ಸಂಘಮಿತ್ರೆ ನಾಗರಘಟ್ಟ
—–
ಮುಂಜಾವಿನಲಿ
ಲೈಟು ಕಂಬಕ್ಕೆ
ನೇವರಿಸುವಂತಿದ್ದ
ನನ್ನ ರೆಂಬೆಗಳ-
ತಳುಕಿಗಾಗಿ ಕತ್ತರಿಸಿ
ಕೊಳ್ಳುವ ನಿಮ್ಮ
ತಲೆಗೂದಿನಲಿನಂತೆ,
ಒಂದೆಡೆಯಿಂದ ಟ್ರಿಂ
ಮಾಡಿ – ನೆಲಕ್ಕೆ ಬಿದ್ದ
ಪುಡಿಗೂದಲು ಕಾಣಿಸದಂತೆ
ಮೊರದಲ್ಲಿ ನಾಜೂಕಾಗಿ
ಬಾಚಿಕೊಳ್ಳುವಂತೆ ,

ನನ್ನ ಎಲೆಗಳ – ಆನೆಯೊಂದು
ದೊಡ್ಡ ಚೆಂಡಿನಾಕಾರದ
ಮುದ್ದೆಯನ್ನು ಒಂದೇ
ಗುಟುಕಿಗೆ ನುಂಗುವಂತೆ
ಜೆ.ಸಿ.ಬಿ ಯ ತುದಿಯಲ್ಲಿ
ಬಳಿದುಕೊಂಡ ನೀವು –
ನನ್ನನ್ನು ನೇರವಾಗಿ
ಸುಡಲಾಗದೆ ಕತ್ತಲಿಗೆ
ಕಾದು ಆಡಂಬರದ
ಬೆಳಕಿನ ಬುಡ್ಡಿಗಳನ್ನು
ನನ್ನ ಮೈಗೆ ಸುತ್ತಿದ್ದೀರಿ..,
ಇದರಿಂದ ನಿಮ್ಮ ಕಣ್ಣುಗಳಿಗೆ
ತಂಪಾಗುವುದಾದರೆ ..
ಇರಲಿ ಬಿಡಿ ! ನಾನು
ನಿಮ್ಮಂತೆ ಕುದಿ ರಕ್ತವ
ಹೊಂದಿಲ್ಲ . ನೀವೀಗಲೂ
ನನ್ನ ದೇಹವ ತುಂಡು
ಮಾಡಿದರೆ ಸಿಗುವುದು
ಹಾಲಿನಂತ ಬಿಳಿ ನೊರೆ
ಹೊರತು ಕಣ್ಣು ಕುಕ್ಕುವ
ನೆತ್ತರಲ್ಲ….!!!!






ತುಂಬಾ ಚೆನ್ನಾಗಿದೆ