ಶೋಭಾ ದಿನೇಶ್
ನನ್ನೂರಿಗೆ ಮೊದಲ ಮಳೆಯ ಆಗಮನ..
ಬೇಡವೆಂದರೂ ಎದೆಯಲ್ಲಿ ಮರೆತ ಗೆಳೆಯನ
ನೆನಪುಗಳ ಸಿಂಚನ…
ಥೇಟ್ ಮಳೆಯಂತೆಯೇ ಅವನ ಪ್ರೀತಿ..
ಯಾವ ಸುಳಿವು ನೀಡದೆ ಬಂದೆರೆಗುವ
ಮುಂಗಾರಿನ ಮಳೆಯ ರೀತಿ…
ಒಮ್ಮೊಮ್ಮೆ ಭೋರ್ಗರೆತ, ಮಗದೊಮ್ಮೆ ತಣ್ಣನೆಯ ಸೆಳೆತ…
ಸದ್ದಿಲ್ಲದೇ ಹರಿದುಹೋದ..
ಜೊತೆಯಲ್ಲೇ ಕೊಂಡೊಯ್ದ ನನ್ನ ಹೃದಯ ಬಡಿತ…








ಇಲ್ಲಿ ಲಯ ಎಷ್ಟು ಚೆನ್ನಾಗಿದೆ. ಈ ಕವಿತೆಯನ್ನು ಎಕ್ಸ್ಪಾಂಡ್ ಮಾಡಿದರೆ ಇನ್ನೂ ಸೊಗಸಾಗಿರುತ್ತದೆ ಅಂತ ಅನ್ನಿಸಿತು.
Thank u Kavya madam…
ಕವಿತೆಯ ಅಷ್ಟೇ ವೇಗವಾಗಿ ಮುಗಿದು ಹೋಗಿದೆ. ಗೆಳೆಯ ಬಂದು ಹೋದ ಕೆಲವೇ ಗಳಿಗೆಯಷ್ಟೆ. ಅವನನ್ನು ಮತ್ತೆ ನೆನಪಿನ ಹಾಯಿ ದೋಣಿಗೆ ಕುಳ್ಳಿರಿಸಿ ಕರೆದು ತನ್ನಿ. ಕವಿತೆಯ ಎರಡನೇ ಭಾಗ ಮುಂದುವರೆಯುವುದು. ಕೊಂಡೊಯ್ದ ಹೃದಯ ಬಡಿತ ಮತ್ತೆ ಮಿಡಿಯಲು ಆರಂಭಿಸುವುದು. ಲಯ ಚೆನ್ನಾಗಿ ಹಿಡಿದಿದ್ದೀರಿ.
ಹೋದ ಪುಟ್ಟ ಬಂದ ಪುಟ್ಟ…
ನಿಮ್ಮ ಕವಿತೆಯ ಸ್ಪಷ್ಟ.
ಇನ್ನಷ್ಟು ಬಿಚ್ಚಿಡಿ ಗೆಳೆಯನ ಸಿಕ್ಕಿನ ಕಟ್ಟ…
‘ಅಂದಾ’ಗುವುದು ಈ ಪ್ರೀತಿಯ ಗುಟ್ಟಿನ ರಟ್ಟ.