ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರ್ರೀ ಲಂಕೇಶ್ ಊರು ಕೊನಗವಳ್ಳಿಗೆ ಬರೋರು, ಬೇಗ ಹತ್ಕೊಳ್ಳಿ.. ರೈಟ್.. ರೈಟ್..

ಪಿ ಲಂಕೇಶರ ಕೊನಗವಳ್ಳಿಯಲ್ಲಿ

ಮಾಕಳಿ ಗಂಗಾಧರಯ್ಯ

ಪ್ರತೀ ಓದಿನಲ್ಲೂ ಹೊಸ ಹೊಸ ಹೊಳಹುಗಳನ್ನು ಕೊಡಬಲ್ಲ ಲೇಖಕರಲ್ಲಿ ಲಂಕೇಶ್ ಕೂಡಾ ಒಬ್ಬರು.

ಕಳೆದ ವಾರ ಪೂರಾ ಲಂಕೇಶರ ಕಥೆಗಳನ್ನು ಓದಿದ ನನಗೆ , ನಡುವೆ ಸಿಕ್ಕ ಒಂದು ರಜೆಗೆ ನಾನೊಂದು ರಜೆ ಹಾಕಿ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯನ್ನೂ, ಸುರಿವ ಮಳೆಯ ನಡುವೆ ಅದರ ಸೊಬಗನ್ನೂ ಸವಿಯಲೆಂದು ಹೋದಾಗ ಹಾಗೇ ಕೊನಗವಳ್ಳಿ ಗೆ ಕೂಡಾ…

ಲಂಕೇಶ ಹುಟ್ಟಿದ ಮನೆ, ನಡೆದಾಡಿದ ನೆಲ, ಹೊಲ ಗದ್ದೆ, ಕರಿಯಮ್ಮನ ಗುಡಿ…ರೋಮಾಂಚನದ ಕ್ಷಣಗಳು….

ಅಲ್ಲಿನ ಜನರಿಗೆ ಅವರು ಈಗಲೂ ಲಂಕೇಶಪ್ಪ.

lankesh ooru1

 

lankesh ooru2

 

lankesh ooru4

lankesh ooru16

lankesh ooru8

lankesh ooru11

lankesh ooru6

lankesh ooru9

lankesh ooru10

lankesh ooru14

lankesh ooru5

ankesh ooru7

‍ಲೇಖಕರು g

8 March, 2016

3 Comments

  1. kirana

    ‘Konagavalli’ya
    Hasiru patrada haravu,bili hoo habba,suttastu kasuvu,nondastu hoo hannu…
    Kariyavanna gudithava nam Tiptur seemeya jana photo clickissi namagella darshana madisidhake thank you lot…!!!
    By,
    Chi.na.halli
    Kirana

  2. Sangeeta Kalmane

    “ಯಾರ್ರೀ ಅಡಕಳ್ಳಿ ಕತ್ರೀ” ಹಾ! ಇದೇನು ಹೀಗೆ ಬರಿತಿದ್ದಾರೆ ಅಂದ್ಕೋಬೇಡಿ. ಇಲ್ಲಿಯ ಫೋಟೊ ನೋಡುತ್ತಾ ನಾನೂ ನಮ್ಮಪ್ಪನ ಮನೆಗೆ ಹೋಗಿ ಬಂದೆ.

    ಹೀಗೆ ಇದೆ ಕಂಡ್ರೀ ನಮ್ಮಪ್ಪನ ಮನೆ. ಹಳೆ ಕಾಲದ್ದು. ಅದೇ ಕೂಗು ಬಸ್ಸ ಸ್ಟಾಪ ಬಂದಾಗ.

    ತುಂಬಾ ಹಿಂದೆ ಹೋಗಿಬಿಟ್ಟೆ ಲಂಕೇಶಣ್ಣಾ. ಆಗ ನಾನು ಬ್ಯಾಂಕಿನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ. ನಾನೊಬ್ಬಳೆ ಹೆಣ್ಣು. ಎಲ್ಲರೂ ಮೀಸೆ ಹೊತ್ತ ಗಂಡಸರೆ. ವಾರಕ್ಕೊಮ್ಮೆ ಬರುವ ಲಂಕೇಶ ಪತ್ರಿಕೆಯನ್ನು ಒಬ್ಬ ಪಿಗ್ಮೀ ಕಲೆಕ್ಟರನಿಗೆ ತಪ್ಪದೆ ತರುವಂತೆ ತಾಕೀತು ಮಾಡಿದ್ದರು ಶಾಖಾಧಿಕಾರಿಗಳು. ಆ ದಿನ ಅದೇನು ಸಂಭ್ರಮ. ಆಗಲೆ ಆಹ್ವಾನಕ್ಕೆ ಬಜ್ಜಿ ಟೀ order. ಪತ್ರಿಕೆ ಮೊದಲು ಶಾಖಾಧಿಕಾರಿ ಕೈ ಸೇರಬೇಕು. ಅವರು ಒಮ್ಮೆ ಮಗುಚಿ ಹಾಕೋದೆ ಕಾಯುತ್ತಿದ್ದ ಉಳಿದವರು ಅವರ ಟೇಬಲ್ಲಿನ ಸುತ್ತ ಸುತ್ತುವರಿದು ತಗ್ಗಿ ಬಗ್ಗಿ ಅಲ್ಲೆ ಓದುವ ಕಸರತ್ತು. ಯಾವಾಗ ಅವರ ಕೈಯಿಂದ ಈಚೆ ಬಂತೊ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಪುಟ ಹರಿದಾಡುತ್ತಿತ್ತು. “ಏಯ್ ಆ ಪುಟ ಕೊಡಪ್ಪ continuation ಇದೆ ಓದಬೇಕು, ಇರ್ರೀ ಇಂಟರೆಸ್ಟಿಂಗ ಇದೆ, ಓದುತ್ತಿದ್ದೇನೆ.” ಹೀಗೆ ಸಾಗುತ್ತಿತ್ತು ಈ ಪತ್ರಿಕೆಯನ್ನು ಓದುವ ಕಚ್ಚಾಟ. ನಾನೊ ಟೀ ಬಜ್ಜಿ ಸಂಪ್ಲೈಯರ್. ಎಲ್ಲರ ಓದು ಮುಗಿದ ಮೇಲೆ ನನ್ನ ಟೇಬಲ್ಲಿಗೆ ಪುಟಗಳು ಬರುತ್ತಿದ್ದವು ಚೆಲ್ಲಾಪಿಲ್ಲಿಯಾಗಿ‌. ಹಾಗೆ ನನಗೆ ತಾಕೀತು ಎಲ್ಲರಿಂದ; ಸರಿಯಾಗಿ ಜೋಡಿಸಿಡಿ ಬಾಯೋರೆ, ಯಾವ ಪೇಜೂ ಮಿಸ್ ಆಗಬಾರದು. ಆಮೇಲೆ ಅಲ್ಲಿರುವ ವಿಷದ ಬಗ್ಗೆ ಚಚೆ೯, ನಗು ದಿನವೆಲ್ಲ ಬ್ಯಾಂಕ ಪೂರ ಲಂಕೇಶ ಮಯ. ಶಾಖಾಧಿಕಾರಿಯವರೂ ಕೌಂಟರಿನಲ್ಲೇ ಠಿಕಾಣಿ. ಒಮ್ಮೊಮ್ಮೆ ಮಧ್ಯಾಹ್ನದ ಊಟ ಹೋಟೇಲ್ ನಲ್ಲಿ ಸೆಲೆಬ್ರೇಷನ್ ಖುಷಿಗೆ.

    ಅಬ್ಬಾ! ಮೊದಲು ಇದೆಲ್ಲ ಹೊಸದು ನನಗೆ. ಯಾಕೆ ಈ ಪತ್ರಿಕೆ ಕಂಡರೆ ಇಷ್ಟೊಂದು ಕಚ್ಚಾಡುತ್ತಾರೆ ಅನಿಸುತ್ತಿತ್ತು. ಆದರೆ ಯಾವಾಗ ಈ ಪತ್ರಿಕೆ ಓದೊ ಹುಚ್ಚು ನನಗೂ ಹಿಡೀತು ನಾನೂ ಹಾಗೇ ಆದೆ.

    ಅದೇನ್ರೀ ಯಾವುದೇ ವಿಷಯ ಕಣ್ಣಿಗೆ ಬೀಳಲಿ ನ್ಯಾಯಯುತವಾಗಿ ಖಂಡಿಸಿ ಆಡು ಭಾಷೆ ತೂರಿಸಿ ಬರೆಯುವುದರಲ್ಲಿ ಎತ್ತಿದ ಕೈ ನಮ್ಮ ಲಂಕೇಶಣ್ಣ. ಅಗಲವಾದ ಕಣ್ಣು, ಆ ಮೀಸೆ, ಆ ದಪ೯ ಮುಖಭಾವ ಹೇಗ್ರೀ ಮರೆಯೋಕೆ ಆಗುತ್ತೆ. “ಬದುಕಿನಾಚೆಗೂ ಬದುಕಿರುವರು” ಅವರು.

    ಇದೋ ನನ್ನದೊಂದು ಹೃದಯಪೂವ೯ಕ ನಮನ!

  3. ನಾಗರಾಜ್ ಹರಪನಹಳ್ಳಿ

    ಮೂರು ಸಲ ಮೇಷ್ಟ್ರನ್ನು ಕಂಡಿದ್ದೆ……
    ಮೊದಲ ಸಲ:
    ಮಾಕಳಿ ಗಂಗಾಧರಯ್ಯ ಅವರು ಲಂಕೇಶ್ ಅವರ ಊರಿಗೆ ಭೇಟಿ ನೀಡಿ, ಅ‍ಲ್ಲಿನ ಭಾವಚಿತ್ರಗಳನ್ನು ಹತ್ತು ನಿಮಿಷ ನೋಡಿದ ಮೇಲೆ, ಮೇಷ್ಟ್ರು ಅವರ ಕುರಿತು ಎರಡು ಮಾತು ದಾಖಲಿಸಲೇ ಬೇಕು ಅನ್ನಿಸಿ, ಬರೆಯುತ್ತಿದ್ದೇನೆ. ಲಂಕೇಶ್ ಅವರನ್ನು ನಾನು ಮೊದಲು ನೋಡಿದ್ದು ಧಾರವಾಡದ ಕಲಾಭವನದ ಮೈದಾನದಲ್ಲಿ. ಅವರು ಪ್ರಗತಿರಂಗ ಕಟ್ಟಿಕೊಂಡು ಅದರ ಪ್ರಚಾರದಲ್ಲಿ ತೊಡ‍ಗಿದ್ದರು. ಪ್ರಗತಿ ರಂಗವನ್ನು ರಾಜಕೀಯ ಪಕ್ಷವಾಗಿ ಅಸ್ಸಾಂ ಗಣಪರಿಷತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ನೆಲೆಯೊಂದನ್ನು ಕಟ್ಟಬೇಕೆಂಬ ಕನಸು ಅವರಲ್ಲಿ ಇತ್ತು ಅಂತ ಕಾಣುತ್ತೆ. ನಾನಾಗ ಧಾರವಾಡದಲ್ಲಿ ಡಿಗ್ರಿ ಓದುತ್ತಿದ್ದೆ. ಕರ್ನಾಟಕ ಕಾಲೇಜಿನ ವಿದ್ಯಾರ್ಥಿ. ಆಗ ತಾನೇ ಲಂಕೇಶ್ ಪತ್ರಿಕೆಯನ್ನು ಧಾರವಾಡದ ಐಎಂಎ ಲೈಬ್ರರಿಯಲ್ಲಿ ಓದಲು ಪ್ರಾರಂಭಿಸಿದ್ದೆ. ಕಲಾಭವನದ ಮೈದಾನದಲ್ಲಿ ಲಂಕೇಶ್ ಅವರ ಭಾಷಣ ಇತ್ತು. ಬಹಿರಂಗ ಸಭೆ ಇತ್ತು. ಅವರು ಕಲಾಭವನಕ್ಕೆ ಬಂದು ಮಾತು ಆರಂಭಿಸುತ್ತಿದ್ದಂತೆ ಸಣ್ಣಗೆ ಮಳೆ ಪ್ರಾರಂಭವಾಯಿತು. ಲಂಕೇಶ್ ಮಾತು ಆರಂಭಿಸಿದ್ರು. “ಮಳೆ ಬರುವಾಗ ಹೆಚ್ಚು ಮಾತನಾಡಬಾರದು. ಹಸಿದವನ ಎದುರು ಸಹ ಮಾತು ನಿರರ್ಥಕ. ಮಳೆ ಬರುವಾಗ ನೀವೆಲ್ಲಾ ಮಳೆಯಲ್ಲಿ ನಿಂತುಕೊಂಡು , ನಾನು ಮಾತನಾಡುವುದೆಂದರೆ ಹಿಂಸೆಯಾಗುತ್ತದೆ. ಮಾತು ಹಿಂಸೆ ಆಗಬಾರದು” ಎಂದರು. ಪ್ರಗತಿರಂಗದ ಉದ್ದೇಶಗಳನ್ನು ಹೇಳುತ್ತಲೇ, ` ರಾಜಕೀಯ ಪಕ್ಷ ಅಂದರೆ ನಮ್ಮ ಸುತ್ತ ಅನೇಕ ಭ್ರಷ್ಟರು ನುಸುಳಿರುತ್ತಾರೆ. ನಾವು ಎಚ್ಚರದಿಂದಿರಬೇಕು’ ಎಂದರು. ಅಷ್ಟು ನೈತಿಕ ಪ್ರಜ್ಞೆ ಅವರನ್ನು ಸದಾ ಕಾಡುತ್ತಿತ್ತು.
    ಎರಡನೇ ಸಲ:
    ಲಂಕೇಶ್ ಅವರ ಕಲ್ಲು ಕರಗುವ ಸಮಯ ಕೃತಿ ಇರಬೇಕು. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತ್ತು. ದಾವಣಗೆರೆ ಡೆಂಟಲ್ ಕಾಲೇಜು ಸಭಾ ಭವನ ಇರಬೇಕು. ಅಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ. ಕಾರಂತಜ್ಜ ಪ್ರಶಸ್ತಿ ಪ್ರಧಾನ ಮಾಡಲು ಬಂದಿದ್ದ ನೆನಪು. ( 1991ರ ಸಮಯ). ಆ ವಾರ ಲಂಕೇಶ್ ಪತ್ರಿಕೆಯಲ್ಲಿ ಕರೀಗೌಡ ಬೀಚನಳ್ಳಿ ಅವರ ಗುಬ್ಬಚ್ಚಿ ಕತೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಾನಾಗಲೇ ಲಂಕೇಶ್ ಪತ್ರಿಕೆಯನ್ನು ನಿರಂತರವಾಗಿ ಓದಲು ಆರಂಭಿಸಿದ್ದೆ. ಮೇಷ್ಟ್ರನ್ನು ಕಂಡ ನಾನು `ಸರ್, ಗುಬ್ಬಚ್ಚಿಗಳು ಕತೆ ತುಂಬಾ ಚೆನ್ನಾಗಿದೆ ಎಂದೆ. ಅಲ್ಲೇ ಇದ್ದ ಕರೀಗೌಡ ಬೀಚನಳ್ಳಿ ಅವರತ್ತ ತಿರುಗಿದ ಲಂಕೇಶ್ ರು, ನೋಡಪ ಕರೀಗೌಡ, ನಿನ್ನ ಕತೆ ಬಗ್ಗೆ ಈ ಹುಡುಗ ಮಾತಾಡುತ್ತಿದ್ದ. ಮೆಚ್ಚಿಗೆ ಆಯಿತಂತೆ ಎಂದ್ರು. ಇಷ್ಟೇ ನಾನು ಲಂಕೇಶ್ ಅವರ ಜೊತೆ ಮಾತನಾಡಿದ್ದು . ಉಳಿದಂತೆ ಅವರ ಕತೆ `ಮಾರಲಾಗದ ನೆಲ’ ಹಾಗೂ ಇತರ ಕತೆಗಳು ನಾಟಕ ಸಂಕ್ರಾತಿ, ಗುಣಮುಖ, ಟೀಕೆ ಟಿಪ್ಪಣಿ, ಮರೆಯುವ ಮುನ್ನ ಜೊತೆ ಮಾತನಾಡಿದ್ದೇ ಹೆಚ್ಚು.
    ಕೊನೆಯ ಸಲ:
    ಲಂಕೇಶ್ ನಿಧನರಾದ ಸುದ್ದಿ ರೇಡಿಯೋದಲ್ಲಿ ಮತ್ತು ಟಿ.ವಿ.ಯಲ್ಲಿ ಕೇಳಿದೆ. ತಕ್ಷಣ ಹೊನ್ನಾವರದಲ್ಲಿದ್ದ ಗೆಳೆಯ ಸುರೇಶ್ ತಾಂಡೇಲ್ ಗೆ ಪೂನ್ ಮಾಡಿದೆ. ನಾನಾಗ ಕಾರವಾರದಲ್ಲಿದ್ದೆ. ಜನವಾಹಿನಿ ವರದಿಗಾರನಾಗಿದ್ದೆ. ಹೊನ್ನಾವರದಲ್ಲಿದ್ದ ಸುರೇಶ್ ಮತ್ತು ನಾನು ಬಸ್ ನಲ್ಲಿ ಬೆಂಗಳೂರಿಗೆ ಪಯಣಿಸಿದೆವು. ಮರುದಿನ ತೋಟದ ಮನೆಯತ್ತ ಅವರ ಅಂತಿಮ ಪಯಣವಿತ್ತು. ಪತ್ರಿಕೆಯ ಕಚೇರಿಯಲ್ಲಿ ಲಂಕೇಶ್ ಚಿರನಿದ್ರೆಗೆ ಜಾರಿದ್ದರು. ಅವರನ್ನು ಹತ್ತಿರದಿಂದ ನೋಡಿದೆ. ಧೀಘ್ರ ನಿದ್ರೆಯಲ್ಲಿದ್ದರು. ಏನು ಮಾತಾಡಲು ಆಗಲಿಲ್ಲ. ಎಲ್ಲರೂ ಮೌನವಾಗಿದ್ದರು. ತೋಟದ ಮನೆಯತ್ತ ಹೋದೆವು. ಲಂಕೇಶ್ ಅವರನ್ನು ಲಿಂಗಾಯತ ಸಂಪ್ರದಾಯದಂತೆ ಮಣ್ಣು ಕೊಡಲಾಯಿತು. ಕೊನಗವಳ್ಳಿ ಯಿಂದ ಬಂದಿದ್ದವರ ಹಠದಂತೆ ಶವ ಸಂಸ್ಕಾರ ನಡೆಯಿತು. ಅಪರಾಹ್ನದ ವೇಳೆಗೆ ಎಲ್ಲವೂ ಮುಗಿಯಿತು. ನಂತರ ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ಸಭೆ. ಲಂಕೇಶ್ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋಗುವ ಕುರಿತು ಚರ್ಚೆ. ನಟರಾಜ್ ಹುಳಿಯಾರ,ಬಸವರಾಜು, ಸಿ.ಎಸ್.ದ್ವಾರಕನಾಥ ಸರ್ ಸೇರಿದಂತೆ ಹಲವರಿದ್ದ ನೆನಪು. ಲಂಕೇಶ್ ಪತ್ರಿಕೆಗೆ ಸತತ ಬರೆಯುತ್ತಿದ್ದವರು ಇದ್ದರು. ಕವಿತಾ ಮೇಡಂ ಮತ್ತು ಗೌರಿ ಮೇಡಂ ಕ್ಷಣ ಹೊತ್ತು ಇದ್ದು, ನೀವೆಲ್ಲಾ ಆಲೋಚಿಸಿ, ಮುಂದಿನ ಹೆಜ್ಜೆಯನ್ನು ನಿರ್ಧರಿಸಿ ಎಂದು ಹೇಳಿ ಹೋಗಿದ್ದರು. ಸ್ವಲ್ಪ ಹೊತ್ತು ಪತ್ರಿಕೆ ಕಚೇರಿಯಲ್ಲಿದ್ದು, ನಾವು ಸಹ ಹೊರಟೆವು. ಲಂಕೇಶ್ ಅವರ ನಿಷ್ಠುರತೆಯನ್ನು ಸ್ಮರಿಸಿಕೊಳ್ಳುತ್ತಾ ಮೆಜೆಸ್ಟಿಕ್ ಹತ್ತಿರ ಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರಿನಿಂದ ಹೊನ್ನಾವರ ಮಾರ್ಗವಾಗಿ ಕಾರವಾರಕ್ಕೆ ಬರುವ ಬಸ್ ಹತ್ತಿದೆವು. ಲಂಕೇಶ್ ಮೇಷ್ಟ್ರ ನಿಧನರಾದಾಗ ಒಂದು ಆಟೋದ ಹಿಂದೆ ಒಂದು ಬ್ಯಾನರ್ ಕಟ್ಟಲಾಗಿತ್ತು. ಲಂಕೇಶ್ ಅಮರರಾದರು ಎಂದು ಬರೆದ ನೆನಪು ನನಗೆ. ಹೌದು ಲಂಕೇಶ್ ಅವರು ಇಂದಿಗೂ ನಮ್ಮ ಬದುಕಿನಲ್ಲಿ ಎಚ್ಚರವಾಗಿದ್ದಾರೆ. ಸದಾ ಎಚ್ಚರಿಸುತ್ತಲೇ ಇರುತ್ತಾರೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading