ಲಕ್ಷ್ಮಣ ವಿ.ಎ ಗೆ ವಿಭಾ ಸಾಹಿತ್ಯ ಪ್ರಶಸ್ತಿ

 

‘ಅವಧಿ’ಯ ಲೇಖಕ, ವೃತ್ತಿಯಿಂದ ವೈದ್ಯರಾಗಿರುವ ಡಾ ವಿ ಎ ಲಕ್ಷ್ಮಣ್ ಅವರು ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮೂಲತಃ  ಬೆಳಗಾವಿಯವರಾದ ಲಕ್ಷ್ಮಣ್ ಅವರ ‘ಅಪ್ಪನ ಅಂಗಿ’ ಕವನ ಸಂಕಲನದ ಹಸ್ತಪ್ರತಿಗೆ ಈ ಪ್ರಶಸ್ತಿ ದೊರೆತಿದೆ.

ಹಿರಿಯ ಸಾಹಿತಿಗಳಾದ ಪ್ರತಿಭಾ ನಂದಕುಮಾರ್ ಹಾಗೂ ಸುಬ್ಬು ಹೊಲೆಯಾರ್ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು 2020 ರ ‘ಮೇ ಸಾಹಿತ್ಯ ಮೇಳ’ದಲ್ಲಿ ನೆರವೇರುವುದು.

ವಿಭಾ ಸಾಹಿತ್ಯ ಪ್ರಶಸ್ತಿ-2019 ಪಡೆದ ಕವಿ ಡಾ.ಲಕ್ಷ್ಮಣ ವಿ.ಎ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ 1977 ರಲ್ಲಿ ಜನಿಸಿದ ಇವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮೋಳೆಯಲ್ಲೇ ನಡೆಯಿತು.

ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಪಿಯೂಸಿ ಮುಗಿಸಿದ ಲಕ್ಷ್ಮಣ್, ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ತಮ್ಮ ವೈದ್ಯಕೀಯ ಪದವಿ ಗಳಿಸಿದರು. ನಂತರ ಮೈಸೂರು ವಿ.ವಿಯಿಂದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ, ಮತ್ತು ಡಿಪ್ಲೋಮಾ ಇನ್ ಫಾರ್ಮಸಿಯನ್ನು ತುಮಕೂರಿನ ಕೊರಟಗೆರೆಯಲ್ಲಿ ಪಡೆದರು.

ಲಕ್ಷ್ಮಣ್ ಪ್ರಕಟಿಸಿದ ಪ್ರಥಮ ಕವನ ಸಂಕಲನ ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ವು ಕಣವಿ ಕಾವ್ಯ ಪ್ರಶಸ್ತಿ ಹಾಗೂ ಮುಂಬೈ ನೇಸರು ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದೆ.

‍ಲೇಖಕರು avadhi

November 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Vasundhara k m

    ಡಾ. ಲಕ್ಷ್ಮಣರಿಗೆ ‘ವಿಭಾ ಪ್ರಶಸ್ತಿ’ ಸಂದಿರುವುದಕ್ಕೆ ಖುಷಿ ಎನಿಸುತ್ತಿದೆ. ವೈಯಕ್ತಿಕವಾಗಿ ಪರಿಚಯವಿರುವ ಸಹೃದಯಿ ಕವಿಮಿತ್ರರಾಗಿರುವ ಲಕ್ಷ್ಮಣರು ಕಾವ್ಯದ ಕಡು ಮೋಹಿ, ಲೇಖನ ಬರಹದಲ್ಲೂ ಸೃಜನಶೀಲರು… ಅಭಿನಂದನೆಗಳು ಅವರಿಗೆ.

    ಪ್ರತಿಕ್ರಿಯೆ
  2. N.Ravikumar telex

    ಅಭಿನಂದನೆಗಳು ಲಕ್ಷ್ನಣ್ ಅವರಿಗೆ

    ಪ್ರತಿಕ್ರಿಯೆ
  3. Kusuma patel

    ಲಕ್ಷ ಣ್ ಅವರಿಗೆ ಅಭಿನಂದನೆಗಳು‌

    ಪ್ರತಿಕ್ರಿಯೆ
  4. Kusuma patel

    ಲಕ್ಷ್ಮಣ್ ಅವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  5. Lakshman

    ಪ್ರತಿಕ್ರಿಯಿಸಿದ ವಸುಂಧರಾ ಮೇಡಮ್ ,ಬಾಬು ಮೆಂಡನ್ ಸರ್,ರವಿಕುಮಾರ್ ಸರ್,ಕುಸುಮಾ ಪಟೇಲ್ ಮೇಡಮ್,ಶ್ರವಣ ಕುಮಾರಿ ಮೇಡಮ್ ಕೊಟ್ರೇಶ ತಂಬ್ರಾಳಿ ಅಮರಗೋಳಮಠ ಸರ್ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: