ವಿಶಾಲ್ ಮ್ಯಾಸರ್ ಹೊಸ ಕವಿತೆ- ‘ಒಂದು ಗಳಿಗೆಯ ನಿದ್ದೆ’

ವಿಶಾಲ್ ಮ್ಯಾಸರ್

**

ಆ ಒಂದು ಗಳಿಗೆ

ಅದೆಂತಾ ನಿದ್ರೆ ಹತ್ತಿತ್ತು

ಶತ ಶತಮಾನಗಳ ದಣಿವು

ಕಣ್ಣ ರೆಪ್ಪೆಯ ಮೇಲೆ ಭದ್ರವಾಗಿ 

ಸುಭದ್ರವಾಗಿ ಕುಂತು ಬಿಟ್ಟಿತ್ತು

ಆ ಒಂದು ಗಳಿಗೆ ಹಗಲು ರಾತ್ರಿ

ಪರಿವೆ ಇಲ್ಲದೆ ಆತ್ಮದ ನೊಣಗಳು

ಅಮೃತದ ಬಟ್ಟಲ ಮೇಲೆ ಕುಳಿತು 

ಅಮರತ್ವವ ಕನಸುತಿದ್ದವು

ಆ ಒಂದು ಗಳಿಗೆ ಏನೆಲ್ಲಾವಾಯಿತು

ಕೆಂಭೂತದ ಕನಸಿನಲಿ ನೀಲಲೋಚನೆ

ವೈನು ಕುಡಿಸಿ ಪರಮಹಂಸದ ಸಾಕ್ಷಾತ್ಕಾರಕ್ಕೆ 

ಅನುವು ಮಾಡಿಕೊಟ್ಟಳು 

ಈ ದಿವ್ಯ ನಿದ್ರೆ

ಇದು ಐದು ವರ್ಷದ ಕಲ್ಲಿನ ಗೊಂಬೆಗತ್ತಿದ್ದಲ್ಲ

ಸಿದ್ದ ಪ್ರಸಿದ್ಧರ ಬಂಗಿಯ ಹೊಗೆಯ ನಿಶೆಯೂ ಅಲ್ಲ

ಅವ್ವಾ ನಿನ್ನ ಮಡಿಲ ಸೆರಗ ಹಾಸಿನಲಿ

ತಂಗಾಳಿಯು ಎಬ್ಬಿಸಿದಂತ ನಿದ್ರೆ

ಬುಡ್ಡಿ ಬೆಳಕು ಎಣ್ಣೆಯ ಹಂಗಿಲ್ಲದ ಹೊಳೆದು 

ಕತ್ತಲೆಯ ಸಂಘ ಬಯಸಿದ ನಿದ್ರೆ

‍ಲೇಖಕರು Admin MM

February 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: