ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಯೋಗಿ ಕಳ್ಳಿಮಠ ಹೊಸ ಕವಿತೆ- ಕೆಲವು ಶಾಯರಿಗಳು…

ಶಿವಯೋಗಿ ಕಳ್ಳಿಮಠ

೧.
ಸಾವೇ ತಬ್ಬಿದ್ದರು
ಹೋರಾಡುತ್ತಿದ್ದೆ
ಬಿಡಿಸಲಿ ಹೇಗೆ,
ಅವಳು
ಬೇರೆ ಬೆರಳು ಹಿಡಿದ್ದಿದಳು..

೨.
ಬೇಡಿದ್ದು ಹಾರೈಕೆಯಾದರೂ
ಸಿಕ್ಕಿದ್ದು ಶಾಪ.
ದಯಪಾಲಿಸಿದ್ದು
ನೀನು
ಅನ್ನುವುದರಲ್ಲೇ
ಸಂತಸವಿದೆ.

೩.
ಹೋಗುವುದು ಹೋಗುತ್ತಿಯಾ
ಒಂದು ಉಪಕಾರ ಮಾಡು.
ನಿನ್ನ ಸಲುವಾಗಿ
ನನ್ನ ಎಲ್ಲರನ್ನು
ಎಂದೋ
ಬಿಟ್ಟಾಗಿದೆ ನಾನು.
ನನ್ನ ಹೆಣಕ್ಕೆ ಮಣ್ಣು ಚೆಲ್ಲಿ ಹೋಗು.

೪.
ನನ್ನ ನೋವು ನೀನಲ್ಲದೆ
ಮತ್ತಾರು ಅರಿಯಲು ಸಾಧ್ಯ.
ಕೊಟ್ಟವಳು ನೀನಾದ್ದರಿಂದ
ನೀನಗೆ ಸರಿಯಾಗಿ ಗೊತ್ತಿರುತ್ತದೆ.
ಕಟ್ಡಿಸಿದವರಿಗೆ ಮನೆಯ ವಿಳಾಸ
ಪಕ್ಕಾ ಇರುತ್ತದೆ.

೫.
ನಾಲ್ಕು ಸೇತುವೆಗಳಿರುವ
ಊರಲ್ಲಿ ಇದ್ದೇನೆ ನಾನು.
ಇತ್ತೀಚಿಗೆ ಅವಳು
ಸಂಪರ್ಕಕ್ಕೆ ಸಿಗುತ್ತಿಲ್ಲ.
ಎಂತಹ ಹುಚ್ಚ ನೋಡಿ
ನಾನು.
ಅವಳ ದಾರಿ ಬದಲಿಸಿದ್ದರು
ಇಲ್ಲೇ ಕಾಯುತಿದ್ದೇನೆ.

೬.
ನೀ ಜೊತೆಗಿದ್ದಾಗ
ನಿನ್ನ ನಶೆಯಲ್ಲಿರುತ್ತಿದ್ದೆ.
ಈಗ ಸರಾಯಿಯಲ್ಲಿ.
ಲೋಕ ಆವಾಗಲೂ ಆಡಿಕೊಳ್ಳುತ್ತಿತ್ತು
ಮತ್ತು ಈಗಲೂ.
ಆವಾಗ ಹುಚ್ಚ ಎನ್ನುತ್ತಿತ್ತು.
ಈಗ ಕುಡುಕ.

೭.
ಈ ಜಡಿ ಮಳೆಯಲ್ಲಿ
ಇಬ್ಬರೂ ನೆನಪಾಗುತ್ತಾರೆ
ನನಗೆ.
ಅವಳು ಮತ್ತು ಸರಾಯಿ
ಒಬ್ಬರು ನೋವಿಗೆ
ಇನ್ನೊಬ್ಬರು
ಅದರ ಉದ್ದೀಪನಕ್ಕೆ.

೮.
ನೀನು ಅವಸರಿಸಿದೆ.
ನಾನು ಆಲಸ್ಯ ಮಾಡಿದೆ.
ಇಬ್ಬರು ಸರಿ ಇದ್ದರೆ
ಸಾವ ವರೆಗೂ ಜೊತೆಗೆ
ಬದುಕ ಬಹುದಿತ್ತು.
ಈಗ ನೋಡು
ಸತ್ತಂತೆ ಬದುಕಬೇಕಿದೆ.

೯.
ನಿನ್ನ ಹಾಗೆ ಇನ್ನೊಬ್ಬರು
ಸಿಗಲಿಲ್ಲ ನಿಜ.
ಅದರೆ
ನೀ ಎಲ್ಲಿ ಬಿಟ್ಟು ಹೋಗಿದ್ದೆಯೋ
ನಾ ಅಲ್ಲೇ ನಿಂತಿದ್ದೆನೆ.
ಬೇರೆಲ್ಲೂ ಹೋಗಿಲ್ಲ.
ಬೇರೆನೂ ನೋಡಿಲ್ಲ.

೧೦.
ಮಳೆ ಬೇಡಿದೆ
ಸಿಡಿಲಷ್ಟೇ ಕೊಟ್ಟೆ
ಬೇಸರವಿಲ್ಲ..ದೇವರೆ
ನೀನು ನನ್ನನ್ನು
ಜೀವಂತವಿದ್ದಾನೆಂದು ತಿಳಿದೆಯಲ್ಲ
ಅಷ್ಟೇ ಸಾಕು.

೧೧.
ಬರೀ ನ್ಯಾಯವಾದುದನ್ನೇ
ಕೇಳಬೇಕೆನು ?
ದೇವರನ್ನು.
ಬರೀ ನ್ಯಾಯವಾದದ್ದನ್ನೇ
ಮಾಡಿರುವನೇನು
ದೇವರು..

‍ಲೇಖಕರು Admin

4 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading