ಲೀಲಾ ಅಪ್ಪಾಜಿ ಫುಲ್ ಖುಷ್

 
ಬೆಂಗಳೂರಿನಲ್ಲೊಂದು ಕೆರೆ ಏರಿ ಮೇಲೆ ಹೋಗ್ತಾ ಇದ್ದೆವು.
ಕಾಜಾಣ ಕಂಡು ಗಾಡಿ ನಿಲ್ಲಿಸಲು ಕೋರಿ ಕೆಳಗಿಳಿದೆ.
ಕಾಜಾಣ ಸಿಕ್ಕಿತು, ಜೊತೆಗೊಂದು ಬೋನಸ್.
ನೂರಾರು ಮೈನಾಗಳು ಮೇಲೆದ್ದವು…
ದೂರ ಇದ್ದರೂ ಲೀಲಾ ಅಪ್ಪಾಜಿ ಫುಲ್ ಖುಷ್ ಸಿಕ್ಕ ನೋಟಕ್ಕೆ.
ದಿನಾ ಮನೆಯಂಗಳದಲ್ಲಿ ಮೈನಾ ಹಾರೋದನ್ನೆ ತುಂಬಿಸಿಕೊಳ್ಳುತ್ತಿದ್ದವಳಿಗೆ ಇದಕ್ಕಿಂತ ಇನ್ನೇನು ಬೇಕು!

leela appaji birds1
ಈ ಜಗತ್ತಲ್ಲಿ ಇರಲೇ ಇಲ್ಲಾರಿ ಆ ಕ್ಷಣ.
ಇಂದು ಬೆಳಿಗ್ಗೆ ಹೊಲ ಗದ್ದೆಗೆ ಕ್ಯಾಮೆರಾ ಹಿಡಿದು ಹೊರಟಿದ್ದೆ.
ನವಿಲ ಕೇಕೆ ಕೇಳಿಸಿ ಮೈ ಜುಂ ಅಂತು.
ಮೆಲ್ಲಗೆ ಗಾಡಿ ನಿಲ್ಲಿಸಿದೆ.
ಕ್ಯಾಮೆರಾ ಅಡ್ಜೆಸ್ಟ್ ಮಾಡುವಷ್ಟರಲ್ಲಿ ಐದಾರು ನವಿಲು ದೂರ ನಡೆದವು.
ನಾನು ಕುಂಟುತ್ತಾ ಪಟಪಟ ನಡೆದು ಪಟ ಹಿಡಿದೆ.
ಒಂದೇ ಕ್ಷಣ…
ಕಣ್ಣಮುಂದೆ ಈ ನವಿಲ ವೈಭವ.
ಸರಿ ಫೋಕಸ್ ಮಾಡುವ ಮುನ್ನ ಕ್ಲಿಕ್ ಮಾಡು ಇಲ್ಲಾಂದರೆ ಈ ದೃಶ್ಯ ಸಿಗಲ್ಲ- ಮನಸ್ಸು ಎಚ್ವರಿಸಿತು.
ಮುಂದಿನ ನಾಲ್ಕೈದು ಚಿತ್ರಗಳಲ್ಲಿ ಇದೂ ಒಂದು.

leela appaji birds2
ಕಣ್ಣಲ್ಲಿ ಕಣ್ಣಿಟ್ಟು ಬಾಯಿಬಿಟ್ಟು ನೋಡ್ತಾ ಇದ್ದೆ. ರೆಕ್ಕೆಯನ್ನು ಹರಡಿಕೊಂಡ ಹಕ್ಕಿ ಹಾರುತ್ತೇನೋ ಎಂದು ಶಾಟ್ ಗೆ ಕಾಯುತ್ತಿದ್ದೆ.
ರೆಕ್ಕೆ ಮಡಿಸಲೂ ಇಲ್ಲ, ಹಾರಲೂ ಇಲ್ಲ.
ಕುತೂಹಲ ಕೆರಳುತ್ತಾ ಹೋಯಿತು.
ರೆಕ್ಕೆಯ balanceನಲ್ಲಿ ತೆಳುಕಡ್ಡಿಯ ರೆಂಬೆಯ ಮೇಲೆ ಎಚ್ಚರಿಕೆಯಿಂದ ಕಾಲಿಡ್ತಾ ಇಡ್ತಾ ಮುನ್ನಡೆಯುತ್ತಿತ್ತು.
ಕ್ಯಾಮೆರಾ ಪಟ ಪಟ ಕ್ಲಿಕ್ಕಿಸುತ್ತಿತ್ತು.
ತಕ್ಷಣ ನೆನಪಾಯ್ತು ‘ಹಕ್ಕಿಗೆ ಮರದ ರೆಂಬೆ ಕೊಂಬೆಯಿಂದ ಬೀಳುವ ಭಯವಿಲ್ಲ, ಅದು ತನ್ನ ರೆಕ್ಕೆಯ ಮೇಲೆ ಭರವಸೆ ಇಟ್ಟಿರುತ್ತದೆ’
Theory ಕೇಳಿದ್ದ ನಾನು ಈಗ ಹತ್ತಿರದಿಂದ ನೋಡ್ತಾ ಮೈ ಜುಂ ಎಂದಿತು.
ವೃತ್ತಿಯಲ್ಲಿ ನಾನು ಎಲ್ಲಿ ಭರವಸೆ ಇಟ್ಡಿದ್ದೆನೋ ಅಲ್ಲಿಯೇ ನಂಬಿಕೆಗಳ ಅಡಿಪಾಯ ಕುಸಿದಿತ್ತು.
ಆದರೆ ನನ್ನೊಳಗಿನ ಆತ್ಮವಿಶ್ವಾಸ ಈ ಹಕ್ಕಿಗಳ ರೆಕ್ಕೆಯಂತೆ ಜೋಪಾನ ಮಾಡಿ ನನ್ನನ್ನು ಉಳಿಸಿದೆ. ಉಳಿಸಲಿದೆ.
Hats of my dear sweet little heart… ಬದುಕಿನ ಪಾಠದ ಪ್ರಾತ್ಯಕ್ಷಿಕೆ ಸಿಕ್ಕ
ಖುಷಿಯಿಂದ ಒಂದು ಪೋಸ್ ಎಂದೆ.
ಹಕ್ಕಿ ‘ನಿನ್ನ ತಲೆ ಸುಮ್ಮನಿರು, ಎತ್ತಿದ ಕಾಲು ಕೆಳಗಿಡುವ ಬಗ್ಗೆ ಒದ್ದಾಡ್ತಾ ಇದ್ದೀನಿ… ಪೋಸ್ ಅಂತೆ ‘ ಎಂದು ತಲೆತಗ್ಗಿಸಿ safest ಜಾಗ ನೋಡುತ್ತಿತ್ತು…
10-12 ಚಿತ್ರ, ಜೀವನದ ಪಾಠ ನನಗುಳಿಯಿತು.

leela appaji3
 
 

‍ಲೇಖಕರು Avadhi

March 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. lakshman rao

    ಮೊದಲಿಗೆ ಲೀಲಾ ಅಪ್ಪಾಜಿ ಅವರಿಗೆ ಅವಧಿ ಕಡೆಯಿಂಧ ನನ್ನ ಅಭಿನಂದನೆಗಳು ನಿಮ್ಮ ವಯಸ್ಸಿಗೂ ಮಿರಿಧ ಅನುಭವ ತುಂಬಾ ದೊಡ್ಡದ್ದು ಅದಕ್ಕೆ ನನ್ನ ಧನ್ಯವಾಧಗಳು . ನೀವು ಸೆರೆಹಿಡಿಧ ಆ ಹಸಿರು ಹುಲ್ಲುಗಾವಲಿನ ಮಧ್ಯ ಚಂಧದ ಚಿಲಿಪಿಲಿ ಗೊರವಂಕ ಹಕ್ಕಿಗಳು , ಕೊಕ್ಕರೆ ಮತ್ತು ಕಣ್ಣು ಪಿಳಿಸುವ ನವಿಲು ಎಲ್ಲವೂ ಮನಸ್ಸಿಗೆ ಖುಷಿ ಕೊಡುತ್ತದೆ ಎನ್ನುವಧಕ್ಕೆ ಬೇರೊಂದು ಮಾತು ಬೇಕಿಲ್ಲ .ನಿಮ್ಮ ರಟ್ಟಿಯ ಒಲವು ಹೀಗುತಿರಲಿ ಹೀಗೆ ಸದಾ ನಿಮ್ಮ ಹವ್ಯಾಸ ಮುಂಧುವರೆಯಲಿ.
    “ವಿಜಯಸಾರಥಿಯಂಧು ಗರುಡ ಧ್ವಜನ ಮೂರ್ತಿಯ ಭಕ್ತಿ ಪೂರ್ವಕವಾಗಿ ಭಜಿಸುತಿಪ್ಪ ಮಹಾತ್ಮರಿಗೆ ಸರ್ವತ್ರಧಲ್ಲಿ ಒಲಿದು
    ವಿಜಯವನು ತಾನಾಗಿ ಸಲಹುವ ಬುಜಗ ಭೂಷಣ ಪೂಜಾ ಚರಣಂಬುಜ ವಿಭೂತೀಧ ಭುವನ ಮೋಹನ ನಿರ್ಲೇಪ ”
    ಜೆ ಎನ್ ಲಕ್ಷ್ಮಣ್ ರಾವ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: