ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೀಲಾ ಗೌಡರ ಕವಿತೆ – ಮೌನಾಗ್ನಿ..

ಶೀಲಾ ಗೌಡರ

ಮೌನಕ್ಕೆ ನಾನಾರ್ಥವಂತೆ!
ಅದು ಶಕ್ತಿಯಂತೆ!
ಅದು ಯುಕ್ತಿಯಂತೆ!
ಅದು ತಾಳ್ಮೆಯಂತೆ!
ಅಯ್ಯೋ ಇದೆಲ್ಲಾ ಅವಳಿಗೆ ಅರ್ಥವಾಗುವುದಿಲ್ಲ.
ಅವಳು ಶರಧಿಯಾಗಿದ್ದಾಳೆ,
ನದಿಗಳ ಹೊಡೆತ ಸಹಿಸಿ ಸಹಿಸಿ.//

ಅವಳ ಮೌನಕ್ಕೆ ನಾನಾರ್ಥ ಕಲ್ಪಿಸಬೇಡಿ.
ಅದು ಸೋಲಂತೆ!
ಅದು ಅಸಹಾಯಕತೆಯಂತೆ!
ಅದು ಮಡುಗಟ್ಟಿದ ನೋವಂತೆ!
ಇದರ ಬಗ್ಗೆ ಅವಳು
ಯೋಚಿಸಿಯೇ ಇಲ್ಲ.
ಅವಳು ಯಜ್ಞ ಮಾಡಿದ್ದಾಳೆ,
ಆಸೆ ಕನಸುಗಳ ಹವಿಸ್ಸು ಹಾಕಿ//

ಅವಳ ಮೌನಕ್ಕೆ ಕರುಬಬೇಡಿ.
ಅದು ಅಹಂ ಅಂತೆ!
ಅವಳ ಆಸ್ಮಿತೆಯಂತೆ!
ಸ್ವಾಭಿಮಾನವಂತೆ…!
ಛೆ! ಹಾಗೆಂದರೇನು?
ತಿಳಿದಿಲ್ಲ ಅವಳು,
ದಡ ಸೇರಿಸಬೇಕಿದೆ ನೌಕೆಯನ್ನು.
ಎಂತದೇ ಬಿರುಗಾಳಿಗೂ
ಹೆದರದೇ ಹುಟ್ಟು ಹಾಕುತ್ತಿದ್ದಾಳೆ
ಕದಲದ ಗುರಿಯಲಿ
ಅಲೆಯ ಏರಿಳಿತಗಳ
ದಾಟುತ್ತಿದ್ದಾಳೆ.//

‍ಲೇಖಕರು avadhi

1 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading