ಲಾಕ್‌ಡೌನ್ ಹೊತ್ತಿನಲ್ಲಿ ‘ಮದ್ಯಸಾರ’

ವಸುಧೇಂದ್ರ

ಮದ್ಯಪಾನ ಕುರಿತು ಕಡು ವ್ಯಾಮೋಹದಿಂದ ಬರೆದ ಈ ಪದ್ಯಗಳ ಪುಸ್ತಕವನ್ನು ನನ್ನಂತಹ ಮದ್ಯವಿಮುಖಿ ಪ್ರಕಟಿಸಿದ್ದು ವಿಶೇಷವೇನಲ್ಲ. ಈ ಪದ್ಯಗಳು ಎಂತಹವರಿಗೂ ಕಿಕ್ ಕೊಡುವಷ್ಟು ಚುರುಕಾಗಿವೆ. ಚಂದ್ರಶೇಖರ ಕಂಬಾರ, ಯೋಗರಾಜ್ ಭಟ್ – ಮುಂತಾದ ಹಿರಿಯರೆಲ್ಲರೂ ಮನತುಂಬಿ ಹೊಗಳಿದ ಪದ್ಯಗಳ ಗುಚ್ಛವಿದು.

ಈಗ ಈ ಪುಟಾಣಿ ಪುಸ್ತಕ ಮತ್ತೆ ಲಭ್ಯವಿದೆ ಎನ್ನುವುದು ಸಂಭ್ರಮದ ವಿಷಯ. ಈ ಲಾಕ್‌ಡೌನ್ ಹೊತ್ತಿನಲ್ಲಿ ಮದ್ಯ ಸಿಗುತ್ತಿದೆಯೋ ಇಲ್ಲವೋ ನಾಕಾಣೆ. ಆದರೆ ‘ಮದ್ಯಸಾರ’ ಪುಸ್ತಕವನ್ನಂತೂ ನಿಮಗೆ ತಲುಪಿಸುತ್ತೇವೆ. ಮಸ್ತಕದ ವೈರಸ್ಸಿಗೆ ಪುಸ್ತಕವೇ ಲಸಿಕೆ ಎಂದು ನಾನು ನಂಬುತ್ತೇನೆ.

ಈ ಪುಸ್ತಕಕ್ಕೆ ಮೊದಲಿಗೆ Thirty ರೂಪಾಯಿ ಬೆಲೆ ಇಟ್ಟಿದ್ದೆ. ಈಗ ಕಾಗದ ಮತ್ತು ಮುದ್ರಣದ ವೆಚ್ಚದಿಂದಾಗಿ Fifty ಇಡೋಣ ಎಂದು ನಿರ್ಧರಿಸಿದೆ. ನನ್ನ ಅಜ್ಞಾನವನ್ನು ಒಪ್ಪದ ಅಪಾರ, ಈ ಪುಸ್ತಕದ ಬೆಲೆ Thirty, Sixty ಅಥವಾ Ninety ಮಾತ್ರ ಆಗಿರಬೇಕು ಎಂದು ವಾದಿಸಿದ. ಆದ ಕಾರಣ ಇದರ ನೂತನ ಬೆಲೆ Sixty!

ಬರೀ wine ಮಾತ್ರವಲ್ಲ, ಈ ಪುಸ್ತಕದಲ್ಲಿ ಬಳಸಿದ line ಗಳೂ ನಶೆ ಏರಿಸುವಷ್ಟು ಸೊಗಸಾಗಿವೆ. ಹಿರಿಯ ಕಲಾವಿದರಾದ ಪ.ಸ. ಕುಮಾರ್ ಅತ್ಯಂತ ಪ್ರೀತಿಯಿಂದ ಈ ರೇಖಾ ಚಿತ್ರಗಳನ್ನು ಬರೆದು, ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ. ಅಪಾರನ ಈ ಪುಸ್ತಕಕ್ಕೆ ಯಾರು ಮುಖಪುಟ ಮಾಡಿದರು ಎಂದು ಹೇಳುವುದು ತಪ್ಪಾಗುತ್ತದೆ. ನಿಮ್ಮ ಊಹೆಗೆ ಬಿಡುವೆ.

ಪ್ರತಿಗಳು ಬೇಕೆಂದವರು ಕೆಳಗಿನ ನಂಬರಿಗೆ ಕರೆ ಮಾಡಿ:
Raghuveer Samarth 99459 39436

ಜೇಬಿನಲ್ಲಿ ಇಡಬಹುದಾದ ಈ ಪುಟಾಣಿ ಪುಸ್ತಕದಲ್ಲಿ 116 ಪುಟಗಳಿವೆ. ನಿಮ್ಮ ಪುಸ್ತಕ ಓದುವ ಉತ್ಸಾಹ ಹೆಚ್ಚಿಸಲು ಎರಡು ಸ್ಯಾಂಪಲ್ ಪದ್ಯಗಳು ಇಲ್ಲಿವೆ.

ಕುಡಿದ್ರೂ ಲಿಮಿಟ್ಟಲ್ಲಿರಬೇಕು ಎನುವ
ಜಾಣರು ತಿಳಿಯುವುದೆಂದು
ಎಲ್ಲ ಲಿಮಿಟ್ಟುಗಳ ಮೀರಬೇಕೆಂದೇ
ನಾವು ಕುಡಿಯುವುದೆಂದು

ರೊಕ್ಕ ಇದ್ದರಷ್ಟೇ ಸಾಲದು
ದುಃಖ ಇರಬೇಕು ಕುಡಿಯುವನಿಗೆ
ನಕ್ಕರೇನು ಚಂದ ಕುಡುಕ
ಬಿಕ್ಕಬೇಕು ಎರಡು ಗುಟುಕು ನಡುವೆ

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: