಗೆ ನಿಂತಿರುವ Prayag Hodigere Siddalingappa ಹಾಗೂ ಎಲ್ಲಾ ನಿರ್ಮಾಪಕರಿಗೂ ಕನ್ನಡ ಪ್ರೇಕ್ಷಕರ ಪರವಾಗಿ ಧನ್ಯವಾದಗಳು.
ದಯವಿಟ್ಟು ಪ್ರತಿಯೊಬ್ಬರು ಈ ಸಿನೆಮಾ ನೋಡಿ ನೀವು ನೀಡುವ ದುಡ್ಡಿಗೆ ಮೋಸವಾಗುವುದಿಲ್ಲಾ.

ನಮ್ ‘ಡೇರ್ ಡೆವಿಲ್ ಮುಸ್ತಾಫಾ’ನ ಗೆಲ್ಲಿಸಿ.

ಈ ಸಿನೆಮಾ ತಂಡದ ಪ್ರತಿಯೊಬ್ಬರಿಗು ಧನ್ಯವಾದಗಳು ಹಾಗೂ ಜಾಸ್ತಿ ಜಾಸ್ತಿ ಒಳ್ಳೆಯದಾಗಲಿ.

‍ಲೇಖಕರು avadhi

May 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: