ಬದಲಾವಣೆಗೆ ಒಂದು ಕುರ್ಚಿ ಸಾಲದು..

“ಬದಲಾವಣೆಗೆ ಒಂದು ಕುರ್ಚಿ ಸಾಲದು ನೂರು ಸಿಂಹಾಸನಗಳೇ ಬೇಕು”

ವಿಶ್ವಮೂರ್ತಿ ಹವಲ್ದಾರ್

ನೂರು ಸಿಂಹಾಸನಗಳು ಕೇವಲ ಜೀವನ ಕಥೆಯಲ್ಲ. ಇದು ಐತಿಹಾಸಿಕ ಮತ್ತು ಸ್ಥಳೀಯ ವಿಚಾರಣೆಯ ಸಂಕೇತವಾಗಿದೆ. ಹಣ, ಸ್ಥಾನಮಾನ ಅಥವಾ ಶಕ್ತಿಯಿಂದ ತೆಗೆದುಹಾಕಲಾಗದ ವ್ಯವಸ್ಥೆಯನ್ನು ಎದುರಿಸುತ್ತಿರುವ ವ್ಯಕ್ತಿಯ ಕಥೆ.

ಜಯಮೋಹನ್ ಅವರು ನಿರೂಪಿಸಿದ ಕೆ. ಪ್ರಭಾಕರನ್ ಅವರು ಕನ್ನಡಕ್ಕೆ ಅನುವಾದಿಸಿದ ‘ನೂರು ಸಿಂಹಾಸನಗಳು’ ಕಾದಂಬರಿಯನ್ನು ಈಗಷ್ಟೇ ಓದಿ ಮುಗಿಸಿದ್ದೇನೆ.  ಜಾತಿ ವ್ಯವಸ್ಥೆ ಮತ್ತು ವ್ಯವಸ್ಥೆಯ ಭಾಗವಾಗಿ ಮಾನವೀಯತೆಯೊಂದಿಗೆ ಮಾತ್ರ ಹೋರಾಡುವ ಮೂಲ ಬಣಗಳ ಕಥೆ ಇದು.

ನಾವು ಈ ತಾಯಿ ಮತ್ತು ಮಗನನ್ನು ಜಗತ್ತಿನ ಎಲ್ಲಿಯಾದರೂ ಭೇಟಿ ಮಾಡಬಹುದು. ಈ ಕಾದಂಬರಿಯು ಜಾತಿ ಆಧಾರಿತ ಅಸಮಾನತೆಗಳ ಸಂಕೀರ್ಣ ವಿಷಯ ಮತ್ತು ಮೀಸಲಾತಿ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಪರಿಶೋಧಿಸುತ್ತದೆ. ಕೇವಲ 60+ ಪುಟಗಳ ಕಾದಂಬರಿಯಲ್ಲಿ ಸೂಕ್ತ ನುಡಿಗಟ್ಟುಗಳನ್ನು ಬಳಸಿರುವುದರಿಂದ ಎಲ್ಲಿಯೂ ಭೋಧನೆ ಮಾಡಿದಂತೆ ಅಥವಾ ಯಾವುದೇ ಒಂದು ತೀರ್ಪು ನೀಡಿರುವಂತೆ ಕಾಣಿಸಿಲ್ಲದಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ.

ಆಡಳಿತ ವರ್ಗ ಯಾವಾಗಲೂ ಮೇಲ್ವರ್ಗದವರ ಹಿಡಿತದಲ್ಲಿರುವ ಭಾರತೀಯ ಪರಿಸ್ಥಿತಿಗಳನ್ನು ಈ ಕಾದಂಬರಿ ಪರಿಶೋಧಿಸುತ್ತದೆ.  ಧರ್ಮಪಾಲ ಅವರು ಅಧಿಕಾರ ವಹಿಸಿಕೊಂಡಾಗಲೂ ಸಹ ಕೇಳುವ ಪ್ರಶ್ನೆಗಳು ಮತ್ತೆ ಮತ್ತೆ ಆ ಹಿಡಿತಗಳನ್ನು ತೋರಿಸುತ್ತದೆ.

ಆ ತಾಯಿಯ ಪ್ರತಿ ಮಾತುಗಳು ಆ ಸಮಾಜದಲ್ಲಿ ಉತ್ತಮ ಜಾತಿಯವರೆನಿಸಿಕೊಂಡವರ ಕೀಳು ನಡತೆಯ, ಕಪ್ಪು ಮತ್ತು ಬಿಳಿಯರ ನಡುವಿನ ಅಸಮಾನತೆಗಳ ನಡುವಿನ ಅಸಹನೆಯಾಗಿದೆ. ಅದೇ ಅವರಿಗೆ ಅವರ ಸೊಸೆಯ ಮೇಲೆ ಅಷ್ಟು ದ್ವೇ‍ಷಕ್ಕೆ ಕಾರಣವಾಗಿದೆ ಎಂದು ನನಗೆ ಅನಿಸುತ್ತದೆ.

ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದ ಕಪ್ಪನೆಂಬ ವ್ಯಕ್ತಿ ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಐ.ಎ.ಎಸ್‌ ಆಧಿಕಾರಿಯಾಗಿ ಧರ್ಮಪಾಲನಾದ ವ್ಯಥೆಯ ಕತೆಯೇ ಈ “ನೂರು ಸಿಂಹಾಸನಗಳು”. ಅವರು ತಮ್ಮ ಬಾಲ್ಯದಲ್ಲಿ, ಶ್ರೀ ನಾರಾಯಣ ಗುರುಗಳ ಮೂರನೇ ತಲೆಮಾರಿನ ಶಿಷ್ಯ ಪ್ರಜಾನಂದನ್ ಅವರಿಂದ ದತ್ತು ಪಡೆಯುವ ಮೊದಲು ವಿವಿಧ ಕೊಳೆಗೇರಿಗಳ ನಡುವೆ ಅವರು ತಮ್ಮ ತಾಯಿಯೊಂದಿಗೆ ಅಲೆಮಾರಿ ಜೀವನವನ್ನು ನಡೆಸುತ್ತಿದ್ದರಿಗೆ ಆಹಾರ, ಆಶ್ರಯ ಮತ್ತು ಶಿಕ್ಷಣವನ್ನು ನೀಡಿ ಐ.ಎ.ಎಸ್ ಅಧಿಕಾರಿಯಾಗುವಂತೆ ಪ್ರೇರೆಪಿಸಲಾಗುತ್ತದೆ.

ಈ ಕಾದಂಬರಿಯ ಒಂದು ಸನ್ನಿವೇಶವೊಂದು ಓದುಗರನ್ನು ಮೌನಿಯಾಗಿಸಿಬಿಡುತ್ತದೆ.

ಐ.ಎ.ಎಸ್‌. ಸಂದರ್ಶನಕ್ಕೆ ಬಂದ ಧರ್ಮಪಾಲರ ಬಳಿ ಸಂದರ್ಶಕ ಮಂಡಳಿಯಲ್ಲಿದ್ದ ಸದಸ್ಯರೊಬ್ಬರು “ನೀವು ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಸಂಧರ್ಭದಲ್ಲಿ ಹಾಗೂ ಅದೇಶವನ್ನೂ ಹೊರಡಿಸಬೇಕಾದ ಪ್ರಕರಣದಲ್ಲಿ, ಒಂದು ಕಡೆ ನ್ಯಾಯ ಮತ್ತು ಮತ್ತೊಂದು ಕಡೆ ನಿಮ್ಮ ಜಾತಿಗೆ ಸೇರಿದ ‘ಬೇಡರವ’ರು ಇದ್ದರೆ , ನೀವು ಯಾವ  ತೀರ್ಮಾನ ತೆಗೆದುಕೊಳ್ಳುತ್ತೀರಿ?”

ಆಗ ಧರ್ಮಪಾಲ ತಮ್ಮ ಜೀವನಾನುಭವದಿಂದ ಉತ್ತರಿಸುತ್ತಾರೆ:

“ಒಂದು ಕಡೆ ‘ಬೇಡರವ’ನನನ್ನು ಮತ್ತೊಂದು  ಕಡೆ ಮನುಷ್ಯನನ್ನು ನಿಲ್ಲಿಸಿ ಸಮಾನತೆ ಎನ್ನುವ ಮೌಲ್ಯವನ್ನೊಳಗೊಂಡ ಧರ್ಮದ ಆಧಾರದ ಮೇಲೆ  ಹೇಳುವುದಾದರೆ, ಆ ಕ್ಷಣದಲ್ಲೇ ಬೇಡರವ ಅನ್ಯಾಯಕ್ಕೆ ಬಲಿಯಾದವನಂತೆ ಮಾರ್ಪಾಡಾಗಿಬಿಟ್ಟಿರುತ್ತಾನೆ, ಅವನು ಏನೇ ಮಾಡಿದ್ದರೂ ಅವನು ನಿರಪರಾಧಿಯಾಗಿರುತ್ತಾನೆ”

ಧರ್ಮಪಾಲರ ಈ ಮಾತುಗಳನ್ನು ಕೇಳಿ ಸಂದರ್ಶಕ ಮಂಡಳಿಯ ಸದಸ್ಯರೆಲ್ಲರೂ ಮೂಕರನ್ನಾಗಿ ಮಾಡುತ್ತವೆ.

ಎಂಥ ಪ್ರತಿಭಾವಂತನಿಗೂ ಅಂತಸ್ತು-ಜಾತಿಯ ಹೊಡೆತಗಳು ನಮ್ಮ ಸಮಾಜದಲ್ಲಿ ಹೇಗೆ ಬಲವಾಗಿ ಬೀಳುತ್ತವೆ ಎಂಬುದಕ್ಕೆ ಈ ಕಥನವೇ ಸಾಕ್ಷಿ. ಜೀವನದಲ್ಲಿ ಕಠಿಣವಾದ ಪರೀಕ್ಷೆಗಳನ್ನು ಅಷ್ಟೇ ಕಷ್ಟದದಿಂದ ದಾಟಿ ಬಂದ ಜಾತಿಯಿಂದ ‘ಬೇಡರವ’ರಾಗಿದ್ದ ಐ.ಎ.ಎಸ್‌ ಅಧಿಕಾರಿಯೊಬ್ಬರು ಲೇಖಕ ಜಯಮೋಹನ ಅವರ ಹತ್ತಿರ ಹೇಳಿದ ಜೀವನದ ಕತೆಯ ರೂಪಕವಿದು.

ಡಾ. ಮಾಣಿಕ್ಯಂ ಪಾತ್ರ ಭಾರತದಲ್ಲಿ ಜಾತಿ ಪದ್ದತಿ ಹೇಗೆ ಅಸ್ತಿತ್ವದಲ್ಲಿದೆ ಎನ್ನುವುದಕ್ಕೆ ಒಂದು ಉದಾಹರಣೆ. ಡಾಕ್ಟರ್ ಅಗಬೇಕು ಎಂದು ಕಷ್ಟಪಟ್ಟು ಓದಿ ಡಾಕ್ಟರ್ ಅದರೂ ಅಲ್ಲಿನ ವ್ಯವಸ್ಥೆ ಅದಕ್ಕೆ ಅವಕಾಶ ಕೊಡದೆ ಅವರಿಗೆ ಹೇಗೆ ಮಾನಸಿಕವಾಗಿ ಹಿಂಸಿಸುತ್ತದೆ ಮತ್ತು ಮಾತುಗಳಿಂದ ಹೇಗೆ ಜರಿಯುತ್ತದೆ, ಕೊನೆಗೆ ಧನಪಾಲ ವರದಿಯೇ ಅವರ ಪಾಲಿಗೆ ಮುಳ್ಳಾಗುವಂತೆ ಮಾಡುತ್ತದೆ.

ಅಂತಹ ಅಧಿಕಾರದಲ್ಲಿದ್ದರೂ “ಸಾಹೇಬ”ನೆಂದು ಜನರಿಂದ ಕರೆಸಿಕೊಂಡರೂ ಎಲ್ಲವೂ ಇತರೆ ಉತ್ತಮ ಜಾತಿಯವರಿಂದ ನಡೆಸಲ್ಪಡುತ್ತವೆ ಎಂಬ ಸತ್ಯ ಅರಿವಾದಾಗ ಈ ವ್ಯವಸ್ಥೆಯನ್ನು ಬದಲಿಸಲು ಮತ್ತು ಈ ಭಿಕ್ಷಾಟನೆ ಮಾಡುವ ತಾಯಿಯ ಹೃದಯ ಮತ್ತು ಅದರ ಎಲ್ಲಾ ತರಹದ ಹಸಿವುಗಳನ್ನು ನೀಗಿಸಲು ಒಂದು ಕುರ್ಚಿ ಸಾಲದು, ನೂರು ಸಿಂಹಾಸನಗಳೇ ಬೇಕೆಂದು ಸಾರುವ ಕಥನ.

ಸಾಮಾಜಿಕ ಆಗು-ಹೋಗುಗಳನ್ನು ಸದಾ ಬೆರುಗಣ್ಣಿನಿಂದ ನೋಡುವ, ಅದಕ್ಕೆ ಸದಾ ಮೊದಲಿಗರಾಗಿ ಸ್ಪಂದಿಸುವ ಯುವಜನತೆ ಓದಲೇ ಬೇಕಾದ ಪುಸ್ತಕ ಈ “ ನೂರು ಸಿಂಹಾಸನಗಳು”

‍ಲೇಖಕರು avadhi

April 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: