ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ಗೌಡ ಕವಿತೆ- ಓದುವ ಮೊದಲೇ…

ರೇಖಾ ಗೌಡ

ಕೆಲವು ಪುಸ್ತಕಗಳ
ಗಬಗಬನೆ ಓದಲಾಗುವುದಿಲ್ಲ,
ಹಾಗೆ ಓದಿದರೆ ಆಳ ದಕ್ಕುವುದಿಲ್ಲ,
ಅಗಲದ ಅಂದಾಜೂ ಸಿಕ್ಕುವುದಿಲ್ಲ !

ಎಚ್ಚರದಲಿ ಓದುತಾ
ಅಡಿಗಡಿಗೆ ಅಚ್ಚರಿಗೊಳಗಾಗುತಾ
ಆಸ್ವಾದಿಸದೇ ಅನುಭವಿಸದೇ ಅರಗಿಸದೇ
ಕೆಲ ಪುಸ್ತಕಗಳ ಓದಲಾಗುವುದಿಲ್ಲ

ಯೋಚನೆ, ಭಾವನೆಗಳ ಲೋಕದಿಂದಾಚೆ ನಿಂತು
ಪುಸ್ತಕದ ಅಂತರಂಗವ ಮೌನದಲಿ ಆಲಿಸುವ ಸಮಯ!

ಆಗುವುದಲ್ಲಾ ಉಸಿರು ನಿಧಾನ,
ಬರುವುದಲ್ಲಾ ಆಳದಿಂದ ಉಸಿರು
ಆಘಾತಕ್ಕೊಳಗಾದ ಎದೆಗೆ ಪ್ರಾಣ ತುಂಬಲು !

ಆಹಾ ಓದು ಶುರುವಾಗುವ ಮೊದಲೇ
ಹುಡುಕಾಟ ಶುರು
ಅಂತರಂಗದೊಳಗೂ, ಬಹಿರಂಗದೊಳಗೂ!
ಅಕ್ಷರದಚ್ಚರಿಯಿಂದ ಆಗಾಗ ಆಘಾತಕ್ಕೊಳಗಾಗುವ ಜೀವಕೆ
ಹೌದೂ ಉಸಿರ ತುಂಬಲು ವಿರಾಮ ಕೊಳ್ಳಬೇಕಾಗುತ್ತದೆ ಮತ್ತೆ ಮತ್ತೆ
ಓದುವ ಮೊದಲೇ ಜೀವದಾಳ ಅರಿವಿಗೆ ಬಂದು ಕಂಗೆಡಿಸುತ್ತದೆ

ಓದುವ ಮೊದಲೇ,
ಕೆಲ ಪುಸ್ತಕಗಳ ಅಂತರಂಗ ಓದಿಬಿಡುತ್ತದೆ.

‍ಲೇಖಕರು Admin

28 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading