ಗುರುಮೂರ್ತಿಚಾರಿ ಬಿ
ನಾನೀಗ ಬೇಸರಿಸುವುದಿಲ್ಲ
ಏಕೆಂದರೆ ಬೇರೆಯವರ ಬಗೆಗೆ
ನನಗಾವ ದೂರುಗಳಿಲ್ಲ
ನಾನೀಗ ಸದಾ ಶಾಂತಿ ಅನುಭವಿಸುವೆ ಜೀವನದಲಿ
ಏಕೆಂದರೆ ನನಗಾವ ನಿರೀಕ್ಷೆಗಳಿಲ್ಲ
ನನಗೀಗ ಪರಿತಾಪಗಳಿಲ್ಲ
ಏಕೆಂದರೆ ಪ್ರತಿ ಕ್ಷಣ ನನಗೆ ಹೊಸ ಪಾಠ ಕಲಿಸುತ್ತಿದೆ
ನನಗೀಗ ನಿದ್ರಾಹೀನತೆ ಇಲ್ಲ
ಏಕೆಂದರೆ ಸರ್ವವನ್ನು ಭಗವಂತನಿಗೆ ಅರ್ಪಿಸಿದ್ದೇನೆ

ನನಗಾವ ಪಶ್ಚಾತ್ತಾಪವಿಲ್ಲ
ಏಕೆಂದರೆ ನನ್ನ ಕೆಲಸವನು
ಹೃತ್ಪೂರ್ವಕವಾಗಿ ಮಾಡುತಿರುವೆ
ನನಗಾವ ಭಯವಿಲ್ಲ
ಏಕೆಂದರೆ ನನ್ನ ಅರಿವಿನ ಪರಿಧಿಯಲ್ಲಿ ಯಾವುದೇ ತಪ್ಪು ಎಸಗಿಲ್ಲ
ನನ್ನ ಆನಂದಕ್ಕೆ ಪಾರವೇ ಇಲ್ಲ
ಏಕೆಂದರೆ ಬದುಕಿನ
ಪ್ರತಿ ಕ್ಷಣ ಅನುಭವಿಸ ತೊಡಗಿರುವೆ






0 Comments