ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈಲಿಗೊಂದು ಧನ್ಯವಾದ..

ರವಿಕುಮಾರ್ ಟೆಲೆಕ್ಸ್ 

ನಮ್ಮ ಪ್ರೀತಿಯ ಪ್ರಜಾಪ್ರತಿನಿಧಿಗಳೆ….

ನಮ್ಮ ನೆತ್ತರಿನಲ್ಲಿ
ಅದ್ದಿದ ರೊಟ್ಟಿಗಳನ್ನು
ಇಲ್ಲಿ ಬಿಟ್ಟು ಹೋಗುತ್ತಿದ್ದೇವೆ.
ತಿಂದು ನಿಮ್ಮ ತಲೆಮಾರಿನ
ಅಧಿಕಾರದ ಹಸಿವ ತೀರಿಸಿಕೊಳ್ಳಿ
ನಮ್ಮ ಹಸಿವ ಹಸಿವೆಂದು
ನಮ್ಮ ಕಣ್ಣೀರ ಕಣ್ಣೀರೆಂದೆ
ಅರಿಯದ ನಿಮ್ಮ ಕಣ್ಣು- ಕರುಳುಗಳು
ಎಂದೋ ಸತ್ತು ಹೋಗಿದ್ದವು.
ಅದು ಅಧಿಕಾರವೆಂಬ ರಣಸೋಂಕಿನಿಂದ

ರೈಲು ಹಳಿಯ ಮೇಲೆ ಚೆಲ್ಲಾಡಿದ
ನಮ್ಮ ದೇಹದ ಮಾಂಸ – ಮೂಳೆ
ತುಂಡುಗಳ ತಿಂದು ಧನ್ಯರಾಗಿ
ನಾವು ಸತ್ತ ಸುದ್ದಿಯನ್ನು ಚರಿತ್ರೆಯಲ್ಲಿ
ಸೇರಿಸಬೇಡಿ
ಕೊಂದವರ ಕುರಿತು ಪ್ರಶ್ನೆಗಳು
ಎದ್ದುಬಿಟ್ಟಾವು
ಈಗಲೆ ರಕ್ತಸಿಕ್ತ ರೈಲು ಹಳಿಗಳನ್ನು
ಸ್ಯಾನಿಟೈಷರ್ , ಪ್ಲೋರ್ ಲಿಕ್ವೀಡ್ ಹಾಕಿ
ತೊಳೆದು ಬಿಡಿ
ಬದುಕಿದ್ದೆವು ಎಂಬುದಕ್ಕೆ ಯಾವ
ಕುರುಹು ಸಿಗದಿರಲಿ
ನಿಮ್ಮಂಥ ನಿರ್ಮಾನುಷರ
ನಡುವೆ ನರಳುತ್ತಾ ಬದುಕುವುದಕ್ಕಿಂತ
ಸತ್ತಿದ್ದೆ ಸುಖ
ಕೊಂದ ರೈಲಿಗೊಂದು ಧನ್ಯವಾದ.

ಇಂತಿ ನಿಮ್ಮ
ಸೌಭಾಗ್ಯದೃಷ್ಟ
ವಲಸೆ ಕಾರ್ಮಿಕರು

‍ಲೇಖಕರು avadhi

9 May, 2020

2 Comments

  1. T S SHRAVANA KUMARI

    ಕರುಳಿರಿಯುವ ಕವಿತೆ

  2. Nagaraj Kamble

    ಮನುಷ್ಯರಿಗೆ ಮಾತ್ರ ಕಂಬನಿ ಉಕ್ಕಿಸುವ ಘಟನೆ.. ಕವಿತೆ ಹಿಡಿಸಿತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading