ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

ವ್ಯೂತ್ಸ್ ಬುರ್ಗ್ ವಸಂತೋತ್ಸವ ನಡೆದದ್ದು ಮಾಯಿನ್ ನದಿಯ ಪಕ್ಕದ ಸುಂದರ ಉದ್ಯಾನದಲ್ಲಿ. ಅಲ್ಲಿ ಮಕ್ಕಳ ಆಟ ಕೂಟಕ್ಕೆ ಪ್ರತ್ಯೇಕವಾದ ವಿಶಾಲ ಅವಕಾಶ ಇತ್ತು. ಮಣ್ಣು ,ಮರಳು,ನೀರು -ಅಲ್ಲಿನ ಮುಖ್ಯ ಆವರಣ. ಅದಕ್ಕೆ ಹೊಂದಿಕೊಂಡಂತೆ ನೀರು ಎತ್ತುವ , ನೀರು ಸಾಗಿಸುವ , ಮಣ್ಣು ಮೆತ್ತುವ , ಮರಳು ಮೆಟ್ಟುವ, ಚೆಲ್ಲುವ , ಕುಣಿಯುವ ಅನೇಕ ಸಾಧನಗಳು , ಸೌಲಭ್ಯಗಳು , ಸವಾಲುಗಳು – ನೂರಾರು ಮಕ್ಕಳಿಗೆ . ಹಾಗಾಗಿ ಎತ್ತ ನೋಡಿದರೂ ಮಣ್ಣಿನ ಮಕ್ಕಳದ್ದೇ ಅಪೂರ್ವ ಲೋಕ. ಪುಟ್ಟ ಮಕ್ಕಳ ಏಳುವಿಕೆ ಬೀಳುವಿಕೆ , ನೀರು ಎತ್ತುವ ಚೆಲ್ಲುವ , ಸಣ್ಣ ತೊರೆಯಲ್ಲಿ ಮುಳುಗಿ ಬಿದ್ದು ಚಡಪಡಿಸುವ ರೋಮಾಂಚನದ ನೋಟಗಳು ಮನಮೋಹಕ . ಉಳಿದ ಕಡೆ ನಡೆಯುವ ಎಲ್ಲ ಸಂಗತಿಗಳ ಗೊಡವೆಯೇ ಇಲ್ಲದೆ , ದೊಡ್ಡವರ ಜಗತ್ತನ್ನೇ ಮರೆತು ಕಿನ್ನರ ಲೋಕದಲ್ಲಿ ವಿಹರಿಸುವ ಪುಟಾಣಿಗಳು -ಕಣ್ಮನ ಸೆಳೆದರು. ಅವುಗಳ ಕೆಲವು ಚಿತ್ರಗಳು ಇಲ್ಲಿವೆ. ಈ ಮಕ್ಕಳ ನೆನಪಿಗಾಗಿ ಜರ್ಮನ್ ಭಾಷೆಯಲ್ಲಿ ಇರುವ ಕೆಲವು ಮಕ್ಕಳ ಪದ್ಯಗಳನ್ನು ಕನ್ನಡದಲ್ಲಿ ಭಾವಾನುವಾದ ಮಾಡಿ ಇಲ್ಲಿ ಕೊಡುತ್ತಿದ್ದೇನೆ:

 

ಚಂದದ ವಸಂತ ಬಂದಿದೆ ಈಗ

ಅರಳುತಿವೆ ಎಲ್ಲವು ಬೇಗ

ಹರಡಿದೆ ಹಸುರು ಅಲ್ಲಿ ಇಲ್ಲಿ ಎಲ್ಲೆಲ್ಲಿ

ಅರಳುತಿವೆ ಪುಟಾಣಿ ಹೂಗಳು ತೋಟದಲಿ

ಬಿಳಿ ನೀಲಿ ಕೆಂಪು ಗುಲಾಬಿ

ಚಂದವೋ ಚಂದ ಈ ಲೋಕದಲಿ.

**********

ಚಿನ್ನದ ಹಕ್ಕಿ ಚಿನ್ನದ ಹಕ್ಕಿ

ಎಲ್ಲಿಗೆ ಹೊರಟಿರುವಿ ?

ಹಾರೇ ನಿನ್ನ ಗೂಡಿಗೆ

ತಾರೇ ಚೀಸ್ ಕೇಕನು

ಒಂದು ನನಗೆ , ಒಂದು ನಿನಗೆ

ಒಂದು ಒಳ್ಳೆಯ ಮಕ್ಕಳಿಗೆ.

***********

ಕುಣಿ ,ಪುಟಾಣಿ ,ಕುಣಿ

ನಿನ್ನ ಶೂಗಳೆಷ್ಟು ಚಂದ !

ಮಾಡಬೇಡ ಚಿಂತೆ ,

ತರುತ್ತಾನಂತೆ ಮೋಚಿ

ಹೊಸ ಶೂಗಳ ಬಾಚಿ

ಕುಣಿ ,ಪುಟಾಣಿ,ಕುಣಿ.

‍ಲೇಖಕರು G

May 30, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: