ಶ್ರೀ ವಿದ್ಯಾ ಸಿಂಗಾಪುರ ಡೈರಿ- ಟೆಕ್ – ಕೊ

ಶ್ರೀ ವಿದ್ಯಾ

ಇದರ ಹೆಸರು ಟೆಕ್ – ಕೊ ( Tek – Ko). ಅಂದರೆ ಬಿದಿರಿನ ಕಂಬ. ಸಿಂಗಾಪುರದಲ್ಲಿ ಇದು ಬಟ್ಟೆ ಒಣಗಿಸಲು ಇರುವ ವ್ಯವಸ್ಥೆ. ಇದಕ್ಕಾಗಿ ಅಡುಗೆ ಮನೆಯ ಕಿಟಕಿಯ ಹೊರಭಾಗದ ಗೋಡೆಯಲ್ಲಿ ರಂಧ್ರಗಳನ್ನು ಮಾಡಲಾಗಿರುತ್ತದೆ. ನಿಯಮದ ಪ್ರಕಾರ ಇದು ಕನಿಷ್ಟ ೨.೧m ಉದ್ದ ಹಾಗೂ ೨೮ mm ಡಯಾಮೀಟರ್ ಹೊಂದಿರಬೇಕು. ಈ ತೂತುಗಳಲ್ಲಿ ೯ ಅಡಿ ಉದ್ದದ ಬಿದಿರಿನ ಕೋಲುಗಳನ್ನು ಇಡಲಾಗುತ್ತದೆ. ಈ ರಚನೆಯಿಂದಾಗಿ, ಕೋಲು ಹಾಗೂ ಅವುಗಳಲ್ಲಿ ನೇತು ಹಾಕಲಾಗುವ ಬಟ್ಟೆಗಳ ಭಾರವು ಮಳೆ ಗಾಳಿ ಬಿಸಿಲನ್ನು ತಡೆಯುವ ಮೂಲಕ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ.

ಸಿಂಗಾಪುರ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ವರ್ಷದುದ್ದಕ್ಕೂ ಬಿಸಿ ಮತ್ತು ತೇವದಿಂದ ಕೂಡಿರುತ್ತದೆ. ಸ್ಥಳದ ಅಭಾವ ಒಂದೆಡೆಯಾದರೆ ಆರೋಗ್ಯಕರ ದೃಷ್ಟಿಕೋನ ಮತ್ತೊಂದೆಡೆ. ಎಲೆಕ್ಟ್ರಿಕ್ ಡ್ರೈಯರ್ಗಳ ವಿದ್ಯುತ್ ವೆಚ್ಚವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗ್ಗದ ಪರಿಹಾರ ವೂ ಹೌದು.

೨೦ ರಿಂದ ೩೦ ಮಹಡಿಗಳನ್ನು ಹೊಂದಿರುವ ಅಪಾರ್ಟ್ ಮೆಂಟ್ ಗಳಲ್ಲಿ ಎತ್ತರದಿಂದ ನಡೆಸುವ ಈ ಕಾರ್ಯ ಅಷ್ಟು ಸುಲಭದ್ದೇನಲ್ಲ. ಜಾಗರೂಕತೆ ಅತ್ಯಗತ್ಯ. ಕೈತಪ್ಪಿ ಬಿದಿರಿನ ಕಂಬಗಳು ಕೆಳಗೆ ಜಾರಿದ್ದಲ್ಲಿ ಸಾವು – ನೋವುಗಳು, ದಂಡ – ಕೋರ್ಟ್ ಅಲೆದಾಟಗಳು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಇಲ್ಲಿನ ಸರ್ಕಾರ ಹಲವು ರೀತಿಯ ಹೊಸ ಮಾದರಿಗಳನ್ನು ಪರಿಚಯಿಸಿದೆ. 1960 ರಿಂದ 1990 ರ ದಶಕದ ಆರಂಭದವರೆಗೆ ಪೈಪ್ ಸಾಕೆಟ್ ಹೊಂದಿರುವ ಮಾದರಿಯನ್ನು ಪರಿಚಯಿಸಲಾಗಿತ್ತು.

ಬಿದಿರು ಕೋಲುಗಳ ಎರಡೂ ತುದಿಗಳಿಗೆ ಆಧಾರವಾಗಿರುವಂತೆ 1995 ರಿಂದ ಲೋಹದ ಸ್ಟ್ಯಾಂಡ್ ಗಳನ್ನು ಅಳವಡಿಸ ಲು ಆರಂಭಿಸಿತು. ಇತ್ತೀಚೆಗೆ ಕಂಬಗಳ ಸ್ಥಳ ಬದಲಾವಣೆಯನ್ನು ತಪ್ಪಿಸಲು ಅಲ್ಯೂಮಿನಿಯಂ ಕೋಲುಗಳಿಂದ ಕೂಡಿದ ಸ್ಟ್ಯಾಂಡ್ ಗಳನ್ನು ಕೂಡ ಹಲವು ಹೊಸ ಅಪಾರ್ಟ್ ಮೆಂಟ್ ಗಳಲ್ಲಿ ಅಳವಡಿಸಲಾ ಗುತ್ತಿದೆ.

ಜನರಿಗೆ ಒಪ್ಪುವ ರೀತಿಯಲ್ಲಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆಗಳು ಮುಂದುವರಿದಿವೆ. ತಮಾಷೆಯೆಂದರೆ ಈ ಬಿದಿರಿನ ಕೋಲುಗಳನ್ನು ಕಳ್ಳತನಕ್ಕಾಗಿ ಬಳಸಿದ ಪ್ರಕರಣಗಳು ನಡೆದಿವೆ. ಮನೆಯೊಳಗೆ ಕಾಲಿಡದೆಯೇ ತಮಗೆ ಬೇಕಾದುದನ್ನು ಈ ಕೋಲುಗಳಿಂದ ದರೋಡೆ ಮಾಡಿ ಸಿಕ್ಕಿಬಿದ್ದವ್ರು ಇಲ್ಲಿದ್ದಾರೆ.

‍ಲೇಖಕರು Avadhi

March 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: