ಲಾಕ್ ಡೌನ್ ನೆರಳಲ್ಲಿ…

ಮಹಾಂತೇಶ ಮಾಗನೂರ

ಮಾಯವಾಗಿದೆ ರಸ್ತೆಯಲ್ಲಿನ

ಕಿರಿ ಕಿರಿ ಕರ್ಕಶ ಧ್ವನಿ;

ಕೆಲವೊಮ್ಮೆ ನಮ್ಮದೇ ಮಾತು

ನಮಗೆ ಪ್ರತಿಧ್ವನಿ!

ಬೆಳಿಗ್ಗೆ ಎಬ್ಬಿಸುತ್ತಿದ್ದ ಅಲಾರಾಂ

ಪಡೆದಿದೆ ವಿಶ್ರಾಂತಿ;

ಒಂದೆರಡು ಗಂಟೆ ಹೆಚ್ಚಿನ ನಿದ್ದೆಗೆ

ಎಲ್ಲವೂ ಶಾಂತಿ ಶಾಂತಿ!

ಹೊಗೆಯುಗುಳುವ ವಾಹನಗಳಿಲ್ಲದೆ

ಸ್ವಚ್ಛವಾಗಿದೆ ಗಾಳಿ;

ಗಿಡಮರಗಳು ಗಾಳಿಗೆ ತಲೆದೂಗಿ

ಸೂಸುತಿವೆ ತಂಗಾಳಿ!

ಮಾಲಿನ್ಯದಿ ಮಸುಕು ಮಸುಕಾಗಿ

ಕಾಣುತ್ತಿತ್ತು ನೀಲಿ ಬಾನು;

ಪಾರದರ್ಶಕವೀಗ, ಕಾಣುತ್ತಿಲ್ಲ

ಭೂಮಿ ಬಾನಿನ ಮಧ್ಯ ಬೇರೇನು!

ತಲೆಯಲ್ಲಿ ಬಿತ್ತಿ ಬಿಟ್ಟಿದ್ದೇವೆ

ಸ್ವಚ್ಛತೆಯ ಮಹತ್ವ;

ಕಷ್ಟವಿದ್ದರೂ ಬೆಳೆಸುತ್ತಿದ್ದೇವೆ

ಒಳ್ಳೆಯ ವ್ಯಕ್ತಿತ್ವ!

ಮಕ್ಕಳ ಜೊತೆ ಊಟ ಆಟ

ಮನೆಯವರೊಂದಿಗೆ ಕೂಟ;

ಕಲಿಯುತ್ತಿದ್ದೇವೆ ಇತಿಮಿತಿಯಲ್ಲಿ

ನಿಭಾಯಿಸುವ ಜೀವನದ ಪಾಠ!

ಬೇಕೋ ಬೇಡವೋ ಜಗತ್ತಿನ

ಆಗುಹೋಗುಗಳಿಗೆ ನೀಡುತ್ತಿದ್ದೇವೆ ಕಿವಿ;

ಓದುವ ಬರೆಯುವ ಹವ್ಯಾಸ ಹೆಚ್ಚಾಗಿ

ಇನ್ನಷ್ಟು ಉತ್ಸಾಹಭರಿತ ಕವಿ!

 

‍ಲೇಖಕರು avadhi

April 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: