ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೈಕ್ಸ್ ಬಯಸದೆ, ಕಮೆಂಟ್ಸ್ ಕೇಳದೆ..

vanamala sampannakumar writer

ವನಮಾಲಾ ಸಂಪನ್ನಕುಮಾರ

ಆತಂಕ
~~~~~~

ನಾನು ಪಡೆದದ್ದನ್ನೆಲ್ಲ
ನಿನಗೆ ಕೊಡಬೇಕೆಂದಿದ್ದೇನೆ
ನೀನು ಹೇಗೆ ಸ್ವೀಕರಿಸುವೆಯೋ ತಿಳಿಯೆ
ಅದರಲ್ಲಿ ತುಂಬ ದು:ಖವಿದೆ.

tree color

 

 

 

 

 

ಹಾಗೆಯೇ ಮರೆಯಾದವರು
~~~~~~~~~~~~~~~~~~~

ಅರಳುವುದನ್ನು ನೋಡಬೇಕಿತ್ತು
ರಾತ್ರಿ ಮರೆತೆ
ಬೆಳಗ್ಗೆದ್ದರೆ ಕೊಕ್ಕರೆಯ ಹೆಣದಂತೆ
ಗಿಡದಲ್ಲಿ ಬಾಡಿದ ಬ್ರಹ್ಮಕಮಲಗಳು

ಲೈಕ್ಸ್ ಬಯಸದೆ ಕಮೆಂಟ್ಸ್ ಕೇಳದೆ
ಯಾರ ಬರವಿಗೂ ಕಾಯದೆ
ಕೆಲಸ ಮುಗಿಸಿ ಕತ್ತಲಲ್ಲೇ ಮುದುಡಿ
ಮರೆಯಾದ ಹೂವುಗಳು
ನನ್ನಮ್ಮ ಅಜ್ಜಿಯರ ನೆನಪಿಸಿದವು.

tree color

 

 

 

 

 

‘ಕವಿತೆ ‘ಕವಿಯ ವ್ಯಥೆಯಲ್ಲ
~~~~~~~~~~~~~~~~~

ಆ ರಾತ್ರಿ ಪದ್ಯ ನಿದ್ರಿಸಲಿಲ್ಲ
ಏನೋ ತೊಳಲಾಟ
ಪಕ್ಕಕ್ಕೆ ಹೊರಳಿದರೆ
ಎಬ್ಬಿಸುವ ಶ್ರಮವೇನಿಲ್ಲ
ಕವಿಗೂ ನಿದ್ದೆಯಿಲ್ಲ

ಕವಿತೆ ಎಂದರೆ ಕವಿಯ ವ್ಯಥೆಯೇ
ನನಗಿಂತ ಹೆಚ್ಚು ನಿನ್ನನ್ನು ವಿಚಾರಿಸಿದರಲ್ಲ…
ಕನಲಿ ಕೇಳಿತು ಕವಿತೆ

ಕಾವ್ಯಪ್ರಿಯರಲ್ಲಿ ಎರಡು ಬಗೆ
ಒಂದಷ್ಟು ಜನ ಕವಿತೆಯೊಳಗಿಣುಕಿದರೆ
ಇನ್ನಷ್ಟು ಮಂದಿ ಕವಿಯ ಎದೆಯೊಳಗೆ !

ಮಾತಿಲ್ಲದೆ ಕವಿ ಹಾಗೇ ಮಗ್ಗುಲಾದರೆ…
ನಿಟ್ಟುಸಿರಿಗೆ ದಿಂಬು ನಲುಗಿತು

‍ಲೇಖಕರು admin

21 November, 2015

1 Comment

  1. Anonymous

    Kavanagalu tumba chennagive

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading