ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಹಾವೇರಿ ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

29

ಹಾವೇರಿ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳು ಕನಿಶ್ಟ ಇಪ್ಪತ್ನಾಲ್ಕು ಮತ್ತು ತಾಯ್ಮಾತುಗಳು ನಲ್ವತ್ತೆಂಟು. ಜಿಲ್ಲೆಯ ಅತಿದೊಡ್ಡ ಬಾಶೆ ೭೭% ಪ್ರತಿಶತ ಮಾತುಗರನ್ನು ಹೊಂದಿರುವ ಕನ್ನಡವಾಗಿದೆ. ಉರ‍್ದು ೧೮% ಮಂದಿ ಮಾತುಗರನ್ನು ಹೊಂದಿದೆ. ಲಂಬಾಣಿ ಜಿಲ್ಲೆಯ ದೊಡ್ಡ ಬಾಶೆಗಳಲ್ಲಿ ಒಂದಾಗಿದೆ. ಅದರೊಂದಿಗೆ ತೆಲುಗು ಕೂಡ ಪರಿಗಣಿಸುವಶ್ಟು ಮಂದಿ ಮಾತುಗರನ್ನು ಜಿಲ್ಲೆಯಲ್ಲಿ ಹೊಂದಿದೆ.

***

ಜನಗಣತಿ ಒದಗಿಸಿರುವ ಹಾವೇರಿ ಜಿಲ್ಲೆಯಲ್ಲಿ ಇರುವ ಬಾಶೆಗಳ ಮಾಹಿತಿಯನ್ನು ಇಲ್ಲಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಬೆಂಗಾಲಿ301911
ಬೆಂಗಾಲಿ301911
ಗುಜರಾತಿ615323292
ಗುಜರಾತಿ312164148
ಸವರಾಶ್ಟ್ರ/ಸವರಾಶ್ಟ್ರಿ321
ಇತರ300157143
ಹಿಂದಿ503922592324469
ಬಂಜಾರಿ231211
ಬೋಜ್ಪುರಿ21813
ಹಿಂದಿ394921141835
ಲಮಾಣಿ/ಲಂಬಾಡಿ453992325022149
ಮಾರ‍್ವಾರಿ714382332
ರಾಜಸ್ತಾನಿ255139116
ಇತರ311813
ಕನ್ನಡ1234821633339601482
ಕನ್ನಡ1234307633073601234
ಕುರುಬ/ಕುರುಂಬ1174
ಪ್ರಾಕ್ರುತ/ಪ್ರಾಕ್ರುತ ಬಾಶಾ1064
ಇತರ493253240
ಕಾಶ್ಮೀರಿ211
ಕಾಶ್ಮೀರಿ211
ಕೊಂಕಣಿ225511201135
ಕೊಂಕಣಿ218710761111
ಕುಡುಬಿ/ಕುಡುಂಬಿ352510
ನವಾಯಿತಿ321814
ಇತರ110
ಮಯ್ತಿಲಿ1183
ಮಯ್ತಿಲಿ1183
ಮಲಯಾಳಂ276144132
ಮಲಯಾಳಂ267139128
ಯರವ954
ಮರಾಟಿ954348554688
ಆರೆ110
ಮರಾಟಿ954248544688
ನೇಪಾಲಿ341915
ನೇಪಾಲಿ341915
ಓಡಿಯಾ332211
ಓಡಿಯಾ19127
ಇತರ14104
ಪಂಜಾಬಿ392019
ಪಂಜಾಬಿ392019
ಸಂಸ್ಕ್ರುತ110
ಸಂಸ್ಕ್ರುತ110
ಸಿಂದಿ301614
ಕಚ್ಚಿ301614
ತಮಿಳು656361295
ಕೊರವ231310
ತಮಿಳು623341282
ಇತರ 1073
ತೆಲುಗು1557579027673
ತೆಲುಗು1532177787543
ವಡರಿ202
ಇತರ252124128
ಉರ‍್ದು282850144784138066
ಉರ‍್ದು282847144782138065
ಇತರ321
ಬಿಲಿ/ಬಿಲೊಡಿ853
ಇತರ853
ಕೂರ‍್ಗಿ/ಕೊಡಗು593029
ಕೂರ‍್ಗಿ/ಕೊಡಗು633
ಕೊಡವ532726
ಇಂಗ್ಲೀಶು543123
ಇಂಗ್ಲೀಶು543123
ಹಲಬಿ201010
ಇತರ201010
ಟಿಬೆಟನ್330
ಟಿಬೆಟನ್330
ತುಳು279145134
ತುಳು273141132
ಇತರ642
ಇತರ824735

ಹಾವೇರಿ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಇಪ್ಪತ್ಮೂರು. ಇತರ ಎಂಬ ಒಂದು ಗುಂಪು ದಾಕಲಾಗಿದ್ದು ಇದರಲ್ಲಿ 82 ಮಾತುಗರ ದಾಕಲೆ ಆಗಿದೆ. ಹಾಗಾಗಿ ಇದನ್ನು ಒಂದು ಬಾಶೆ ಎಂದು ಎಣಿಸಿ ಹಾವೇರಿ ಜಿಲ್ಲೆಯ ಬಾಶೆಗಳು ಇಪ್ಪತ್ನಾಲ್ಕು ಎಂದು ಹೇಳಬಹುದು. ನಲ್ವತ್ತೇಳು ತಾಯ್ಮಾತುಗಳನ್ನು ಇದರಲ್ಲಿ ಪಟ್ಟಿಸಿದೆ. ಇತರ ಎಂಬ ಬಾಶೆಯ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿ ಒಟ್ಟು ತಾಯ್ಮಾತುಗಳು ನಲ್ವತ್ತೆಂಟು ಎಂದು ಹೇಳಬಹುದು. ಇವುಗಳಲ್ಲಿ ಇತರ ಎಂಬ ಗುಂಪು ಹನ್ನೊಂದು ಬಾಶೆಗಳಲ್ಲಿ ದಾಕಲಾಗಿದೆ. ಇತರ ಎಂಬ ಗುಂಪು ದಾಕಲಾಗಿರುವ ಬಾಶೆಗಳೆಂದರೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಓಡಿಯಾ, ತಮಿಳು, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಹಲಬಿ ಮತ್ತು ತುಳು. ಹೀಗೆ ಇತರ ಎಂದು ದಾಕಲಿಸಿದವುಗಳನ್ನು ಹೊರತುಪಡಿಸಿ ಒಟ್ಟು ಮೂವತ್ತಾರು ತಾಯ್ಮಾತುಗಳನ್ನು ಹೆಸರಿಸಲಾಗಿದೆ.

ಹಾವೇರಿ ಜಿಲ್ಲೆಯ ಒಟ್ಟು ಜನಸಂಕೆ 15,97,668. ಇದರಲ್ಲಿ ಕನ್ನಡ ಮಾತಾಡುವ ಸಂಕೆ ದೊಡ್ಡದಾಗಿದೆ. ಕನ್ನಡ ಮಾತುಗರು 12,34,821 ಇದ್ದು ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಇದಾಗಿದೆ. ಇದು ಒಟ್ಟು ಜಿಲ್ಲೆಯ 77.288% ಆಗುತ್ತದೆ. ಉರ‍್ದು ಜಿಲ್ಲೆಯ ಎರಡನೆ ಅತಿದೊಡ್ಡ ಬಾಶೆಯಾಗಿದ್ದು 2,82,850 (17.703%) ಮಾತುಗರನ್ನು ಹೊಂದಿದೆ. ಒಂದು ಲಕ್ಶಕ್ಕಿಂತ ಹೆಚ್ಚು ಮಾತುಗರಿರುವ ಒಂದೆ ಬಾಶೆ ಇದಾಗಿದೆ. ಒಂದು ಲಕ್ಶಕ್ಕಿಂತ ಕಡಿಮೆ ಮಂದಿ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಎರಡು ಬಾಶೆಗಳು ಜಿಲ್ಲೆಯಲ್ಲಿ ದಾಕಲಾಗಿವೆ, ಹಿಂದಿ – 50,392 (3.154%) ಮತ್ತು ತೆಲುಗು – 15,575 (0.974%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಮರಾಟಿ – 9,543 (0.597%) ಮತ್ತು ಕೊಂಕಣಿ 2,255 (0.141%) ಬಾಶೆಗಳಿಗೆ ಇದ್ದಾರೆ. ನಾಲ್ಕು ಬಾಶೆಗಳಿಗೆ, ತಮಿಳು, ಗುಜರಾತಿ, ತುಳು ಮತ್ತು ಮಲಯಾಳಂ ಇವುಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಒಟ್ಟು ಹದಿನಾಲ್ಕು ಬಾಶೆಗಳು ದಾಕಲಾಗಿವೆ. ಹಾವೇರಿ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಪಟ್ಟಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ12,34,821 77.288%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,82,850 17.703%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ50,3923.154%
’’ತೆಲುಗು15,575 0.974%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ 9,5430.597%
’’ಕೊಂಕಣಿ2,255 0.141%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ತಮಿಳು, ಗುಜರಾತಿ, ತುಳು, ಮಲಯಾಳಂ18260.114%
ನೂರಕ್ಕಿಂತ ಕಡಿಮೆಹದಿನಾಲ್ಕು ಬಾಶೆಗಳು4060.025%
ಒಟ್ಟು ಮಾತುಗರು15,97,668100%

ಹಾವೇರಿ ಜಿಲ್ಲೆಯಲ್ಲಿನ ತಾಯ್ಮಾತುಗಳನ್ನು ಈಗ ಗಮನಿಸಬಹುದು. ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ಕೆಲವು ಮುಕ್ಯವಾದ ಬದಲಾವಣೆಗಳು ಆಗುತ್ತವೆ. ಹಿಂದಿ ಬಾಶೆಯನ್ನು ಈಗ ಮೊದಲಿಗೆ ಗಮನಿಸಬಹುದು. ಹಿಂದಿಯಲ್ಲಿ ದಾಕಲಾದ ಮಾತುಗರು 50,392. ಆದರೆ, ಇದರಲ್ಲಿ ಬಹುತೇಕ ಲಂಬಾಣಿ ಮಾತುಗರು ಇರುವುದನ್ನು ಗಮನಿಸಬೇಕು. ಲಮಾಣಿ ಹೆಸರಿನ 45,399 ಮತ್ತು ಬಂಜಾರಿ ಹೆಸರಿನಲ್ಲಿರುವ 23 ಮಾತುಗರನ್ನು ಸೇರಿಸಿದಾಗ ಲಂಬಾಣಿ ಮಾತಾಡುವವರ ಸಂಕೆ 45,422 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 90.137% ಆಗುತ್ತದೆ ಮತ್ತು ಜಿಲ್ಲೆಯ 2.843% ಆಗುತ್ತದೆ. ಹಿಂದಿ ಮಾತಾಡುವವರು ಕೇವಲ 3,949 ಮಂದಿ ಇದ್ದಾರೆ. ಇದು ಹಾವೇರಿ ಜಿಲ್ಲೆಯ ಹಿಂದಿಯ 7.836% ಮತ್ತು ಜಿಲ್ಲೆಯ 0.247% ಆಗುತ್ತದೆ. ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವಾಗುವ ಹಿಂದಿಯೊಳಗಿರುವ ಇತರ ಬಾಶೆಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಕಡಿಮೆ ಸಂಕೆಯ ಮಾತುಗರು ದಾಕಲಾಗಿದ್ದಾರೆ. ಈ ಮೇಲಿನ ಪಟ್ಟಿಯಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರ ಮಂದಿಗಿಂತ ಹೆಚ್ಚು ಮಾತುಗರು ಇರುವ ಪಟ್ಟಿಗೆ ಹಿಂದಿಯ ಬದಲಾಗಿ ಲಂಬಾಣಿ ಬರುತ್ತದೆ. ಹಿಂದಿ ಹತ್ತು ಸಾವಿರ ಮಾತುಗರಿಗಿಂತ ಕಡಿಮೆ ಮಂದಿ ಇರುವ ಬಾಶೆಗಳ ಪಟ್ಟಿಗೆ ಇಳಿಯುತ್ತದೆ. ತಾಯ್ಮಾತುಗಳ ಅಂಕಿಸಂಕೆಯನ್ನು ಮತ್ತು ಇದುವರೆಗಿನ ಚರ್ಚೆಯನ್ನು ಆದರಿಸಿ ಮೇಲಿನ ಬಾಶೆಗಳ ಪಟ್ಟಿಯನ್ನು ಮತ್ತೊಮ್ಮೆ ಬಿಡಿಸಿ ಕೊಟ್ಟಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ12,34,30777.256%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,82,84717.703%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಲಂಬಾಣಿ45,4222.843%
’’ತೆಲುಗು15,3210.958%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ9,5420.597%
’’ಹಿಂದಿ3,9490.247%
’’ಕೊಂಕಣಿ2,1870.136%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಹಾವೇರಿ15,97,668ಕನ್ನಡ12,34,30777.256%1
ಉರ‍್ದು2,82,84717.703%2
ಲಂಬಾಣಿ45,4222.843%3
ತೆಲುಗು15,3210.958%4
ಮರಾಟಿ9,5420.597%5
ಹಿಂದಿ3,9490.247%6
ಕೊಂಕಣಿ2,1870.136%7
ಮಾರ‍್ವಾರಿ7140.044%8
ತಮಿಳು6230.038%9
ಗುಜರಾತಿ6150.038%10

‍ಲೇಖಕರು Admin

September 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: