ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಯೋಗಿ ಕಳ್ಳಿಮಠ ಕವಿತೆ- ಬಂಧಿಗಳು…

ಶಿವಯೋಗಿ ಕಳ್ಳಿಮಠ

ಹತ್ತಿರದ ಪಟ್ಟಣದಿಂದ
ಹಳ್ಳಿಯಲ್ಲಿರುವ
ಅವ್ವ ಅಪ್ಪನ‌ ನಾನು
ನೋಡಿಕೊಂಡ ಹಾಗೆ.
ಈಗ,
ಮಗ
ವಿದೇಶದಿಂದ ಪೊರೆಯುತ್ತಾನೆ
ನಮ್ಮನ್ನ.

ಮಾತಿಗೆ ಹೆದರದವರಂತೆ
ಬರಿದೆ ಎಲ್ಲದಕ್ಕೂ
ದೊಡ್ಡದಾಗಿ ನಕ್ಕು
ಮುಗಿಸುತ್ತೇವೆ
ವಿಡಿಯೋ ಕಾಲ್‌ಗಳ.

ಮಗ ಮಾತಾಡಿಸಿದರೆ
ಸಿಡುಕುವ ಬ್ಯಾಂಕ್ ಕ್ಯಾಷಿಯರ್
ಸೊಸೆ ಧಾರವಾಹಿ ಲಿಪ್ಸ್ಟಿಕ್
ನಗುವಿನ ಗೃಹಿಣಿ.
ಮೊಮ್ಮಗ ಜಾಹೀರಾತಿನ
ಪೌಡರ್ ಮಗು …
ಹಾಗೆ ಅನಿಸಿ
ಸಂಬಂಧವೆಂಬುದು
ಮೋಡದಾಚಿಗಿನ ವಿಮಾನ
ಮತ್ತು ಅದರ ಶಬ್ದ.

ಮೊಮ್ಮಗನ ಪಾದಗಳ
ಮುಟ್ಟಲು ಕಾತರಿಸುವ
ನನ್ನ ಬೆರಳಿನ ಆರ್ದ್ರತೆಯ
ಕ್ಯಾಮರಾ ವರ್ಗಾಯಿಸುವುದೇ
ಇಲ್ಲ.
ಸಹಜ ಪ್ರೀತಿ ಸವಲತ್ತುಗಳ
ಎಣಿಸುವುದಿಲ್ಲ.

‍ಲೇಖಕರು Admin

14 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading