ಸಂಕ್ರಾತಿಯ ದಿನದಂದೇ ರಂಗಾಯಣ ಆರಂಭವಾದಾಗ…

ಸಿ ಬಸವಲಿಂಗಯ್ಯ

ಇಂದಿಗೆ ಮೂವತ್ತು ನಾಲ್ಕು ವರ್ಷಗಳ ಹಿಂದೆ ಬಾಬು ಕೋಡಿ ವೆಂಕಟರಮಣ ಕಾರಂತರ ನೇತೃತ್ವದಲ್ಲಿ ಅಂದಿನ ಜನತಾ ಪಕ್ಷದ ಸರ್ಕಾರ ಆರಂಬಿಸಿದ ನಾಟಕ ಕರ್ಣಾಟಕ ರಂಗಾಯಣ ಒಂದು ಸ್ವಾಯತ್ತ ಸಂಸ್ಥೆಯಾಗಿ, ಕನ್ನಡದ ಸಾಂಸ್ಕೃತಿಕ ಅಸ್ಮಿತೆ, ದೇಶದ ಬಹುತ್ವ ಸಂಸ್ಕೃತಿಯನ್ನು ನಾಟಕ ಪ್ರಾಕಾರದಲ್ಲಿ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ನಿರ್ವಹಿಸಲು ಆರಂಭಮಾಡಿತು. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಆಯ್ಕೆಯಾದ ಕಲಾವಿದರು ಮತ್ತು ಅಧ್ಯಾಪಕ ವರ್ಗದವರ. ಅಪರೂಪದ ಫೋಟೋ ಈ ಕೆಳಗಿನದು.

ಅಂದಿನಿಂದ ಇಂದಿನವರೆಗೂ ಹಲವಾರು ಸರ್ಕಾರಗಳನ್ನು ಪ್ರಭುತ್ವವನ್ನು ,ಪ್ರಜಾಪ್ರಭುತ್ವದ ಪ್ರಭುಗಳು ಬದಲಾಯಿಸಿದ್ದಾರೆ. ಅಂತಹ ಹಲವಾರು ಸರ್ಕಾರಗಳನ್ನು ರಂಗಾಯಣ ಕಂಡಿದೆ. ಆದರೇ ಹಿಂದಿನ ಜನತಾ, ಕಾಂಗ್ರೆಸ್, ಭಾಜಪ- ಜೆಡಿಎಸ್ ಸಮ್ಮಿಶ್ರ, ಕಾಂಗ್ರೇಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರಗಳು ಬಂದು ಹೋದರು ರಂಗಾಯಣದ ಸ್ವಾಯತ್ತತೆ ಮತ್ತು ನಿರ್ದೇಶಕರ ಆಯ್ಕೆಯಲ್ಲಿ ರಂಗ ಸಮಾಜ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೆಸರುಗಳನ್ನು ಸೂಚಿಸುತ್ತಿತ್ತು ಸರ್ಕಾರ ಆಯ್ಕೆಮಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂವಿಧಾನ ಆಶಯಗಳಿಗೆ ಪೂರಕವಾಗಿ ಅನುವುಮಾಡಿಕೊಡುತ್ತಿತ್ತು. ಸಾಂಸ್ಕೃತಿಕ ನೀತಿಗಳನ್ನು ರೂಪಿಸಲು ರಂಗ ಸಮಾಜದ ತಜ್ಞರಿಗೆ, ರಂಗಾಯಣದ ನಿರ್ದೇಶಕರಿಗೆ ಅಧಿಕಾರ ನೀಡಿ ಸರಕಾರ ತನ್ನ ಯಾವ ನಿಲುವುಗಳನ್ನು ಒತ್ತಾಯ ಪೂರ್ವಕವಾಗಿ ರಂಗಾಯಣದ ಮೇಲೇರದೆ ಪ್ರಜಾತ್ಯಾತ್ಮಕವಾಗಿಯೇ ನಡೆಸಿಕೊಂಡು ಬಂದಿತ್ತು.

ಯಾವಾಗ ಒಂದು ರಾಷ್ಟ್ರ, ಒಂದು ಧರ್ಮ, ಒಬ್ಬ ನಾಯಕ, ಒಂದು ಭಾಷೆಯ “ಹಿಂದೂರಾಷ್ಟ್ರ” ಎಂಬ ಸಂಘ ಪರಿವಾರದ ಅಸಂವಿಧಾನಿಕ ಧರ್ಮಾಧಾರಿತ ರಾಜಕಾರಣ, ಮತೀಯವಾದದ ತತ್ವದ ಅಜೆಂಡಾ ಮುನ್ನೆಲೆಗೆ ಬಂದು, ಅದೇ ಸಾಂಸ್ಕೃತಿಕ ನೀತಿಯಾಗಿ ಭಾಜಪ ಪಕ್ಷ ರಾಜಕಾರಣ ರಂಗಾಯಣದ ಒಳಗೆ ನುಗ್ಗಿತೋ ” ಸರ್ವ ಜನಾಂಗದ ಶಾಂತಿಯ ತೋಟದ” ಆಶಯಕ್ಕೆ ದ್ವೇಷ, ವಿಕೃತಿಯ ಬೆಂಕಿ ಬಿತ್ತು. ರಂಗಾಯಣದ ಮೂಲ ಆಶಯ ,ಕಾರಂತರ ಕನಸುಗಳು ಮೂಲೆಗುಂಪಾದವು.

ಆ ಮುಂದಾಲೋಚನೆ ಇದ್ದುದರಿಂದಲೇ ಏನೋ ಕಾರಂತರು ಸಂಕ್ರಾತಿಯ ದಿನದಂದೇ ರಂಗಾಯಣ ಆರಂಭವಾದಾಗ. ಆ ಸಮಯದ ರಂಗಾಯಣದ ಪ್ರಾರ್ಥನೆ ಇದಾಗಿತ್ತು:

” ಸೋಲಿಸ ಬೇಡ ಗೆಲಿಸಯ್ಯ
ಮೂಲೋಕದಯ್ಯ ದೇವಾನೀಸಯ್ಯ
ಸೋಲಿಸ ಬೇಡ ಗೆಲಿಸಯ್ಯ…
ಸೋ ಲಿ ಸ ಬೇ ಡ ಗೆ ಲೀ ಸ ಯ್ಯ..” ಹಾಡಿಸಿದರು.

ಕಾರಂತರು ಕಟ್ಟಿದ ಭೂಪಾಲ್ ರಂಗಮಂಡಲವನ್ನೂ ಈಗಿನ ರಂಗಾಯಣವನ್ನು ಭೂತವಾಗಿ ಕಾಡುತ್ತಿರುವ ಮೂಲಭೂತ ವಾದಿ ಸರ್ಕಾರವೇ ಅದನ್ನು ನಾಶಮಾಡಿದನ್ನು ಕಾರಂತರು ತಮ್ಮ ಕಣ್ಣೆದುರೇ ಕಂಡಿದ್ದರಿಂದ ಈ ಪ್ರಾರ್ಥನಾ ಗೀತೆಯನ್ನು ಸಂಯೋಜಿಸಿ ಕಲಾವಿದರಿಂದ ಅಧ್ಯಾಪಕ ವರ್ಗದವರಿಂದ ಹಾಡಿಸಿದ್ದರು. ಆದರೂ ರಂಗಾಯಣವನ್ನ. ಮೂಲ ಭೂತ ವಾದದ ಭೂತಚೇಷ್ಟೆಯ ರಾಜಕಾರಣದಿಂದ ಗೆಲಿಸಲಿಲ್ಲ..!

ಅವರ ಪ್ರತಿಮೆಯನ್ನು ರಂಗಾಯಣದ ಆವರಣದಲ್ಲಿ ಸ್ಥಾಪಿಸಿ ಅವರ ಚಿಂತನೆಗಳನ್ನು ಸ್ಥಾವರಾಗೊಳಿಸುವ ಹುನ್ನಾರ ಪ್ರತಿಮೆ ಸಂಸ್ಕೃತಿಯ ಸರಕಾರದ ಆಶಯವೂ ಆಗಿರುವಂತಿದೆ.! ಹಿಂದಿನ ನಿರ್ದೇಶಕರ ಆಶಯವಾದ ಕಾರಂತರ ಸ್ಮೃತಿ ಭವನ, ಸಂಗೀತ ಪರಿಕರಗಳ, ಸಾವಿರಾರು ಪುಸ್ತಕಗಳ ಮ್ಯೂಜಿಯಂ ಸ್ಥಾಪನೆಯ ಪ್ರಸ್ತಾವನೆ ಮೂಲೆ ಸೇರಿ ಅವರ ಪ್ರತಿಮೆ ಸ್ಥಾಪನೆ ಮಾತ್ರ ಸಾಧನೆ ಎಂದು ಬಿಂಬಿಸಲಾಗುತ್ತಿದೆ.!
ಇತಿಹಾಸ ಚಕ್ರ ಉರುಳಲೇ ಬೇಕು.. ಸಂಕ್ರಾಂತಿಯಲ್ಲಿ ಸೂರ್ಯ ತನ್ನ ಪಥ ಸಂಚಲನ ವಾದಂತೆ ರಂಗಾಯಣವೂ ತನ್ನ ಪಥ ಬದಲಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಿವಾರ್ಯ..

ನಾನು ನಿರ್ದೆಶಕ ನಾಗಿದ್ದಾಗಾ ಮಾನ್ಯ ಜೆ. ಹೆಚ್.ಪಟೀಲ್ ಮುಖ್ಯ ಮಂತ್ರಿಗಳು, ಶ್ರೀ.ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಂಗಾಯಣ ಡ ಕಲಾವಿದರು ಮತ್ತು ಸಿಬ್ಬಂದಿಗಳನ್ನು ಖಾಯಂ ಗೊಳಿಸಿದಾಗ .. ಕಾರಂತರು; ಬಸು, ನೀವು ತಪ್ಪು ಮಾಡಿದಿರಿ.. ಕಲಾವಿದರನ್ನು ಖಾಯಂ ಗೊಳಿಸುವ ಪ್ರಯತ್ನಕ್ಕೆ ರಂಗ ಸಮಾಜ ಮತ್ತು ನೀವು ಒಪ್ಪಿಕೊಂಡದ್ದು ತಪ್ಪು! ಸಂಸ್ಥೆ ನಿಂತ ನೀರಾಗಿ ಸ್ಥಾವರ ಗೊಳ್ಳುತ್ತದೆ ” ಎಂದು ಎಚ್ಚರಿಸಿದರು.. ಆದರೇ ಭೂಪಾಲ್ ನಂತೆ ಕರ್ಣಾಟಕ ದಲ್ಲಿ ಆಗದೆ ಕಾರಂತರ ಕನಸಿನಂತೆ ನಾಲ್ಕೈದು ರಂಗಾಯಣ ಗಳು ಸ್ಥಾಪನೆ ಯಾದವು ಕಾರಂತರ ಆಶಯಗಳು ಕನಸುಗಳು ಸ್ಥಾವರ ಗೊಂಡದ್ದು ಮಾತ್ರ ಸಂಕ್ರಾಂತಿ ಸೂರ್ಯ ಪಥ ಬಲಿಸಿದಂತೆ ಅವನ ಪ್ರಕರ ಕಿರಣಗಳಷ್ಟೇ ಸತ್ಯ

‍ಲೇಖಕರು avadhi

January 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: