ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಕುನಿಗೆ ಖಚಿತವಾಗಿತ್ತು..

Invited

ಮಹಾಭಾರತ

ಮಲಯಾಳಂ ಕವಿ ಸಚ್ಚಿದಾನಂದನ್ ಅವರ ‘ಮಹಾಭಾರತಂ’ ಕವನದ ಅನುವಾದ

೧೨೧

ರಶ್ಮಿ ಕಾಸರಗೋಡು

1

ಈ ಬಾರಿ ಕೌರವರೇ ಗೆಲ್ಲುತ್ತಾರೆಂದು
ಶಕುನಿಗೆ ಖಚಿತವಾಗಿತ್ತು
ಗುರುಗಳನ್ನೆಲ್ಲಾ
ಬಾಯ್ಮುಚ್ಚಿಸಿದ
ದುರ್ಯೋಧನನ ಜಾಣ್ಮೆ
ಅವರಿಗೇ ಗೊತ್ತು

dice game

ಯುದ್ದ ಗೆಲ್ಲುವುದು
ಯುದ್ಧ ಮಾಡುವವರಲ್ಲ
ಯುದ್ಧ ಮಾಡಿಸುವವರು

ಅವರಿನ್ನು ಪ್ರತಿಫಲ
ಕೇಳಬಹುದು
ದಾನಗೈದ ಒಂದೊಂದು ತೇರಿಗೂ ಹತ್ತು ತೇರು
ಒಂದೊಂದು ಕುದುರೆಗೂ ಹತ್ತು ಕುದುರೆ

ಪಾಂಡವರು ಗೆದ್ದಿದ್ದರೆ
ನೀತಿ ಬದಲಾಗುತ್ತಿತ್ತೆ?
ನೀತಿ, ಯುದ್ಧಕ್ಕೆ ಸಂಬಂಧಿಸಿದ್ದೇ ಆಗಿರಲಿಲ್ಲ
ಜಾಣತನದಿಂದ
ಸುಳ್ಳೊಂದನ್ನು ಮಾರಲು
ಯಾರಿಗೆ ಸಾಧ್ಯ ಎಂಬುದಾಗಿತ್ತು
ಮೌನಕ್ಕಿಂತ ಚೆನ್ನಾಗಿ ಸುಳ್ಳೊಂದನ್ನು ಮರೆಮಾಚಲು
ಮಾತಿಗೆ ಸಾಧ್ಯವೆ?
ಈ ಬಾರಿ ಗೊತ್ತಾಗಿದೆ
ಧರ್ಮ ಜತೆಗಿದ್ದರೆ
ಅದು ಜಾದೂ ಮಾಡಬಲ್ಲದು ಎಂದು

mahabharath characters

 

ಯಾರೇ ಗೆದ್ದರೂ
ಸಾಯುವವರು ಒಂದು ತಂಡದವರೇ
ವಿಧವೆಗಳೂ, ಅನಾಥ ಸಂತತಿಗಳೂ
ಅವರದ್ದೇ

ಅಧಿಕಾರದ ನಿಪುಣತೆ ದಕ್ಕಿದಷ್ಟೂ
ಸಾವಿನ ವೇಗ ಏರುತ್ತದೆ
ದಹಿಸುವುದು ಖಾಂಡವ ವನವಾದರೂ
ಲಂಕೆಯಾದರೂ ಹೊಗೆಯ ವಾಸನೆ ಒಂದೇ

ಗಿಳಿಗಳ, ಪ್ರಾಣಿಗಳ
ಮರಗಳ, ವನವಾಸಿಗಳ
ಇನ್ನೆಷ್ಟೋ ಕಾಡುಗಳನ್ನು
ನಿರ್ನಾಮ ಮಾಡಬೇಕಿದೆ
ಅದೆಷ್ಟೋ ಗಣಿಗಳನ್ನು ಅಗೆಯಬೇಕಿದೆ
ಸ್ವಲ್ಪ ಬಲಿ ಕೊಡಬೇಕಾದೀತು
ಕೆಲ ಶವಗಳು ರೆಂಬೆಯಲ್ಲಿ ನೇತಾಡಬಹುದು
ಕೆಲವನ್ನು ಚಟ್ಟದಲ್ಲಿ ಹೊತ್ತೊಯ್ಯಬಹುದು
ಊರು ಕೇರಿ ಗೊತ್ತಿಲ್ಲದ ಅನಾಮಧೇಯ ಜೀವಗಳನ್ನು

ಅದೂ ಪಾಂಡವರು
ಶುರು ಮಾಡಿದ ರೀತಿಯಂತೆಯೇ

ಅಂಧನನ್ನು ಅಂಧನಾಗಿಯೇ ಉಳಿಯುವಂತೆ ಮಾಡಲು
ಸಂಜಯನಿದ್ದಾನಲ್ಲಾ
ಅವನು ಗೆದ್ದವರಿಗೆ ಜೈ ಎನ್ನುವಂತೆ
ಎಲ್ಲವನ್ನೂ ವಿವರಿಸುವನು

ಭಯವಿರುವುದು ದೆವ್ವಗಳದ್ದು ಮಾತ್ರ
ಪಾಂಡವರೂ ಕೌರವರೂ ಕೊಂದ
ಜನರು ಒಂದಾಗಿ ನೆಲ ಮಾಳಿಗೆ-
ಯಿಂದ ಎದ್ದು ಬಂದರೆ?
ಹೊಳೆಗಳನ್ನು ಜೋಡಿಸಬಹುದು
ಆದರೆ ಬೆಟ್ಟಗಳನ್ನೇನು ಮಾಡುವುದು?

ನಿದ್ದೆ ಮಾಡುವವರು ನಿದ್ದೆ ಮಾಡುತ್ತಲೇ
ಇರುತ್ತಾರೆಂದು ನಂಬುವುದಾದರೂ ಹೇಗೆ?
ಪಾಂಡವರನ್ನೂ ಕೌರವರನ್ನೂ ಹೊರದಬ್ಬಿ
ಅವರು ಇತಿಹಾಸ ಬರೆಯುವರೆ?

ಶಕುನಿಗೆ ಅದೂ ಗೊತ್ತು
ಹತ್ತು ವರುಷ, ಅಷ್ಟೇ ಅವರು
ಕೇಳುತ್ತಿರುವುದು…
ಆಮೇಲೆ ಬಡವರು ಉಳಿಯವುದೇ ಇಲ್ಲ
ಹೆಣ್ಣಿಗೆ ಹೆರಲು
ಧೈರ್ಯವಿರುವುದಿಲ್ಲ

‍ಲೇಖಕರು admin

11 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading