ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶರ ನೆನೆದು ನೀಲು ಶೈಲಿಯ ಪದ್ಯಗಳು

ಜೋಗಿ


ಲಂಕೇಶ್ -1

ನಾನು ಅರಿಯಲು
ಯತ್ನಿಸಿದಷ್ಟೂ ಕಗ್ಗಂಟಾಗುವ
ಅವಳ ವರ್ತನೆಯ
ನೆನೆಯುತ್ತಿದ್ದೆ.
ಅವಳು ನಿನ್ನ ಒಳದನಿ
ಅಂದು ಚಕಿತಗೊಳಿಸಿದಿರಿ.
ಈಗ ನನ್ನನ್ನು ನಾನು ಹೇಗೆ
ತಿಳಿಯಲಿ ಗುರುವೆ?
 
ಲಂಕೇಶ್ -2

ಮುಸ್ಸಂಜೆಯ ಕಥಾ
ಪ್ರಸಂಗದಲ್ಲಿ ಉಮಾಪತಿಯಾಗಿ
ಸೇರಿಕೊಳ್ಳಲೇ ಎಂದು ಕೇಳಿದ್ದಕ್ಕೆ
ವಾಮನನಾಗು ಎಂದು ಶಪಿಸಿದ್ದೇಕೆ?
ಸಾವಂತ್ರಿ ನನ್ನೊಳಗೆ ಹುಟ್ಟಿ
ನನ್ನೊಳಗೆ ಬದುಕುತ್ತಿರುವ
ಸತ್ಯವನ್ನು ನೀವು ನಿರಾಕರಿಸಲಾರಿರಿ.
 
ಲಂಕೇಶ್ -3

ನಿಮ್ಮನ್ನು ಓದುತ್ತಾ
ಬೆಳೆದವರು ಕ್ರಮೇಣ
ನಿಮ್ಮಿಂದ ಬರೆಸಿಕೊಳ್ಳಲು
ಅಪರಾಧಗಳ ಮಾಡತೊಡಗಿ
ಎಲ್ಲವೂ ದೈವನಿಯಾಮಕ
ಅನ್ನಿಸುವ ಹೊತ್ತಿಗೆ ನೀವು
ನಿರ್ಗಮಿಸಿದಿರಿ. ನಿಮ್ಮನ್ನು ಅನುಕರಿಸಿದವರು
ದಿವಂಗತರಾದರು.
 
ಲಂಕೇಶ್ -4

ನೀವು ಬೆಳ್ಳಂಬೆಳಗ್ಗೆ
ಬೈಸಿಕಲ್ ಕಲಿಸಿದ ಹುಡುಗಿ
ನಿಮ್ಮ ತೋಟದಲ್ಲಿ ಹೂ ಬಿಟ್ಟ
ಹುಳಿ ಮಾವಿನ ಮರ
ನಿಮ್ಮ ನೀಲುವನ್ನು
ನನ್ನ ಪರಿಸರದಲ್ಲೂ ಹುಡುಕಿದೆ.
ನಿಮ್ಮ ಕನ್ನಡಕ ಮಾತ್ರ
ಕೊನೆಗೂ ಸಿಗಲಿಲ್ಲ.
 
ಲಂಕೇಶ್ -5

ಚಂಚಲೆಯನ್ನು
ಭಗವದ್ಗೀತೆಯಂತೆ
ಕೇಡಿಗಳನ್ನು
ಅಡಿಗರ ಪದ್ಯದಂತೆ
ಪುಟ್ಟ ಪೋರರನ್ನು
ನೀಲುವಿನ ಏದುಸಿರಿನಂತೆ
ಗರತಿಯರನ್ನು
ಬೋದಿಲೇರ್ ಪದ್ಯದಂತೆ
ಕುಡಿದು ಮತ್ತೇರಿಸಿಕೊಂಡೆವು.
ನೀವು ಕೆನ್ನೆಯ ಮೇಲೆ ಕೈಯಿಟ್ಟು
ಕೌದಿ ಹೊದ್ದು ಕೂತುಬಿಟ್ಟಿರಿ.
(ಇನ್ನೂ ಇದೆ.. ಆಗಾಗ ನಿಮ್ಮ ಮುಂದೆ..)

‍ಲೇಖಕರು G

23 March, 2013

6 Comments

  1. mmshaik

    tumba chennaagive sir..

  2. vidyashankar

    ನಿಮ್ಮ ಕನ್ನಡಕ ಮಾತ್ರ
    ಕೊನೆಗೂ ಸಿಗಲಿಲ್ಲ
    Beautiful lines

  3. sathish babu

    ನಿಮ್ಮನ್ನು ಅನುಕರಿಸಿದವರು
    ದಿವಂಗತರಾದರು…
    …ನಿಜಕ್ಕೂ ಅದ್ಭುತ ಸಾಲುಗಳು ಸಾರ್! ನೀವು ಹೇಳಿದ್ದೂ ಸತ್ಯ!!
    -ಸತೀಶ್‌ಬಾಬು

  4. bharathi bv

    Chenda ide … next aagaaga yaavaga …?

  5. srinivas deshpande

    padyagalu tumbaa chennagive – srinivas deshpande

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading