ಲೆಕ್ಕ…

ರೇವಣಸಿದ್ದಪ್ಪ ಜಿ ಆರ್

ನಾನೊಂದು ಅಂಕೆ;
ನೀನೊಂದು ಅಂಕೆ;
ಅವನೂ, ಅವಳೂ, ಅದೂ, ಅವರೂ
ಒಂದೊಂದು ಅಂಕೆಯೇ.
ಯಾವ ಅಂಕೆಯೂ ಚಿಕ್ಕದಲ್ಲ;
ಯಾವ ಅಂಕೆಯೂ ದೊಡ್ಡದಲ್ಲ.
ಸಣ್ಣದೆನಿಸಿಕೊಂಡ ಸೊನ್ನೆ
ಬ್ರಹ್ಮಾಂಡವನೆ ವ್ಯಾಪಿಸಿದೆ;
ದೊಡ್ಡದೆನಿಸಿಕೊಳ್ಳುವುದರ
ಮುಖಾಮುಖಿಯಾಗಲು
ಇನ್ನೊಂದು ಸಿದ್ಧವಾಗುತ್ತದೆ.

ಈ ಲೆಕ್ಕವೊಂದು
ಅಂಕೆಗಳ ಆಟ;
ಆಟವಾಡುವುದೇ
ಅವುಗಳ ಪರಿಪಾಟ.
ಕೂಡಿಸಿದರೆ
ಕೂಡುತ್ತಾ ಹೋಗುತ್ತದೆ;
ಕಳೆದಷ್ಟೂ
ಉಳಿಯತೊಡಗುತ್ತದೆ;
ಕೂಡಿಸಿ ಕಳೆದರೆ
ನಿಶ್ಯೇಷವಾಗಬೇಕಲ್ಲ,
ಹಾಗಾಗುವುದೇ ಇಲ್ಲ!
ಗುಣಿಸಿದರೆ
ಕಗ್ಗಂಟಾಗುತ್ತದೆ;
ಭಾಗಿಸಲು ಹೋದರೆ
ಭಾಗವಾಗುವುದೇ ಇಲ್ಲ.
ಬಡ್ಡಿಗೆ ಬಡ್ಡಿ
ಸೇರುತ್ತದೆ;
ಚಕ್ರಬಡ್ಡಿಯ ಚಕ್ರ
ಓಡುತ್ತಾ ಸಾಗುತ್ತದೆ.
ಲಸಾಅಗಳಾವೂ ಇಲ್ಲ;
ಮಸಾಅಗಳೇ ಎಲ್ಲ!

ಈ ಲೆಕ್ಕ
ಕೆಲವರಿಗೆ ಸರಳ;
ಇನ್ನು ಕೆಲವರಿಗೆ ಸರಾಸರಿ;
ಹಲವರಿಗೆ ಕಠಿಣಾತಿಕಠಿಣ.
ಸಹವಾಸ ಸಾಕೆಂದು
ಕೈಚೆಲ್ಲುವಂತಿಲ್ಲ;
ಯಾರದೋ ಕಣ್ ಪಾಯಿಂಟಿನಲ್ಲಿ
ಪರೀಕ್ಷೆ ಬರೆಯುತ್ತಿದ್ದೇವೆ ನಾವೆಲ್ಲ.

‍ಲೇಖಕರು Admin

November 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: