ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಕೀಲ್ ಉಸ್ತಾದ್ ಕವಿತೆ – ಸ್ವತಂತ್ರ ಹಕ್ಕಿಗಳು…

ಶಕೀಲ್ ಉಸ್ತಾದ್

ಮಸೀದಿಯ ಮಿನಾರು ಮಂದಿರದ ಗೋಪುರವೂ ನಮ್ಮದು
ಅಂಬರದ ವಾರಸುದಾರರು ನಾವು ಎತ್ತರದ ಪ್ರತಿ ಕಟ್ಟಡವೂ ನಮ್ಮದು

ರಾಮನ ಹೊಲದ ರಹೀಮನು ಬೆಳೆದ ಕಾಳುಗಳೆಲ್ಲವೂ ನಮ್ಮದು
ಇಡೀ ಫಸಲಿನ ಪಾಲುದಾರರು ನಾವು ಇದರ ಪ್ರತಿ ದವಸವೂ ನಮ್ಮದು

ಕೇಸರಿ ನೂಲಿನ ಹಸಿರು ಕೋಲಿನ ಬಾವುಟವೂ ನಮ್ಮದು
ಕಾಮನಬಿಲ್ಲಿನ ಒಡೆಯರು ನಾವು ಅದರ ಪ್ರತಿ ಬಣ್ಣವೂ ನಮ್ಮದು

ಕಮರಿಯ ತೊರೆ ಗಿರಿ-ಶಿಖರವೂ ನಮ್ಮದು
ಈ ನೆಲದ ಉತ್ತರಾಧಿಕಾರಿಗಳು ನಾವು ಇದರ ಕಣ-ಕಣವೂ ನಮ್ಮದು

ನೆಲ-ಜಲ ಅಂಬರ ಇಡಿ ನಿಸರ್ಗವೂ ನಮ್ಮದು
ಉಸ್ತಾದ್ ಹಕ್ಕಿಗಳು ನಾವು ಬೇಟೆಗಾರನ ಬಲೆ ಕಿತ್ತಿ ಹಾರುವ ಸ್ವಾತಂತ್ರ್ಯವೂ ನಮ್ಮದು

‍ಲೇಖಕರು avadhi

12 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading