ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಚಿನ್‌ಕುಮಾರ ಹಿರೇಮಠ ಗಝಲ್

ಸಚಿನ್‌ಕುಮಾರ ಹಿರೇಮಠ

ಮತ್ತದೇ ಸಂಜೆಯಲಿ ನೆನಪಾಗಬೇಡ ಎಲ್ಲ ಮರೆತಿರುವಾಗ
ಕನಸಿನ ದಾರಿಯಲಿ ಎದುರಾಗಬೇಡ ಎಲ್ಲ ಮರೆತಿರುವಾಗ

ದಾರಿಯ ಹೂಗಳು ಅರಳಿ ನಿಂತಿವೆ ಎಂದಿನಂತೆ ಮುಡಿಯೇರಲು
ಮುಳ್ಳುಗಳ ಭಯವೀಗ ಕೀಳಬೇಡ ಎಲ್ಲ ಮರೆತಿರುವಾಗ

ನಿನ್ನೆಗಳ ಕನ್ನಡಿಯೊಳಗೆ ನನ್ನ ನಾ ನೋಡಿಕೊಂಡೆ ಅನುದಿನ
ಎಲ್ಲೆ ಮೀರಿ ಕಲ್ಲುಗಳ ಬೀಸಬೇಡ ಎಲ್ಲ ಮರೆತಿರುವಾಗ

ಕರಿ ಇರುಳ ಸೆರಗಲ್ಲಿ ತಾರೆಗಳ ಕೂಡಿ ಚಂದ್ರ ನೆನಪಿಸುತಿಹ
ಸರಿ ಇರುಳ ಸರಸವನು ನೆನಪಿಸಬೇಡ ಎಲ್ಲ ಮರೆತಿರುವಾಗ

ಮೆಹಫಿಲ್ಲಿನ ಮಂದಿಗೆ ನಿಶೆಯೇರಿದ ಮೇಲೆ ಮನಸೇ ವಿಮಾನ
ನಿನ್ನ ಕಣ್ಣುಗಳನ್ನು ಹಾಯಿಸಬೇಡ ಎಲ್ಲ ಮರೆತಿರುವಾಗ

‘ರನ್ನ ಕಂದ’ ನ ಎದೆಯಲಿ ತಿಳಿ ನೀರ ಕೊಳವಿರಲಿ ಸದಾಕಾಲ
ಮತ್ತೆ ನೆನಪುಗಳ ಸುರುವಿ ಕಲಕಬೇಡ ಎಲ್ಲ ಮರೆತಿರುವಾಗ

‍ಲೇಖಕರು Avadhi

14 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading