ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’

ಪುರುಷಾಹಾಂಕಾರದಕೋಟೆ ಭೇದಿಸಿದವರು

ವಸುಂಧರಾ ಭೂಪತಿ

ಪತ್ರಕರ್ತೆ ಮಾಲತಿ ಭಟ್ ಅವರ `ದೀಪದ ಮಲ್ಲಿಯರು’ ಪುಸ್ತಕಕ್ಕೆ

ವೈದ್ಯೆ, ಲೇಖಕಿ, ಪುಸ್ತಕ ಪ್ರಾಧಿಕಾರದ ನಿಕಟಪೂರ್ವಅಧ್ಯಕ್ಷೆ

ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ.

‘ದೀಪದ ಮಲ್ಲಿಯರು’ ಒಂದು ಅಪರೂಪದ ವೈಶಿಷ್ಟ್ಯ ಪೂರ್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಶೂನ್ಯ ಸ್ಥಿತಿಯಲ್ಲಿದ್ದ ಮಹಿಳೆಯರು ತಮ್ಮ ಇಚ್ಛಾ ಬಲದಿಂದ ಸವಾಲುಗಳನ್ನು ಗೆದ್ದು ಸಾಧನೆ ಮಾಡಿದ ಸಂಗತಿಗಳನ್ನು ಪತ್ರಕರ್ತೆ, ಲೇಖಕಿ ಮಾಲತಿ ಭಟ್ ನಿರೂಪಿಸುತ್ತಾಅವರ ವ್ಯಕ್ತಿಚಿತ್ರಗಳನ್ನು ಇಲ್ಲಿಕಟ್ಟಿಕೊಟ್ಟಿದ್ದಾರೆ.

‘ದೀಪದ ಮಲ್ಲಿಯರು’ ಔಚಿತ್ಯಪೂರ್ಣವಾದ ಪ್ರಾತಿನಿಧಿಕ ಶೀರ್ಷಿಕೆ. ದೀಪ ಬೆಳಕಿನ ಸಂಕೇತ, ಜ್ಞಾನದ ಸಂಕೇತ. ಬೆಳಕು ಮತ್ತು ಜ್ಞಾನ ಇವೆರಡರ ಪೂರ್ವ ಸ್ಥಿತಿ ಅಜ್ಞಾನ ಮತ್ತುಕತ್ತಲು. ಇಂದು ಜಗತ್ತಿನಲ್ಲಿ ಎಲ್ಲ ದೇಶಗಳಲ್ಲೂ ಬಹುತೇಕವಾಗಿ ಬದುಕು ಗಂಡಾಳ್ವಿಕೆಯದೇ ಆಗಿದೆ. ಭಾಷೆಗಳ ರಚನೆಗಳನ್ನೇ ನೋಡಿದರೂ ಹೆಚ್ಚು, ಕಡಿಮೆ ಜಗತ್ತಿನ ಎಲ್ಲ ಭಾಷೆಗಳೂ ಗಂಡು ಪ್ರಾಧಾನ್ಯತೆಯ ಸಂಭೋದನೆಯ ಪ್ರಯೋಗರೂಪಗಳೇ ಆಗಿವೆ. ಮನುಷ್ಯಕುಲ, ಮಾವನಕುಲ ಇವೆಲ್ಲವೂ ಹೆಣ್ಣಿನ ಗೈರು ಹಾಜರಿಯ ಪ್ರಯೋಗಗಳೇ. ಹೀಗಾಗಿ ಹೆಣ್ಣಿಗೆ ಬದುಕೆಂಬುದು ಹೆಚ್ಚು ಬೆಳಕಿಗೆ ತೆಗೆದುಕೊಂಡದ್ದಲ್ಲ. ಆದರೆ, ಜಗತ್ತಿನಯಾವುದೇ ಸಮುದಾಯದ ಸಂಸ್ಕೃತಿ, ನಾಗರಿಕತೆಯ ಬೆಳವಣಿಗೆಯ ಹಿಂದೆ ಹೆಣ್ಣಿನ ದುಡಿಮೆ, ಹೆಣ್ಣಿನ ಧೀಶಕ್ತಿ ಕಾರಣವಾಗುತ್ತದೆಂಬುದು ಜನಜನಿತ.

ಕುಟುಂಬ ನಿರ್ವಹಣೆಯಿಂದ ಹಿಡಿದು ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವಎಲ್ಲ ಕ್ರಿಯೆಗಳಲ್ಲೂ ಹೆಣ್ಣಿನ ಪಾತ್ರ ಪ್ರಧಾನವಾಗಿರುತ್ತದೆ. ಆದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರೀತಿ ಪುರುಷ ಪ್ರಾಧಾನ್ಯತೆ ಮೆರೆದಿದೆ. ಆದ್ದರಿಂದಲೇ ಈ ಅರಿವಿನ ಎಚ್ಚರದಲ್ಲಿ ದೀಪ’ ಎನ್ನುವುದನ್ನು ಮಾಲತಿ ಭಟ್ ಬಳಸಿದ್ದಾರೆ. ಅದನ್ನು ಬೆಳಗುವ ಧೀಶಕ್ತಿಎಂದರೆ ಮಹಿಳೆ ಎಂಬ ಅರಿವಿನಲ್ಲಿ ದೀಪದ ಮಲ್ಲಿಯರು’ ಎಂದು ಪ್ರಯೋಗಿಸಿದ್ದಾರೆಂದು ನನ್ನ ಅನಿಸಿಕೆ. ಹೀಗಾಗಿ ಇಡೀ ಶೀರ್ಷಿಕೆಯೇ, ಪುರುಷಾಂಹಕಾರದ ಅಂಧಕಾರದ ಕೋಟೆಯೊಳಗೆ ಇದ್ದುಅದನ್ನು ಉಲ್ಲಂಘಿಸಿ ಹೊರಬಂದಜ್ಞಾನದ ಬೆಳಕಿನ ಚೇತನಗಳಾಗಿ ಸಾಧನೆಗೈದಎಲ್ಲ ಮಹಾಚೈತನ್ಯಗಳ ಪ್ರತಿಮಾರೂಪ.
ಕವಿ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ `ದೀಪದಮಲ್ಲಿ’ ಪದ್ಯದಲ್ಲಿಇದರಅರ್ಥಸ್ವಾರಸ್ಯವನ್ನು ಸಂಪೂರ್ಣವಾಗಿ ವ್ಯಂಜಿಸಿರುವುದು ನೆನಪಿಗೆ ಬರುತ್ತದೆ.

ಈ ಕೃತಿಯಲ್ಲಿರುವಎಲ್ಲ ಲೇಖನಗಳು ಪ್ರಾಫಿಟ್ ಪ್ಲಸ್’ ಪತ್ರಿಕೆಗೆ ಬರೆದಅಂಕಣ ಬರಹಗಳು. ಮಾಲತಿ ಭಟ್‌ಅವರು ಮೂಲತಃ ಪತ್ರಕರ್ತೆ. ಪ್ರಜಾವಾಣಿಯಲ್ಲಿ ಬಹು ದೀರ್ಘ ಕಾಲ ಯಶಸ್ವಿಯಾಗಿ ವೃತ್ತಿಜೀವನ ನಡೆಸಿದವರು. ಎಲ್ಲಇದ್ದು ಅನುಕೂಲತೆಗಳ ನಡುವೆಉನ್ನತಿಗೇರುವುದುದೊಡ್ಡ ಸಾಧನೆಯಲ್ಲ. ಅದು ಬಹುತೇಕರ ಬದುಕಿನಲ್ಲಿಘಟಿಸುವ ಸಾಮಾನ್ಯ ಬೆಳವಣಿಗೆ. ಆದರೆ, ಏನೂ ಇಲ್ಲದೇತನ್ನ ವ್ಯಕ್ತಿತ್ವದಉನ್ನತಿಯನ್ನು ಸಾಧನೆಯ ಮೂಲಕ ಜಗತ್ತಿಗೆತೋರಿಸುವುದುತುಂಬ ಕಷ್ಟಸಾಧ್ಯವಾದ ಸಾಧನೆ. ಮಾಲತಿ ಭಟ್‌ಅವರುಇಂತಹ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಪರಿಚಯಿಸಿರುವುದು ಅವರಜೀವನಧರ್ಮದ ನಿಲುವನ್ನುಎತ್ತಿತೋರಿಸುತ್ತದೆ. ಸಾಹಿತ್ಯದಲ್ಲಿಒಂದು ಮಾತಿದೆ.

ಜಗತ್ತಿನಲ್ಲಿ ಗೆದ್ದವರ ಬಾಲವನ್ನು ಹಿಡಿದು ಅದೇಗದೆಯೆಂದು ಹೊತ್ತು ಮೆರೆಯುವವರ ತಂಡದೊಡ್ಡದಿರುತ್ತದೆ. ಆದರೆ, ಸಾಹಿತ್ಯ ಲೋಕದಲ್ಲಿ ಸೋತು, ಸೊರಗಿದವರ ಪರವಾಗಿದ ನಿಯೆತ್ತುವ, ಅವರಿಗೆ ಆಸರೆಯಾಗುವ ಸಹೃದಯರ ಪರಂಪರೆ ದೊಡ್ಡದಿರುತ್ತದೆ !’ ಇಂಥ ಸಹೃದಯರ ಪರಂಪರೆಯಲ್ಲಿ ಪ್ರಜ್ಞಾ ವಿಶೇಷವನ್ನು ಒಳಗೊಂಡ ಮಾಲತಿಯವರು ಬರೀ ಬರಹದಲ್ಲಷ್ಟೇ ಅಲ್ಲ. ಬದುಕಿನಲ್ಲೂ, ತಮ್ಮ ವೃತ್ತಿಜೀವನದಲ್ಲೂ ಅಂಥವರಿಗೆ ಆಸರೆಯಾಗಿದ್ದರು ಎಂಬುದು ಅವರ ಆಪ್ತರಿಗೆಲ್ಲ ತಿಳಿದ ವಿಚಾರ.

ಈ ಕೃತಿಯೊಳಗೆ ವೃತ್ತಿಚಿತ್ರಗಳಾಗಿ ಕಟ್ಟಿಕೊಟ್ಟ ಕೊಳೇಗೇರಿಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಕಲ್ಪನಾ ಸರೋಜ್ ೭೦೦ ಕೋಟಿರೂಪಾಯಿ ವ್ಯವಹಾರ ನಡೆಸಿ ಪದ್ಮಶ್ರೀ ಪುರಸ್ಕೃತರಾಗಿದ್ದು, ಅನಾಥಾಶ್ರಮದಲ್ಲಿ ಬೆಳೆದ ಜ್ಯೋತಿರೆಡ್ಡಿಅಮೆರಿಕಾದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದ ಬಗೆ, ವಾಲಿಬಾಲ್‌ ಆಟಗಾರ್ತಿಯಾಗಿದ್ದಅರುಣಿಮಾ ಸಿನ್ಹಾ ದುರಂತಕ್ಕೊಳಗಾಗಿ ಒಂದು ಕಾಲು ಕಳೆದುಕೊಂಡು ಎವರೆಸ್ಟ್ ಹತ್ತಿದ ಪ್ರಥಮ ಅಂಗವಿಕಲ ಮಹಿಳೆ ಎಂಬ ಹೆಮ್ಮೆಗೆ ಪಾತ್ರವಾದ ರೀತಿ, ಪ್ರೇಮದಲ್ಲಿ ಮೋಸಕ್ಕೊಳಗಾಗಿ ನಂತರ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡ ಪೆಟ್ರಿಷಿಯಾ ನಾರಾಯಣ್, ಆಸಿಡ್ ದಾಳಿಗೆ ತುತ್ತಾಗಿ ೧೬ನೇ ವರ್ಷದಲ್ಲಿ ಮುಖ ವಿರೂಪಗೊಂಡರೂ ಬದುಕುಕಟ್ಟಿಕೊಂಡ ಲ ಅಗರವಾಲ್, ಪರಿಸರ ಹೋರಾಟಕ್ಕಾಗಿ ಜೀವತೇದಡಾ.

ಕುಸುಮಾ ಸೊರಬ, ರೈತ ಮಹಿಳೆ ಕವಿತಾ ಮಿಶ್ರಾ, ವಿಮಲಾ ರಂಗಾಚಾರ್, ಖಗೋಳ ವಿಜ್ಞಾನಿ ಬಿ. ಎಸ್. ಶೈಲಜಾ ಮುಂತಾದ ಒಟ್ಟು ೧೮ ಮಹಿಳೆಯರ ಯಶೋಗಾಥೆ ಇಲ್ಲಿದೆ. ಇವರಲ್ಲಿ ಬಹುತೇಕ ಮಹಿಳೆಯರು ಸೋತು ಸುಣ್ಣವಾಗಿದ್ದವರು. ಆದರೆ, ತಮ್ಮಆತ್ಮಶಕ್ತಿಯನ್ನು ಕಳೆದುಕೊಳ್ಳದೇ ಫೀನಿಕ್ಸ್ ಹಕ್ಕಿಯಂತೆ ಮರುಜೀವ ಪಡೆದುಕೊಂಡವರು. ಎಲ್ಲ ಸುಲಭವಿದ್ದರೂ ಏನೂ ಮಾಡಲಾಗದಂತಹ ಸಂದರ್ಭದಲ್ಲಿಅಪೂರ್ವ ಸಾಧನೆಗಳನ್ನು ಮಾಡಿ ಮಾದರಿಯಾದ ಮಹಿಳೆಯರು. ಬಿ.ಎಸ್. ಶೈಲಜಾ, ಕವಿತಾ ಮಿಶ್ರಾ, ಲೀಲಾ ಅಪ್ಪಾಜಿಅವರನ್ನು ನಾನು ಹತ್ತಿರದಿಂದ ಬಲ್ಲೆ.

ಮಾಲತಿ ಭಟ್‌ ಅವರ ಭಾಷೆ, ನಿರೂಪಣಾ ಶೈಲಿ ಆಪ್ತವಾಗಿದ್ದು ಓದುಗರ ಮನದಲ್ಲಿಅಂತಃಕರಣದ ಸೆಲೆಯನ್ನು ಸ್ಫುರಿಸುತ್ತದೆ. ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಮಹಿಳೆಯರ ನಿಜಾರ್ಥದಲ್ಲಿಅಸಾಧ್ಯವೆನಿಸುವ ಸಾಧನೆಯನ್ನು ತೆರೆದಿಡುವಲ್ಲಿ `ದೀಪದ ಮಲ್ಲಿಯರು’ ಕೃತಿ ಯಶಸ್ವಿಯಾಗಿದೆ.

‍ಲೇಖಕರು Admin

April 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: