ಶೋಭಾ ಹಿರೇಕೈ ಕಂಡ್ರಾಜಿ ‘ಫಟಾ ಫಟ್’

ಶೋಭಾ ಹಿರೇಕೈ ಕಂಡ್ರಾಜಿ ಅವರ ʼಅವ್ವ ಮತ್ತು ಅಬ್ಬಲಿಗೆʼ ಚೊಚ್ಛಲ ಕವನ ಸಂಕಲನಕ್ಕೆ ʼಸರಳಾ ರಂಗನಾಥರಾವ್ ಪ್ರಶಸ್ತಿʼ ಲಭಿಸಿದೆ.

ಖ್ಯಾತ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರು ತಮ್ಮ ಮಡದಿ ದಿ. ಸರಳಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

ಲೇಖಕಿಯರ ಚೊಚ್ಚಲ ಕೃತಿಗೆ ಈ ಬಹುಮಾನವನ್ನು ಮೀಸಲಾಗಿಡಲಾಗಿದೆ.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ, ಚಿಂತಾಮಣಿ ಕೊಡ್ಲೆಕೆರೆ ಹಾಗೂ ಜಿ ಎನ್ ರಂಗನಾಥ ರಾವ್ ಅವರು ತೀರ್ಪುಗಾರರಾಗಿದ್ದರು.

ಶೋಭಾ ಹಿರೇಕೈ

ʼಅವ್ವ ಮತ್ತು ಅಬ್ಬಲಿಗೆʼಗೆ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

ʼಅವ್ವ ಮತ್ತು ಅಬ್ಬಲಿಗೆʼ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿರುವುದು ಹೇಗನ್ನಿಸುತ್ತಿದೆ?
 ಇದು ನನ್ನ ಮೊದಲ ಪ್ರಶಸ್ತಿಯಾದ್ದರಿಂದ ತುಂಬಾ ಖುಷಿಯಾಗ್ತಿದೆ.

ಕವನ ಸಂಕಲನ ಪ್ರಕಟಗೊಂಡಾಗ ಒಳ್ಳೆಯ ಪ್ರತಿಕ್ರೀಯೆ, ವಿಮರ್ಶೆ ಬಂದಿದ್ದವು. ಈಗ ಪ್ರಶಸ್ತಿ ದೊರೆತಿರುವುದು ಇನ್ನೂ ಖುಷಿ ತಂದಿದೆ.

ಚೊಚ್ಛಲ ಕವನ ಸಂಕಲನದ ಅನುಭವ ಹೇಗಿತ್ತು ?
 ಇದರ ಪ್ರಕಟಣೆಯ ಮುನ್ನ ನನಗೆ ಪ್ರಕಟನೆಯ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಪ್ರಕಾಶಕರು ಹಾಗೂ ಸ್ನೇಹಿತರ ವಲಯದಿಂದ ತಿಳಿದುಕೊಂಡೆ. ಕವಿತೆ ಬರೆಯುವುದಕ್ಕಿಂತ ಅದನ್ನ ಪ್ರಕಟ ಮಾಡುವುದು ಕಷ್ಟ ಅನಿಸಿತು.

ನಿಮ್ಮ ಮುಂದಿನ ಪುಸ್ತಕ ?
 ಹಳ್ಳಿ ಬದುಕು ಬಿಂಬಿಸುವ ಪ್ರಬಂಧಗಳ ಸಂಕಲನಕ್ಕೆ ಸಜ್ಜಾಗುತ್ತಿದ್ದೇನೆ. ಆ ಪುಸ್ತಕಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ನನ್ನ ಹಳ್ಳಿ, ಇಲ್ಲಿನ ಜನರನ್ನ ಪ್ರತಿಬಿಂಬಿಸುತ್ತೆ.

ʼಅವ್ವ ಮತ್ತು ಅಬ್ಬಲಿಗೆʼ ಕವನಗಳು ಹುಟ್ಟಿದ್ದು ಹೇಗೆ ?
 ಕಾರವಾರದ ಒಂದು ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಉತ್ತರ ಕನ್ನಡದ ಎಲ್ಲ ಬರಹಗಾರರು ಬಂದಿದ್ದರು. ಆಗ ನನಗೆ ಅನಿಸ್ತು ನಾನು ಬರೆಯಬೇಕು ಬರವಣಿಗೆ ನಿಲ್ಲಿಸಬಾರದು ಎಂದುಕೊಂಡು ʼಅವ್ವ ಮತ್ತು ಅಬ್ಬಲಿಗೆʼ ಬರೆಯಲು ಶುರು ಮಾಡಿದೆ.

ಶಿಕ್ಷಕ ವೃತ್ತಿ, ಬರವಣಿಗೆ ಹೇಗೆ ನಿಭಾಯಿಸುತ್ತೀರಿ ?
 ಶಿಕ್ಷಕ ವೃತ್ತಿಯಲ್ಲಿ ಇರುವುದರಿಂದಲೇ ನಾನಿನ್ನೂ ಬರೆಯುತ್ತಿದ್ದೇನೆ. ಗ್ರಾಮ ಬದುಕು ಮತ್ತು ನಗರವಾಸಿ ಜೀವನ ನನಗೆ ಬರೆಯಲು ಹಚ್ಚಿತು. ವೃತ್ತಿ ಮತ್ತು ಬರವಣಿಗೆ ನಿಭಾಯಿಸಲು ಸ್ವಲ್ಪ ಕಷ್ಟ ಆಗಬಹುದು ಆದರೆ ಆಗುವುದೇ ಇಲ್ಲ ಎನ್ನುವಂತಹುದೇನಲ್ಲ.

ʼಅವ್ವ ಮತ್ತು ಅಬ್ಬಲಿಗೆʼ ನಿಮಗೆಷ್ಟು ಆಪ್ತ ?
 ಇದಕ್ಕೆ ಉತ್ತರಿಸುವು ಸ್ವಲ್ಪ ಕಷ್ಟ. ಈ ಪುಸ್ತಕ ನನ್ನನ್ನ ಪ್ರತಿನಿಧಿಸುತ್ತೆ, ನನ್ನ ಹಳ್ಳಿಯನ್ನ ಪ್ರತಿನಿದಿಸುತ್ತೆ ಅದಕ್ಕೂ ಹೆಚ್ಚಾಗಿ ಹೆಸರಲ್ಲೇ ಇವರುವ ಹಾಗೆ ಅವ್ವನನ್ನ ಪ್ರತಿನಿಧಿಸುತ್ತೆ ಹೀಗಾಗಿ ಅವ್ವನಷ್ಟೇ ಆಪ್ತ ಈ ʼಅವ್ವ ಮತ್ತು ಅಬ್ಬಲಿಗೆʼ ಪುಸ್ತಕ.

ಈ ಸಂಕಲನದಲ್ಲಿ ನಿಮ್ಮನ್ನು ಹೆಚ್ಚು ಕಾಡಿದ ಕವನ ಯಾವುದು ?
 ತುಂಬಾ ಇವೆ ತಕ್ಷಣಕ್ಕೆ ಹೇಳೋದು ಕಷ್ಟ. ಈ ಸಂಕಲನವನ್ನ ನಾನು ಹಳ್ಳಿಯ ಹೊಕ್ಕುಳ ಬಳ್ಳಿಯನ್ನು ಕಟ್ಟಿಕೊಂಡೇ ಬರೆದಿದ್ದೇನೆ ಹೀಗಾಗಿ ಎಲ್ಲವೂ ನನ್ನನ್ನ ಕಾಡಿವೆ.

‍ಲೇಖಕರು avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. G.N.Ranganatha Rao

    Dear Mohan,
    Good Interview.I am excited by your immediate response and also by the Awardee. Sarala must have blushed in Heaven for this sort of affection.
    Regards
    G.N.Ranganatha Rao

    ಪ್ರತಿಕ್ರಿಯೆ
  2. Nagaraj Harapanhalli

    ಶೋಭಾ ಈ ನೆಲದ ಪರಂಪರೆಯ ಮುಂದುವರಿಸಿದ ಕವಯಿತ್ರಿ. ಆಯ್ಕೆ ಸಮಿತಿಯ ಹಿರಿಯರಿಗೆ ಧನ್ಯವಾದಗಳು. ಯುದ್ಧ ವಿರೋಧಿ ಹಾಗೂ ಶ್ರಮಿಕರ ಪರ ದನಿ ಆಕೆಯ ಕವಿತೆಗಳ ವಿಶೇಷ. ಹೆಚ್ಚೆಂದರೇನು‌ ಮಾಡಿಯೇನು ಎಂಬ ಕವಿತೆಯಲ್ಲಿ ಅಯ್ಯಪ್ಪ ಸ್ವಾಮಿಯನ್ನು (ಬಾಲಕ ಅಯ್ಯಪ್ಪ) ತಾಯಿಯಾಗಿ ನೋಡುವ ಪರಿಯಲ್ಲಿ ಆಕೆ ಗೆದ್ದಿದ್ದಳು. ಲಂಕೇಶರ ಅವ್ವ ಆಕೆಯ ಅವ್ವ ಅಬ್ಬಲಿಗೆಯ ಉದ್ದಕ್ಕೂ ನನಗೆ ಕಾಣಿಸಿದ್ದಳು. ವಿರಳಾತಿವಿರಳವಾಗಿ ಬಬರೆಯುವ ಶೋಭಾ ನಾಯ್ಕ ಕನ್ನಡ ನೆಲದ ಅಪ್ಪಟ ಕವಯಿತ್ರಿ.‌

    ಪ್ರತಿಕ್ರಿಯೆ
  3. ನಾಗರಾಜ ಹರಪನಹಳ್ಳಿ

    ಶೋಭಾ ಕನ್ನಡದ ಕಾವ್ಯ ಪರಂಪರೆಯ ಮುಂದುವರಿಸಿದ ಕವಯಿತ್ರಿ. ‌ಆಕೆ‌ ಅವ್ವ ಅಬ್ಬಲಿಗೆಯಲ್ಲಿ ಯುದ್ಧ ವಿರೋಧಿ ಕವಿತೆ ಓದಿದಾಗಲೇ ಆಕೆ ಕವಿಯಾಗಿ ಹೊರ‌ಹೊಮ್ಮಿದ್ದಳು. ಅವ್ವ ಅಬ್ಬಲಿಗೆಯ ಉದ್ದಕ್ಕೂ ಲಂಕೇಶರ ಅವ್ವ ಅಲ್ಲಿ ಕಾಣಿಸಿದ್ದಳು ನನಗೆ. ಹೆಚ್ಚೆಂದರೇನು ಮಾಡಿಯೇ‌ನು ಎಂಬ ಕವಿತೆಯಲ್ಲಿ ಬಾಲಕ ಅಯ್ಯಪ್ಪನ ತಾಯಿಯಾಗುವ ಪರಿ ಅದ್ಭುತವಾದುದು. ಆಯ್ಕೆ ಸಮಿತಿಯ ಹಿರಿಯರು ಅವ್ವ ಅಬ್ಬಲಿಗೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತ. ಫಟಾಫಟ್ ಸಂದರ್ಶನ ಸಹ ಚೆನ್ನಾಗಿದೆ. ಉತ್ತರಗಳು ಸಹ ಚೆಂದ. ‌ವಿರಾಳಾತಿವಿರಳವಾಗಿ ಬರೆಯುವ ಶೋಭಾ ನಾಯ್ಕ ಕನ್ನಡದ ನೆಲದ ಕವಯಿತ್ರಿ.

    ಪ್ರತಿಕ್ರಿಯೆ
  4. ನಾಗರಾಜ್ ಹರಪನಹಳ್ಳಿ. ಕಾರವಾರ

    ಅಭಿನಂದನೆಗಳು ಕವಯಿತ್ರಿ ಶೋಭಾ ನಾಯ್ಕ. ಅವಧಿ ಸಂದರ್ಶನ ಸಮಯೋಚಿತ. ಉತ್ತರಗಳು ಚೆಂದ

    ಪ್ರತಿಕ್ರಿಯೆ
  5. Shobha naik

    ಧನ್ಯವಾದಗಳು ಸರ್. ಅವಧಿ ನನ್ನ ಬರವಣಿಗೆ ಮತ್ತು ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. Gn ಮೋಹನ್ sir ಮತ್ತು ಅವಧಿ ಬಳಗಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ
  6. Shobha naik

    ಧನ್ಯವಾದಗಳು ಸರ್. ನಿಮ್ಮ ಪ್ರತಿಷ್ಠಾನದಿಂದ ಈ ನೆಲದ ‘ಅವ್ವ ಮತ್ತು ಅಬ್ಬಲಿಗೆಗೆ ‘ ಪ್ರಶಸ್ತಿ ಬಂದಿದೆ. ತುಂಬು ಮನದ ವಂದನೆಗಳು ಸರ್.

    ಪ್ರತಿಕ್ರಿಯೆ
  7. Shobha naik

    ಥ್ಯಾಂಕ್ಸ್ ನಾಗರಾಜ್ ಸರ್. ನಿಮ್ಮ ಪ್ರೋತ್ಸಾಹ ಸದಾ ಬಯಸುವೆ. ಅವ್ವ ಮತ್ತು abbaligeyalli ಲಂಕೇಶರ ನಗರ ವಾಸಿ ಅವ್ವನ್ನನ್ನು ಕಂಡಂತಾಯಿತು ಎಂದು ಬರೆದವರು ನೀವು. ನಿಮ್ಮ ಆ ವಿಮರ್ಶೆಗೆ ಗೌರವ ಸಿಕ್ಕಂತಾಗಿದೆ ಸರ್. ಧನ್ಯವಾದಗಳು

    ಪ್ರತಿಕ್ರಿಯೆ
  8. Gopal Naik

    ಅಭಿನಂದನೆಗಳು ಸಹೋದರಿ . ನಿಮ್ಮ ಮೊದಲ ಸಾಹಿತ್ಯದ ಕಂದಾ ನಾಡಿನಲ್ಲೆಡೆ ಹೆಸರು ಮಾಡಿದೆ. ಇನ್ನೂ ನೂರಾರು ಕಂದಮ್ಮಗಳು ನಿಮ್ಮ ಚಿತ್ತ ಹಸ್ತದಿಂದ ಮೂಡಿಬರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: