ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಬ್ದಗಳಲ್ಲಿ ಕಟ್ಟಿಕೊಟ್ಟ ಬದುಕಿಗಿರುವುದು ಅಲ್ಪಾಯುಷ್ಯ..

ಶ್ರೀವಿಭಾವನ

1
ಅಕ್ಷರಗಳು ಸೋತಾಗಲಷ್ಟೆ ತಿಳಿದದ್ದು,
ಪ್ರತಿಕ್ಷಣದ ಬದುಕನ್ನು ಶಬ್ದಾಲಂಕಾರದಲ್ಲಿ
ಬಂಧಿಸುವುದು ಬರೀ ಭ್ರಮೆ
ಶಬ್ದಗಳಲ್ಲಿ ಕಟ್ಟಿಕೊಟ್ಟ ಬದುಕಿಗಿರುವುದು ಅಲ್ಪಾಯುಷ್ಯ
2

ಮಾತಿನದ್ದೆ ಅಬ್ಬರ…
ಶಬ್ದಗಳಲ್ಲಿ ಕಳೆದು ಹೋಗಿದೆ ಎಲ್ಲವೂ!
ಒಂದಿಷ್ಟು ವಿಷಾದ-ಮೌನದೊಂದಿಗೆ
ಬದುಕ ಮುಖಾಮುಖಿ ಬೇಕಿದೆ…
ಕತ್ತಲ ರಾತ್ರಿಯ ನಡಿಗೆಯಂತೆ.

3

ಅಕ್ಷರಗಳ ಅಕಾಲ  ನೆರೆ
ಹತ್ತು ಪದಗಳ ಕೂಡಿಸಿ-ಕಳೆದರೂ

ಏನೂ ಧ್ವನಿಸುತ್ತಿಲ್ಲ
ಮೇರೆ ಮೀರಿ ಹರಿದು ಬತ್ತಿ ಹೋದ ನದಿಯಂತೆ
ಸ್ಮಶಾನದಲ್ಲಿ ಕೇಳಿ ಬಂದ ನಿಟ್ಟುಸಿರಿಗಿಂತ ಕಡೆ

4
ಸರಳ ಪದಪುಂಜಗಳನ್ನು ಹುಡುಕುತ್ತಿದ್ದೇನೆ.
ಬಣ್ಣಗಳ ಭಾರವಿಲ್ಲದೆ
ಯಾವುದೋ ಪುಸ್ತಕದಲ್ಲಿ ಅನಾಥವಾಗಿ
ಆಸ್ತಿತ್ವ ಕಳೆದುಕೊಂಡಿರುವ ಈ ಅಕ್ಷರಗಳನ್ನು
ಮತ್ತೊಮ್ಮೆ  ಒಪ್ಪವಾಗಿ ಜೋಡಿಸಿ, ಬದುಕ ಪಾಠಗಳನ್ನು
ಓದಬೇಕಿದೆ.
ಬರೀ ಕಪ್ಟು-ಬಿಳಿಪಿನಲ್ಲಿ ಎಲ್ಲವನ್ನೂ ಮತ್ತೆ ಅಚ್ಚೊತ್ತುವ ಕನಸು

‍ಲೇಖಕರು avadhi

31 January, 2020

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading