ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಯೋಗಿ ಕಳ್ಳಿಮಠ ಕವಿತೆ- ವಿದಾಯ…

ಶಿವಯೋಗಿ ಕಳ್ಳಿಮಠ

ಹೋಗುವುದೆಂದರೆ
ಕೈ ಬಿಸಿ ಹೋದಷ್ಟೇನು ಸುಲಭವಲ್ಲ..

ಉಸಿರಿನ ಗಾಳಿ ದಸಕ್ಕೆಂದು ನಿಂತಂತೆ.
ನೆನಪು ಉಕ್ಕಿ
ನೋವು ಉಮ್ಮಳಿಸಿ
ನೆಲದಾದರ ತಪ್ಪಿ ದಂತೆ
ಕಳವಳ.
ಬಾಂಡಲಿಯಲ್ಲಿ ಮನಸು.
ಜಾತ್ರೆಯಲಿ ಅಮ್ಮನ ಕೈ ತಪ್ಪಿ,
ದುರಂತ ಕೂಸು.

ಒದ್ದೆ ಕಣ್ಣ ಹಿಂದೆ ಬೇಯುತ್ತಿದೆ ಜೀವ.
ಆಪ್ತ ಆಸರೆ ಕಳಕೊಂಡ ಅನಾಥ ಭಾವ.
ಕಾಲ ಸ್ತಬ್ಧಗೊಂಡು,
ನಿಗಿನಿಗಿ ಕೆಂಡದ ಜೀವನ ಪ್ರೀತಿ
ಕಡಿಮೆಯಾಗಿ.ಓಕುಳಿಯ
ಉತ್ಸಾಹವಿನ್ನು ಸವಕಳಿಯ ಸರಕು.
ಇಲ್ಲಿಯ ಮಳೆ, ಗಾಳಿ, ಮಣ್ಣು
ಮರ ಹುಲ್ಲು ಹಸಿರಿಗಿನ್ನು ನಾನು ಅನಾಮಿಕ.
ನನ್ನದೆಂದು ಬಿಗುತ್ತಿದ್ದ ಎಲ್ಲದರಿಂದ ನಾನು
ಅಪರಿಚಿತ.
ಬೆನ್ನ ತಿರುಗಿಸಿ ಮುನ್ನೆಡೆದರು
ಹಿಂದೆ ನೋಡುತಿದೆ ಮನಸು.

ಆಗಬಹುದು ಸಾಗರ ಸಂಗಮ
ಮರೆಯಲಾದೀತೆ ನದಿಗೆ ಉಗಮ.
ಇದೆಲ್ಲ ಬಿಟ್ಟು ಮೊದಲನಂತಾಗಲಿ‌
ಎಂದು ಕೊರಗುತ್ತಿದ್ದೇನೆ.
ಹು ಇಲ್ಲಿಂದಾಚೆ ಜೀವನ ಏನೋ?

‍ಲೇಖಕರು Admin

26 June, 2022

4 Comments

  1. Nitish

    ಬಹುಶಃ ನಾವು ಒಬ್ಬರೇ ಆಗುತ್ತೇವೆ ಸರ್

    • Shivayogi kallimath

      ಧನ್ಯವಾದಗಳು

  2. Nitish

    ನಿಮ್ಮ ಕವಿತೆ ಯಲ್ಲಿ ದುಃಖದಲ್ಲಿ ಇರುವ ಮನುಷ್ಯ ನಾ ಒಂದು ಭಾಗ ಕಾಣಸುತ್ತದೆ.
    (ಕವಿತೆ ಸುಂದರವಾಗಿದೆ ಸರ್)❤️

    • Shivayogi kallimath

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading