‘ಲಿಲಿಪುಟ್ಟಿ’ಯ ನಿದ್ದೆಗನಸು!

ಎಂ ಆರ್ ಕಮಲ

ಬೆಳೆಬೆಳೆದು ದೊಡ್ಡವಳಾದಂತೆ ತಾನು ವಾಸವಾಗಿದ್ದ ಮನೆ, ಬೀದಿ, ತೋಟ ಎಲ್ಲವೂ ಅವಳ ಕಣ್ಣಿಗೆ ಚಿಕ್ಕದಾಗಿ ಹೋಯಿತು. ಜಗತ್ತಿಗೆ ಬೆಳಕನ್ನು ತೆರೆದಿದ್ದ ‘ಕಿಟಕಿ’ ಪುಟ್ಟ ಕಿಂಡಿಯಂತೆ, ಹರಟೆ ಹೊಡೆಯುತ್ತಿದ್ದ, ಪಗಡೆ ಆಡುತ್ತಿದ್ದ, ಕಂಬದಾಟದ ‘ದೊಡ್ಡ'(!) ಜಗುಲಿ ಅಂಗೈ ಅಗಲವಾಯಿತು. ಅಜ್ಜನ ‘ದೊಡ್ಡ ಮನೆ’ ಬೊಂಬೆಯಾಟದ ಮನೆಯಾಗಿಹೋಯಿತು. ಅವಳ ಬಳಿ ಚಿಕ್ಕವಳಿದ್ದಾಗ ‘ಗಲಿವರನ ಪ್ರವಾಸ’ ಎಂಬ ಚಿತ್ರಗಳಿಂದ ತುಂಬಿ ಹೋಗಿದ್ದ ಪುಟ್ಟ ಕತೆ ಪುಸ್ತಕವಿತ್ತು.

ಬೆಳಗ್ಗೆಯೆದ್ದು ಅಜ್ಜನ ಮನೆಗೆ ಓಡುತ್ತಿದ್ದುದೇ ಈ ಪುಸ್ತಕದ ಚಿತ್ರಗಳ ನೋಡಲು. ಎರಡು ಭಾಗಗಳ ಆ ಪುಸ್ತಕದಲ್ಲಿ ಮೊದಲನೆಯದೇ ಹೆಚ್ಚು ಪ್ರಿಯ. ಗಲಿವರನ ಹಡಗು ಮುಳುಗಿ ‘ಲಿಲಿಪುಟ್’ ದ್ವೀಪದ ಕಡಲ ದಂಡೆಗೆ ಬಂದು ಬಿದ್ದಾಗ ಸುತ್ತ ನೆರೆದ ಲೆಕ್ಕವಿರದಷ್ಟು ಆರಿಂಚಿನ ‘ಲಿಲಿಪುಟ್’ ಗಳು! ಅವನ ಮೇಲೆ ಅವರು ಬಿಟ್ಟ ಸೂಜಿಗಿಂತ ಚಿಕ್ಕ ಬಾಣಗಳು.

ಒಂದು ಬಾರಿ ಮೈಮುರಿದರೆ ಬಿದ್ದು ಹೋಗುವ ಬಂಧನದ ಹಗ್ಗಗಳು! ಹತ್ತಿಂಚಿನ ಮನೆಗಳು, ಐದಿಂಚಿನ ಕುದುರೆಗಳು. ಆಹಾ, ಎಲ್ಲವೂ ಇಷ್ಟಿಷ್ಟು, ಇಷ್ಟಿಷ್ಟು. ಮುಂದಿನ ಕತೆ ನಮಗೆ ನಿಮಗೆ ಬೇಡ. ಅದೇ ಗಲಿವರ ಮತ್ತೆ ಪ್ರವಾಸ ಹೊರಡುತ್ತಾನೆ. ಬಿರುಗಾಳಿಗೆ ಸಿಕ್ಕ ಹಡಗು ವಿಧಿಯಿಲ್ಲದೇ ‘ಬ್ರಾಬ್ದಿನ್ಗ್ ನಾಗ್’ ದ್ವೀಪಕ್ಕೆ ಬರಬೇಕಾಗುತ್ತದೆ. ಈಗ ಎಲ್ಲವು ತಿರುವು ಮುರುವು. ಹುಲ್ಲು ಕಡ್ಡಿಗಳು ಮರಗಳಂತಿವೆ. ಮನುಷ್ಯರು ಎಪ್ಪತ್ತು ಅಡಿಯಷ್ಟು ಎತ್ತರವಿದ್ದಾರೆ.

ಎಲ್ಲರೂ ಗಲಿವರನೆಂಬ ‘ಲಿಲಿಪುಟ್ಟ’ನನ್ನು ಬಿಟ್ಟ ಕಣ್ಣುಗಳನ್ನು ಬಿಟ್ಟು ಅಚ್ಚರಿಯಿಂದ ನೋಡುತ್ತಿದ್ದಾರೆ. ಮುಂದೇನಾಯಿತು ಎನ್ನುವುದು ಈ ಕತೆಯಲ್ಲೂ ನಮಗೆ ಬೇಡ. ‘ಲಿಲಿಪುಟ್ಟಿ’ಯಾಗಿದ್ದ ಅವಳು ‘ಬ್ರಾಬ್ದಿನ್ಗ್ ನಾಗ್’ವರೆಗೂ ಪ್ರವಾಸ ಮಾಡಿದ್ದಾಳೆ. ‘ಲಿಲಿಪುಟ್’ನಲ್ಲಿದ್ದಾಗ ‘ಬ್ರಾಬ್ದಿನ್ಗ್ ನಾಗ್’ ಆಗಿ, ‘ಬ್ರಾಬ್ದಿನ್ಗ್ ನಾಗ್’ನಲ್ಲಿದ್ದಾಗ ‘ಲಿಲಿಪುಟ್ಟಿ’ಯಾಗಿ ಅಯೋಮಯದ ಬದುಕು. ಕೆಲವರು ಬರೀ ನಿದ್ದೆ ಮಾಡುತ್ತಾರೆ. ಮತ್ತೆ ಕೆಲವರು ಬರೀ ಕನಸು ಕಾಣುತ್ತಾರೆ. ನಿದ್ದೆಗನಸಿನಲ್ಲಿ, ಕನಸಿನ ನಿದ್ದೆಯಲ್ಲಿ ಎರಡು ದ್ವೀಪಗಳ ನಡುವೆ ಇವಳು ಮಾತ್ರ ಸಂಚರಿಸುತ್ತಲೇ ಇದ್ದಾಳೆ!

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: