ಶಕೀಲ್ ಉಸ್ತಾದ್ ಕವಿತೆ- ಸ್ನೇಹ ಸಮ್ಮೇಳನ..

ಶಕೀಲ್ ಉಸ್ತಾದ್

ಸ್ನೇಹ ಸಮ್ಮೇಳನದ ನೆಪದಲಿ
ನಾವು ಗೆಳೆಯರೆಲ್ಲ ಭೂತಕಾಲಕ್ಕೆ ಟೈಮ್ ಟ್ರಾವೆಲ್ ಮಾಡಿ
ಎರಡುವರೆ ದಶಕಗಳ ಹಿಂದೆ ಹೋಗಿದ್ದೇವು
ಅಂಥಹದ್ದೇನ್ನಿತ್ತೊ ಈ ಸಮಯಕ್ಕೆ ಧಾವಂತ,
ಮತ್ತೆ ವರ್ತಮಾನಕ್ಕೆ ತಂದು ನಿಲ್ಲಿಸಿತು
ಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ !

ಗೆಳೆಯನಿಗೆ,
ಬಾಲ್ಯದ ಮುನಿಸಿಗೆ ಕಾರಣ ಕೇಳಬೇಕಿತ್ತು,
ಮಾತುಬಿಟ್ಟದ್ದಕ್ಕೆ ಮರಗುವುದೂ ಬಾಕಿಯಿತ್ತು
ಕೂಡಿ ಆಡಿದ ಆಟದ ಪಟ್ಟಿ ತೋರಿಸಿ ಮತ್ತೆ ನಗಬೇಕಿತ್ತು
ಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ !
ಅಂಥಹದ್ದೇನ್ನಿತ್ತೊ ಇದಕ್ಕೆ ಧಾವಂತ !

ಕೊನೆಯ ಬೆಂಚಿನ ಗೆಳೆಯನ ಲುಕ್ಕಿಗೂ,
ಹುಡುಗಿಯರ ವಿರಾಮವಿಲ್ಲದ ಪಿಸುಮಾತುಗಳ ಗುಟ್ಟಿಗೂ
ಕಾರಣ ಕೇಳಬೇಕಿತ್ತು
ಬಯಲಾದ ಗುಟ್ಟಿಗೆ ಗೊಳ್ಳೆಂದು ಮತ್ತೆ ನಗಬೇಕಿತ್ತು
ಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ !
ಅಂಥಹದ್ದೇನ್ನಿತ್ತೊ ಇದಕ್ಕೆ ಧಾವಂತ !

ಮಡುಗಟ್ಟಿದ ದುಃಖವನ್ನು ಹೊರ ಹಾಕಬೇಕಿತ್ತು
ಮುಡುಪಾಗಿಟ್ಟ ನೆನೆಪುಗಳನು ಎಳೆ-ಎಳೆಯಾಗಿ ಬಿಚ್ಚಿಡಬೇಕಿತ್ತು
ಕಾಲ ಚಕ್ರವನು ತಿರುಗದಂತ ಗಟ್ಟಿ ಹಿಡಿದು ಮತ್ತೆ ಬಾಲ್ಯದಲ್ಲೆ ಇರಬೇಕಿತ್ತು
ಅಂಥಹದ್ದೇನ್ನಿತ್ತೊ ಈ ಸಮಯಕ್ಕೆ ಧಾವಂತ,
ಮತ್ತೆ ವರ್ತಮಾನಕ್ಕೆ ತಂದು ನಿಲ್ಲಿಸಿತು
ಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ !

‍ಲೇಖಕರು avadhi

March 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: