ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾವರ್ಧಕ ಸಂಘದಲ್ಲಿ ವಿಶ್ವಕಲಾ ದಿನಾಚರಣೆ…


ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಶ್ವ ಕಲಾ ದಿನಾಚರಣೆ ಜರುಗಿತು. ಖ್ಯಾತ ಕುಂಚ ಕಲಾವಿದ, ಹಾಲಬಾವಿ ಟ್ರಸ್ಟ್ ನ ಬಿ. ಮಾರುತಿ ಚಾಲನೆ ನೀಡಿದರು.

ಕಲೆ ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆ ಉಂಟು ಮಾಡುತ್ತಲೇ ಮನಸ್ಸು ಮತ್ತು ಹೃದಯವನ್ನು ಅರಳಿಸುತ್ತವೆ. ಭಾಷೆ ಹಾಗೂ ಅಕ್ಷರಕ್ಕಿಂತ ಮೊದಲು ಮನುಷ್ಯ ಚಿತ್ರದ ಮೂಲಕವೇ ಅಭಿವ್ಯಕ್ತಿಸಿದ. ಜಾಗತೀಕರಣದ ಪ್ರಭಾವದಿಂದ ಹಿಂದೆ ಸಿಗುವ ಉತ್ತೇಜನದಿಂದ ಕಲಾ ಪ್ರಕಾರಗಳಿಗೆ ಈಗ ಸಿಗುತ್ತಿಲ್ಲ. ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಒಂದು ಕಲಾ ಗ್ಯಾಲರಿ ನಿರ್ಮಾಣವಾಗಬೇಕು, ಹಾಗಾದಾಗ ಹೊಸ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.

ಹುಬ್ಬಳ್ಳಿಯ ಕವಿ ಕಿರಣ ಜತ್ತಿ ಅವರ ಚಿತ್ರ ಕಾವ್ಯ ಪ್ರದರ್ಶನ ಈ ಸಂದರ್ಭದಲ್ಲಿ ಜರುಗಿತು. ಅಂತರ್ ರಾಷ್ಟ್ರೀಯ ಖ್ಯಾತಿಯ ಟಿ.ಎನ್. ಸತ್ಯನ್ ಅವರ ೮೦ಕ್ಕೂ ಹೆಚ್ಚು ಚಿತ್ರ ಸಂಗ್ರಹಗಳಿಗೆ ಸುಂದರ ಸ್ಪುಟವಾದ ಅಡಿ ಕಾವ್ಯವನ್ನು ಜತ್ತಿ ಅವರು ಬರೆದಿರುವರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾ೦ತ ಬೆಲ್ಲದ, ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಂಕರ ಕುಂಬಿ, ಶ್ರೀಮತಿ ಪ್ರಭಾವತಿ ಜತ್ತಿ, ವೀರಣ್ಣ ಒಡ್ಡಿನ, ಎಂ. ಎಂ. ಚಿಕ್ಕಮಠ ಅವರಲ್ಲದೆ ಹಾವೇರಿಯ ಕಲಾಬಳಗದ ಚಂದ್ರಶೇಖರ ಮಾಳಗಿ, ಪೃಥ್ವಿರಾಜ ಬೆಟಗೇರಿ, ಜಿ.ಎಂ.ಓ೦ಕಾರಣ್ಣನವರ, ಶಂಕರ ಬಡಿಗೇರ, ಸವಿತಾ ಮಣ್ಣಮ್ಮನವರ, ನೇತ್ರಾ ಕಾಂತೇಶ ಅಂಗಡಿ ಭಾಗವಹಿಸಿದ್ದರು.

ವಿಶ್ವಕಲಾ ದಿನಾಚರಣೆಯ ಚಿತ್ರ ಚಿತ್ರಾವಳಿ ಇಲ್ಲಿದೆ.

‍ಲೇಖಕರು avadhi

23 April, 2023

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading