ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರದೇಶ ಹಿರೇಗಂಗೆ ಕವಿತೆ- ಆ ನಗು, ಆ ಅಳು, ಆ ಮಾತು…

ವರದೇಶ ಹಿರೇಗಂಗೆ

ಆ ನಗು
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌
ಯಾವುದೂ ಆಗಿರಲಿಲ್ಲ
ಹಸಿರು ಹುಲ್ಲಿನ ಮೇಲೆ ಬಿದ್ದ
ಇಬ್ಬನಿಯ ಶುಭ್ರನಗು

ಆ ಅಳು,
ಯಾವುದೇ ಒಂದು
ಮತದ್ದಾಗಿರಲಿಲ್ಲ
ಮಗನನ್ನು ಕಳೆದುಕೊಂಡ
ತಾಯಿಯ ರೋದನೆ

ಆ ಮಾತು
ಯಾವ ಧಾರ್ಮಿಕ ಉನ್ಮಾದವಲ್ಲ
ನೀರು ವಿದ್ಯುತ್‌ ಮಗು ಸ್ಕೂಲ್‌
ಇತ್ಯಾದಿ ರಗಳೆಯ ದಿನಚರಿ

ಹಾಕಿದ ಬುರ್ಖಾ, ಹಣೆಯ
ಕುಂಕುಮ ವಿಭೂತಿ
ಕತ್ತಿನ ಕ್ರಾಸ್‌, ಕರಿಮಣಿ, ಲಿಂಗ
ಎಲ್ಲದರ ಹಿಂದೆ
ಗಂಡ, ಮಗು, ಗೆಳತಿ

ಯಾವ ದೇವರು ಗುಣಮಾಡಿಯಾನು
ಈ ಕಣ್ಣಿನಾಳದ ಯಾತನೆಯ?

‍ಲೇಖಕರು Admin

4 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading