ಶ್ರೀ ವಿದ್ಯಾ ಸಿಂಗಾಪುರ್ ಡೈರಿ- ಬಾಂಬ್ ಶೆಲ್ಟರ್

ಶ್ರೀ ವಿದ್ಯಾ

ಇದರ ಹೆಸರು ಬಾಂಬ್ ಶೆಲ್ಟರ್ ( Bomb Shelter ). ಇಡೀ ಮನೆಯಲ್ಲಿ ಒಂದು ಕೋಣೆ ಮಾತ್ರ ಈ ಹೆಸರಿನಿಂದ ಕರೆಯಲ್ಪಡುತ್ತದೆ. ಬಲವರ್ಧಿತ ಗೋಡೆಗಳು, ಛಾವಣಿಗಳು ಮತ್ತು ಭಾರವಾದ ಉಕ್ಕಿನ ಬಾಗಿಲುಗಳು ಈ ರೂಮಿನ ವೈಶಿಷ್ಟ್ಯ. ಇದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಕ್ಷಣೆ ಪಡೆಯಲೆಂದೇ ನಿರ್ಮಿತ. ವಿಶೇಷವಾಗಿ ಬಾಂಬ್ ಸ್ಫೋಟದ ಸಮಯದಲ್ಲಿ ಭಗ್ನಾವಶೇಷಗಳು ಮತ್ತು ಗಾಜಿನ ವಿಭಜಕಗಳಿಂದ ತಪ್ಪಿಸಲು ಈ ಕೋಣೆ ಸಹಕಾರಿಯಾಗಲಿದೆ.

1997 ರಲ್ಲಿ ನಾಗರಿಕ ರಕ್ಷಣಾ ಆಶ್ರಯ ಕಾಯ್ದೆ ಇದನ್ನು ಕಡ್ಡಾಯಗೊಳಿಸಿತು. ತದನಂತರ ನಿರ್ಮಾಣಗೊಳ್ಳುತ್ತಿರುವ ಹೆಚ್ ಡಿಬಿ ( Housing Development Board )ಯ ಎಲ್ಲಾ ವಸತಿ ಗೃಹಗಳಲ್ಲಿ ಈ ಕೋಣೆ ಅತ್ಯಗತ್ಯ. ಜಪಾನಿನವರು ( 1942–1945 ) ಸಿಂಗಾಪುರದ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡಾಗ ಆದ ಸಾವು ನೋವುಗಳ ಹಿನ್ನಲೆಯಲ್ಲಿ ಮನೆಯ ಪ್ರತಿಯೊಬ್ಬ ನಿವಾಸಿ ತನ್ನ ರಕ್ಷಣೆಗೆ ಪ್ರತ್ಯೇಕ ಕಂದಕವನ್ನು ಹೊಂದಬೇಕು ಎಂಬ ಬೇಡಿಕೆಯಿತ್ತು ಎನ್ನಲಾಗಿದೆ.

ಹೆಚ್ ಡಿಬಿ ( Housing Development Board ) ಮತ್ತು ಸಿಂಗಾಪುರದ ನಾಗರಿಕ ರಕ್ಷಣಾ ಪಡೆ 1987 ರಲ್ಲಿ ಸಿವಿಲ್ ಡಿಫೆನ್ಸ್ ಶೆಲ್ಟರ್ ಯೋಜನೆಯನ್ನು ಆರಂಭಿಸಿತ್ತು, ಪ್ರಾಯೋಗಿಕ ಹಂತವಾಗಿ ಹೆಚ್ ಡಿಬಿ ಕಟ್ಟಡಗಳ ಬುಡದಲ್ಲಿ ಇದನ್ನು ನಿರ್ಮಿಸಲಾಯಿತು. ಸಿಂಗಾಪುರದಲ್ಲಿ ಒಟ್ಟು 177 ಶೆಲ್ಟರ್ ಗಳು ಬೆಸ್ಮೆಂಟ್ ನಲ್ಲಿ ಮತ್ತು 269 ನೆಲಮಟ್ಟದಲ್ಲಿ ನಿರ್ಮಿಸಲಾಗಿದೆ. ಇದಲ್ಲದೆ, ಸುರಂಗ ಮಾರ್ಗದಲ್ಲಿನ ರೈಲು ನಿಲ್ದಾಣಗಳು ಕೂಡ ತುರ್ತು ಸಮಯದಲ್ಲಿ ಸಾರ್ವಜನಿಕ ಆಶ್ರಯ ತಾಣಗಳಾಗಿ ಕಾರ್ಯನಿರ್ವಹಿಸಲಿವೆ. ಇಲ್ಲಿನ 48 ನಿಲ್ದಾಣಗಳು ಪ್ರದೇಶದ ಗಾತ್ರವನ್ನು ಅವಲಂಬಿಸಿ 3,000 ರಿಂದ 19,000 ಜನರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಹೊಂದಿವೆ.

ಸುರಕ್ಷಿತ ಮತ್ತು ಆರಾಮದಾಯಕ ವಾತಾವರಣದ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಕೆಲ ಶಾಲೆಗಳು, ಸಮುದಾಯ ಭವನಗಳು, ಕ್ಲಬ್ ಗಳಲ್ಲೂ ಇವುಗಳನ್ನು ಕಾಣಬಹುದು. ಆದರೆ ಸದ್ಯಕ್ಕೆ ಇವೆಲ್ಲ ಬೇರೆ ಬೇರೆ ವಿಚಾರಗಳಿಗೆ ಬಳಸಲಾಗುತ್ತದೆ. ಮನೆಯಲ್ಲಿನ ಕೋಣೆಯು ಸ್ಟೋರ್ ರೂಮ್, ಲೈಬ್ರರೀ, ಬೆಡ್ರೂಮ್, ದೇವರ ಪೂಜೆಗೆ ಹೀಗೆ ತಮಗೆ ಬೇಕಾದಂತೆ ಪರಿವರ್ತಿಸಿಕೊಂಡಿದ್ದಾರೆ.

ಇನ್ನೂ ನೆಲಮಾಳಿಗೆಯ ಆಶ್ರಯ ಸ್ಥಳಗಳು ವಿಭಿನ್ನ ರೀತಿಯ ಅಂಗಡಿ ಮುಂಗಟ್ಟುಗಳಾಗಿ ಪರಿವರ್ತನೆಗೊಂಡಿದೆ, ಇಂತಹ ವ್ಯಾಪಾರಗಳು ಸರ್ಕಾರದ ಅನುಮತಿ ಪಡೆದೆ ನಡೆಸಲ್ಪಡುತ್ತವೆ. ಬಳಕೆ ಹೇಗೆ ಇರಲಿ ಆದರೆ ಉದ್ದೇಶ ತಮ್ಮ ನಿವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ. ಸಿಂಗಾಪುರ ಸೇರಿದಂತೆ ಯಾವ ದೇಶಕ್ಕೂ ಇಂತಹ ಶೆಲ್ಟರ್ ಗಳು ತುರ್ತು ಪರಿಸ್ಥಿಯ ಕಾರಣಕ್ಕೆ ಬಳಕೆಗೆ ಬಾರದೆ ಇರಲಿ ಅಷ್ಟೇ.

‍ಲೇಖಕರು Avadhi

March 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: