ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’

ರೇಖಾ ರಂಗನಾಥ

**

ನೀಲಾಕಾಶದಿ

ಇಳೆಗೆ ಚದುರಿದ್ದು

ರಶ್ಮಿಗಳೋ! ಸ್ವಪ್ನ ಗಳೋ!

ಮಧ್ಯಾಹ್ನದ

ಸುಡು ಬಿಸಿಲಿಗೆ

ಗಡಿಯಾರದ ಮುಳ್ಳುಗಳ

ಚಲನೆಯೇ ಸಾಕು!

ಸಂಜೆ ಮುಂಜಾವು

ಘಮ್ಮೆಂದ ಹೂ ಹಬ್ಬ

ತೊಟ್ಟು ಕಳಚಿದ ಕ್ಷಣ

ದರಗು ನಿಬಿಡ ಹಾಸು.

ಗೋಧೂಳಿ

ಕೆಂದುಟಿಯಲಿ ಮಿಂದು

ಕವಿತೆಯೊಂದು

ಪೂರ್ಣ ಚಂದಿರನಿರದ

ಕಾನಗತ್ತಲಿಗೆ

ಅಪೂರ್ಣ..

ಮಾತಿಗಿಳಿಯುವ

ಗೋಡೆ ಸ್ಥಬ್ಧ ಚಿತ್ರಗಳು

ಮೊನಚು  ಗೀರು ಗಾಯದಂತೆ

ಒಂದೊಮ್ಮೆ

ಮಿಣುಕು ದೀಪದ ಬೆಳಕು

ಭಗ್ನ ಸೇತುವೆಯ

ನಟ್ಟಿರುಳ ನಿರ್ಜನ ಹಾದಿಯಲೂ

ರಸ್ತೆಗೊಂದು ತಿರುವು

ತಿರುವಿಗೆ 

ಹಾದಿಯೊಂದು

ಹಗಲು ಹೊದ್ದು

ಧೋ! ಸುರಿವ ಮಳೆ

ತೆರೆದೆದೆಯ ಆಗಸವು

ಅಪ್ಪುತಿದೆ

ಮಣ್ಣ ಕಣ ಕಣವನು

ಮತ್ತೆ..

ಹಕ್ಕಿ ತುಡಿತ

ಚಿಗುರು ಮಾವು ಬೇವು.

‍ಲೇಖಕರು Admin MM

21 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading