ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಶತಮಾನಗಳುರುಳಿವೆ ಕುಸುಮಬಾಲೆಯ ನೆನಪಿನಲ್ಲಿ…'

ಕಲ್ಲು ಕರಗಿದೆ…

ರಮೇಶ್ ಹಿರೇಜಂಬೂರ್

ಕನಸಿನ ಕನ್ಯೆ
ಕಣ್ಣೆದುರು ಬಂದು
ಬಳಿ ಸಾರಿ ನಿಂದು
ಕರಗಿದವು ಮನ ಮೌನವಾಗಿ ||
 
ಅವಳ ಕಂಡ ಮೊದಲ ಕ್ಷಣ
ಎದೆಯಾಳದಲೆಲ್ಲ ತಲ್ಲಣ
ಕಣ್ಮರೆಯಾಗಿ ಹೋದಾಗ
ಎಲ್ಲೆಲ್ಲೂ ಕಣ್ಣೀರರಾಗ
 
ಗುಬ್ಬಚ್ಚಿ ಗೂಡಿನಲ್ಲಿ
ಬೆಚ್ಚಗೆ ಮಲಗಿದ್ದ ಪ್ರೀತಿ
ಕೂಗಿ ಕರೆತಂದಿದೆಯವಳ…
ಹೃದಯಮಿಡಿತ ಅರಿಯಲೆಂದು

ಶತಮಾನಗಳುರುಳಿವೆ
ಕುಸುಮಬಾಲೆಯ ನೆನಪಿನಲ್ಲಿ
ಅವಳಿನ್ನು ಕನಸಲ್ಲ !
ಬಾಳ ಕಾವ್ಯದ ಸಂಗಾತಿ
 
ಅವಳೆದೆಯ ಭಾರ
ನನ್ನೆದೆಯ ಘೋರ
ಮಿಲನ ಮಾಧುಯ೵ ಸಾರ
ಹೃದಯಗಳೀಗ ಹಗುರ ||
 
ಶತಮಾನಗಳ ಶಾಪ ಸರಿದು
ಕಲ್ಲು ಕರಗಿದೆ ಸೌಮ್ಯವಾಗಿ
ಮನವೀಗ ಮೊಗ್ಗಾಗಿ
ಅರಳುತಿದೆ ದುಂಡು ಮಲ್ಲಿಗೆಯಾಗಿ ||
 
ಹಚ್ಚನೆಯ ಕಾನನದಲ್ಲಿ
ಹಸನಾಗಲಿ ಪ್ರೀತಿ
ವಿರಹವೆಲ್ಲ ದೂರಾಗಿ
ಬೆಳಗಲಿ ಜಗದಿ ಪ್ರೇಮಜ್ಯೂತಿ ||
 
ಮನ್ಮಥ ಮನಸೋತು
ರತಿ ರಾತ್ರಿ ರಂಗಾಗಿ
ರಸಮಯ ಬಾಳ ಹಾದಿ
ಮಾಯವಿನ್ನು ಈ ಮಾಯಾವಿ ಬೇಗುದಿ ||
 

‍ಲೇಖಕರು G

20 June, 2014

2 Comments

  1. mmshaik

    uttama kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading