ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾ2ಡೂ..

ನಾಗೇಂದ್ರ ಶಾ 

ಅದೊಂದು ಭಯಾನಕ ಸಿನೆಮ.

ಅದರಲ್ಲಿ ನಂದು ಖಳನ ಪಾತ್ರ.

ಮುಂಬೈನ ಬೆಡಗಿಯೊಬ್ಬಳನ್ನು ಮುಖ್ಯ ಪಾತ್ರಕ್ಕೆ ಕರೆಸಿದ್ದರು. ಒಂದು ಸನ್ನಿವೇಷದಲ್ಲಿ ಆಕೆಯ ರೆಟ್ಟೆ ಹಿಡಿದು ದೂರ ತಳ್ಳಬೇಕಿತ್ತು ನಾನು. ಎಲ್ಲವೂ ಸಿದ್ಧವಾಯಿತು.

ಆದರೆ ಚಿತ್ರೀಕರಣಕ್ಕೆ ಮೊದಲು ಆಕೆಯ ಸಹಾಯಕ ಬಂದು ನನಗೆ ‘ಸಾರ್… ಮೇಡಂ ಹೇಳ್ತಿದಾರೆ. ನಿಮ್ಮ ಕೈನ ಸೋಪು ಹಾಕಿ ತೊಳ್ಕೊಂಡು, ಯುಡಿಕೊಲೊನ್ ಹಾಕ್ಕೊಂಡು ಆಮೇಲೆ ಮುಟ್ಬೇಕಂತೆ…’ ಅಂದ….!

ಅಲೆಲೆ…! ಇಷ್ಟೊಂದು ಕೊಬ್ಬೆ ಅಲ್ಲಿಯವರಿಗೆ… ನಮ್ಮಿಂದ ಮುಟ್ಟಿಸಿಕೊಳ್ಳಲು ಅಸಹ್ಯ ಪಡುವಷ್ಟು…. ಅನ್ನಿಸಿತು.
‘ ನೋಡಪ್ಪಾ ನಾನು ಸಿಗರೇಟ್ ಸೇದಲ್ಲ, ಹೆಂಡ ಕುಡಿಯಲ್ಲ, ನಾನ್ ವೆಜ್ ತಿನ್ನಲ್ಲ. ದಿನಾ ಸ್ನಾನ ಮಾಡ್ತಿನಿ… ಹಾಗಂತ ಹೇಳು ನಿಮ್ಮ ಮೇಡಂ‌ಗೆ…’ ಅಂದೆ.

ಆಮೇಲ್ಲನ್ನಸ್ತು. ಆಕೆಗೆ ಏನು ಖಾಯಿಲೆಯೊ… ಏನು ಕರ್ಮವೊ… ನಮ್ಮ ಮುಂಜಾಗ್ರತೆಗಾಗಿ ಆಕೆ ಹಾಗೆ ಹೇಳಿದಳೇನೊ ಅಂತ…

ವಾ೨ಡೂ….

‍ಲೇಖಕರು avadhi

28 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading