ಸಚಿನ್ ಔರ್ ರಶ್ಮಿ

ರಶ್ಮಿ ತೆಂಡೂಲ್ಕರ್ 

ಕೆಲವೊಂದು ಹೆಸರುಗಳಿರುತ್ತವೆ. ಆ ಹೆಸರಿನ ಮೇಲೆ ನಮಗೆ ಸಿಕ್ಕಾಪಟ್ಟೆ ಇಷ್ಟ ಇರುತ್ತದೆ.

ಹೀಗೆ ಹೆಸರೊಂದು ಇಷ್ಟವಾಗಲು ಕಾರಣಗಳು ಅನೇಕ. ನಾವು ಮೆಚ್ಚಿದ ಸಿನಿಮಾ , ಕ್ರೀಡಾಪಟು ಅಥವಾ ಇನ್ಯಾವುದೋ ಸಾಧಕರು ನಮ್ಮ ಮೇಲೆ ಬೀರುವ ಪ್ರಭಾವವೂ ಇದಕ್ಕೊಂದು ಕಾರಣ.

ಬಾಲ್ಯದಲ್ಲಿ ನನಗಿಷ್ಟವಾದ ಹೆಸರು ಆಜಾದ್. ಚಂದ್ರಶೇಖರ್ ಆಜಾದ್ ಪ್ರಭಾವದಿಂದ ಆಜಾದ್ ಎಂಬ ಹೆಸರು ಕೇಳಿದ ಕೂಡಲೇ ಹೊಸ ಜೋಶ್ ಬಂದು ಬಿಡುತ್ತಿತ್ತು. ಯಾವತ್ತಿನಿಂದ ಕ್ರಿಕೆಟ್ ನೋಡಲು ಶುರುವಾಯಿತೋ ಸಚಿನ್ ತೆಂಡೂಲ್ಕರ್ ಮೇಲೆ ಅಗಾಧ ಒಲವು.

ಸಚಿನ್ ಎಂಬ ಹೆಸರಿನ ಮೇಲೆ ಅದೆಷ್ಟು ಮೋಹ ಅಂದರೆ ಸಚಿನ್ ಎಂಬ ಹೆಸರು ಕೇಳಿದರೆ ಅವರು ನನ್ನನ್ನು ಕರೆಯುತ್ತಿದ್ದಾರೆ ಎಂಬಂತೆ ಗಮನಿಸುತ್ತಿದ್ದೆ. ಕೂತಲ್ಲಿ ನಿಂತಲ್ಲಿ ಶಾಲೆಯ ಡೆಸ್ಕ್ ನಲ್ಲಿ, ನೋಟ್ ಬುಕ್ ನಲ್ಲಿ ಅವನದ್ದೇ ಹೆಸರು. ಅಷ್ಟೇ ಯಾಕೆ ಯಾವುದೇ ಫೈಲ್ ಸೇವ್ ಮಾಡುವಾಗಲೂ ಸಚಿನ್ 1 , ಸಚಿನ್ 2 ಎಂದು ಹೆಸರಿಡುತ್ತಿದ್ದೆ. ಸಚಿನ್ ಮೇಲಿನ ಪ್ರೀತಿ ಬಗ್ಗೆ ಹೇಳಿದಷ್ಟು ಮುಗಿಯದು. ಇದು ಪ್ರೀತಿಯ ವಿಷಯ.

ಇದರ ನಡುವೆಯೇ ಇನ್ಯಾವುದೋ ಸಂಗತಿಗಳು ಜೀವನದಲ್ಲಿ ನಡೆದಿರುತ್ತವೆ. ಅದು ಕಹಿ ಘಟನೆ. ಅದನ್ನು ಮರೆಯಬೇಕೆಂದಿರುತ್ತೇವೆ. ಆ ವ್ಯಕ್ತಿ ಮಾತ್ರ ಅಲ್ಲ ಆ ಹೆಸರೇ ನನಗೆ ಕೇಳಿಸುವುದು ಇಷ್ಟ ಇಲ್ಲ ಮುಂದೆ ಹೋಗಲು ಯತ್ನಿಸುತ್ತಿರುವಾಗಲೇ ಇಂಥದ್ದೆಲ್ಲ ನಡೆಯುತ್ತದೆ.

ನಾವು ಹಾದು ಹೋಗುವ ದಾರಿಯಲ್ಲೇ ಅವನ/ಅವಳ ಹೆಸರಿನ ಅಂಗಡಿಯ ಬೋರ್ಡ್ ಕಾಣಿಸುತ್ತದೆ. ಬಸ್ಸು , ಆಟೋ ಹಿಂದೆಯೂ ಅದೇ ಹೆಸರು. ಜನ ಜಂಗುಳಿಯಲ್ಲಿ ಯಾರೋ ಕೂಗಿದ ಹೆಸರು ಕೂಡಾ ಅದೇ. ಅಷ್ಟೇ ಯಾಕೆ ಹೊರ ರಾಜ್ಯದ ಲಾರಿಯಲ್ಲೂ ಅದೇ ಹೆಸರು !

ಮರೆಯಬೇಕೆಂದಿದ್ದು ಪದೇ ಪದೇ ನೆನಪು ಬಂದು ಒದ್ದಾಡುವಂತೆ ಮಾಡುತ್ತದೆ. ಕ್ರಮೇಣ ಕಾಲ ಸವೆದಂತೆ ಆ ಭಾವನೆಗಳೂ ಬದಲಾಗುತ್ತಾ ಬದುಕು ಮುಂದುವರಿಯುತ್ತದೆ.
ಹೆಸರಿನೊಂದಿಗೆ ಬೆಸೆದುಕೊಂಡ ಭಾವನೆಗಳೂ ವಿಚಿತ್ರವಾಗಿರುತ್ತದೆ. ಅಲ್ಲಿ ಖುಷಿಯೂ ಇರಬಹುದು ದುಃಖವೂ ಇರಬಹುದು.

ಇದೆಲ್ಲವೂ ಬದುಕಿನ ಭಾಗಗಳು.

ಹೆಸರಲ್ಲೇನಿದೆ ಎಂದು ಕೇಳಿದರೆ ಹೆಸರಲ್ಲಿ ಎಲ್ಲವೂ ಇದೆ. ಬದುಕಿನ ಕೆಲವು ಕ್ಷಣಗಳು ಖುಷಿಯಾಗಿರುವಂತೆ ಮಾಡುವ ತಾಕತ್ತು ಈ ಹೆಸರಿಗೆ ಇರುತ್ತದೆ. ಆ ಹೆಸರು ಗೀಚುವಾಗ ಮುಖದಲ್ಲಿ ಮಂದಹಾಸ ಮೂಡಿದರೆ ಅದಕ್ಕೆ ಬೇರೆ ಹೆಸರು ಬೇಡ. ಅದು ಆ ಕ್ಷಣವನ್ನು ಪುಳಕಗೊಳಿಸುವ ಒಲವಿನ ಹೆಸರು

‍ಲೇಖಕರು avadhi

January 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: