ವಿನಯದ ಪ್ರತಿರೂಪ ಹರೀಶ್ ಕೊಮ್ಮೆ…

ಚಂಪಾ ಶೆಟ್ಟಿ

‘ಅಮ್ಮಚ್ಚಿ’ ಸಿನೆಮಾ ನನಗೆ ಕೊಟ್ಟ ಅನೇಕ ಖುಷಿಗಳಲ್ಲಿ ‘ಹರೀಶ್ ಕೊಮ್ಮೆ’ ಪರಿಚಯವಾದದ್ದೂ ಒಂದು.. ಅಗಾಧವಾದ ಪ್ರತಿಭೆ, ತಾಂತ್ರಿಕ ಕೌಶಲ್ಯ ಎಲ್ಲವನ್ನೂ ತನ್ನೊಳಗಡಗಿಸಿಕೊಂಡಿದ್ದರೂ ತನಗೇನೂ ಗೊತ್ತೇ ಇಲ್ಲ ಅನ್ನುವಂತ ವಿನಯದ ಪ್ರತಿರೂಪ ಹರೀಶ್.. ಅವರ ಮಗುವಿನಂತ ಮುಗ್ದ ಮನಸ್ಸು ..ತನ್ನವರಿಗಾಗಿ ಅವರು ತೋರಿಸುವ ಪ್ರೀತಿಯ ಪರಿ, ಹರೀಶ್ ರ ಪರಿಚಯದ ಪರಧಿಗೆ ಬಂದವರಿಗೆಲ್ಲಾ ತಿಳಿದೇ ಇರುತ್ತದೆ.

ಎಡಿಟಿಂಗ್ ಅಂದ್ರೆ ದೃಷ್ಯಗಳನ್ನು ಜೋಡಿಸೋದು “ಕಟ್ ಅಂಡ್ ಪೇಸ್ಟ್” ಅಂದುಕೊಂಡವಳಿಗೆ “ಎಡಿಟಿಂಗ್”, ಸಿನೆಮಾದ ಬಹುಮುಖ್ಯ ಅಂಗ ಅಂತ ತೋರಿಸಿಕೊಟ್ಟವರು ನಮ್ಮ ಹರೀಶ್ … ಹರೀಶ್ ಕೈಗಳಲ್ಲಿ ಒಂದು ಮಾಂತ್ರಿಕ ಶಕ್ತಿ ಅಡಗಿದೆಯೆಂದರೆ ಅದು ಉತ್ಪ್ರೇಕ್ಷೆ ಖಂಡಿತ ಅಲ್ಲ “ಮಫ್ತಿ ” ಸಿನೆಮಾ ನೋಡಿದವರಿಗೆ ಅದರ ಅರಿವಾಗಿರುತ್ತದೆ… ಹರೀಶ್ ನಮ್ಮ ತಂಡಕ್ಕೆ ಪರಿಚಯವಾದಧ್ದು “ಅಮ್ಮಚ್ಚಿ” ಮೂಲಕ.. ಎಡಿಟರ್ ಆಗಿ ಪರಿಚಯವಾದ ಹರೀಶ್ ಈಗ ಕೇವಲ ಎಡಿಟರ್ ಆಗಿ ಉಳಿದಿಲ್ಲ ನಮ್ಮ ತಂಡದ ಬಹು ಮುಖ್ಯ ಸದಸ್ಯರಲ್ಲೊಬ್ಬರಾಗಿಬಿಟ್ಟಿದ್ದಾರೆ..

ಹರೀಶ್ ಇಲ್ಲದೆ ನಾವೇನೂ ಮಾಡಲಾರೆವು ಎಂಬ ಮಟ್ಟಿಗೆ…. ಇದೀಗ “ಹರೀಶ್ ಕೊಮ್ಮೆ” ಅವರಿಗೆ ಮಫ್ತಿ ಸಿನೆಮಾದ ಎಡಿಟಿಂಗ್ ಗಾಗಿ “2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ” ದೊರಕಿದೆ ನಮ್ಮ ಇಡೀ ತಂಡ ಸಂಭ್ರಮಿಸಲು ಇದಕ್ಜಿಂತ ಕಾರಣ ಬೇಕಾ? ಹರೀಶ್ ಅವರಿಗೆ ಇಂತಹ ನೂರಾರು ಪ್ರಶಸ್ತಿಗಳು ಬರಲಿ.. ಭಾರತೀಯ ಚಿತ್ರರಂಗ ಹರೀಶ್ ಕೈಚಳಕವನ್ನು ಗುರುತಿಸುವಂತಾಗಲಿ, ಅವರ ಪ್ರಾಮಾಣಿಕ ಮನಸ್ಸಿಗೆ ತಕ್ಕ ಯಶಸ್ಸು ಅವರನ್ನು ಅರಸಿ ಬರಲಿ … ಅಭಿನಂದನೆಗಳು ಹರೀಶ್ …

‍ಲೇಖಕರು Admin

May 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: