ಸುಧಾ ಆಡುಕಳ
ಕತ್ತಲೆ ಮರಗಳನ್ನು ಮತ್ತು
ಹೂಗಳನ್ನು ಮರೆಯಾಗಿಸಬಹುದು
ಕಣ್ಣಿನಿಂದ,
ಆದರೆ ಪ್ರೀತಿಯನ್ನು ಮರೆಯಾಗಿಸಲು
ಸಾಧ್ಯವಿಲ್ಲ ಈ ಮಣ್ಣಿನಿಂದ.
ಬಟ್ಟೆಯನ್ನು ಯಾರೋ ಬಡಿದು ಒಗೆಯುತ್ತಿದ್ದಾರೆ
ಝಾಡಿಸುತ್ತಿರುವುದು ಬಟ್ಟೆಯನ್ನಲ್ಲ,
ಅದರೊಳಗಿನ ಧೂಳನ್ನ

ಆತ್ಮಸಾಕ್ಷಿಯ ಆಳಕ್ಕೆ ಇಳಿ
ನಿನ್ನೊಳಗೊಂದು ಹರ್ಷದ
ನದಿ ಸದಾ ಹರಿಯುವುದು
ಅದೆಲ್ಲಿಂದಲೋ ತೂರಿ ಬಂದಿದೆ ನನ್ನ ಆತ್ಮ
ಎಂದು ಅರಿವಾದ ಮೇಲೆಯೇ ಅಲ್ಲಿಗೆ ಹೊರಟಿರುವೆ
ಸಾಣೆಗೆ ಹೆದರುವ ನೀನು
ನುಣುಪುಗೊಳ್ಳುವುದಾದರೂ ಹೇಗೆ?
ಬಿಡುಗಡೆ ಮತ್ತು ಬಂಧನದ ನಡುವಿನ
ಸಮತೋಲನವೇ ಜೀವನ
ಮೌನವಾಗಿರುವ ನನ್ನೊಳಗೆ
ಮಹಾಸ್ಫೋಟದ ಕುದಿಯಿದೆ






0 Comments