ರಿಮೇಕ್ , ಡಬ್ಬಿಂಗ್ ಎರಡಕ್ಕೂ ವಿರೋಧ.

ಜಿ ಎನ್ ನಾಗರಾಜ್ 

ನಾನು ರಿಮೇಕ್ , ಡಬ್ಬಿಂಗ್ ಎರಡಕ್ಕೂ ವಿರೋಧ.

ಜನಪರ ಚಳುವಳಿಯಲ್ಲಿ ತೊಡಗಿರುವವರಿಗೆ ಈ ವಿಷಯವನ್ನು ವಿಶ್ಲೇಷಿಸಲು ಜನ ಸಂಸ್ಕೃತಿಯೇ ತೋರು ನಕ್ಷತ್ರ.

ಕರ್ನಾಟಕದ ವೈವಿಧ್ಯಮಯವಾದ ಬದುಕನ್ನು , ಸಾಮಾಜಿಕ ಸ್ತರಗಳು ಮತ್ತು ಅವುಗಳ ನಡುವಣ ಸಂಬಂಧಗಳ ಸ್ವರೂಪವನ್ನು ಚಿತ್ರಿಸುವ ಚಿತ್ರಗಳು ನಮಗೆ ಬೇಕು. ಆ ದಿಕ್ಕಿನತ್ತ ನಡೆಯುವ ಸಾಂಸ್ಕೃತಿಕ ನೀತಿ ಬೇಕು.

ಕರ್ನಾಟಕದ ವಾಸ್ತವದ ಬದುಕನ್ನು ಬಿಂಬಿಸುವ ಸ್ವಮೇಕ್ ಚಿತ್ರ, ಟಿವಿ ಸರಣಿಗಳಷ್ಟೇ ನಮ್ಮ ಜನರ ಅರಿವನ್ನು ಬೆಳೆಸುವ ಮನರಂಜನೆಯಾಗಬಲ್ಲದು. ಈ ಬದುಕನ್ನು ಮರೆಮಾಚುವಂತಹ ಯಾವುದೇ ಕಣ್ಕಟ್ಟು ಮನರಂಜನೆಯಲ್ಲ , ಮಂಕುಬೂದಿ. ಶೈಕ್ಷಣಿಕವಾದವುಗಳಿಗೆ ಕೂಡ ಸೀಮಿತ ಅವಕಾಶವಷ್ಟೇ ಇರಬೇಕು.

ದುಡ್ಡಿದ್ದವನೇ ದೊಡ್ಡಪ್ಪ ಹಾಲಿವುಡ್ , ಬಾಲಿವುಡ್, ಟಾಲಿವುಡ್ , ತಯಾರಿಕೆಗಳನ್ನು ವಿಧಿಯಿಲ್ಲದೇ ನೋಡುವ ಅನಿವಾರ್ಯತೆ ತೊಲಗಬೇಕು. ಅನುಕರಣೆಗಳೂ ಕೂಡ ಸಲ್ಲ.

ಡಬ್ಬಿಂಗ್, ರಿಮೇಕ್ ಪ್ರಶ್ನೆಯ ಬಗ್ಗೆ ನಮ್ಮ ನಿಲುವು ಒಂದು ಕಡೆ ಭಾಷಾವಾರು ರಾಜ್ಯ ತತ್ವ, ಸ್ವಾಯತ್ತ ರಾಜ್ಯಗಳು ಪ್ರಜಾಪ್ರಭುತ್ವದ ಈ ತತ್ವಗಳು ಒಂದೆಡೆ ಜಾಗತೀಕರಣದ ಸಾಂಸ್ಕೃತಿಕ ಧಾಳಿ ಮತ್ತೊಂದೆಡೆ ಇವುಗಳ ಮೇಲೆ ಆಧಾರಪಟ್ಟಿರಬೇಕು.

ಡಬ್ಬಿಂಗ್ ಎಂದರೆ ಸಾಹಿತ್ಯದ ಅನುವಾದದಂತೆಯೇ ಎಂದು ಸಮೀಕರಿಸುತ್ತಿದ್ದಾರೆ ! ಹೌದೇ ?

ಈ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಎಂದು ನನ್ನ ಅನಿಸಿಕೆ .

ವಿಶ್ವದೆಲ್ಲಾ ಉತ್ತಮ ಸಾಹಿತ್ಯ ಕನ್ನಡಕ್ಕೆ ಬರಲಿ. ನಮ್ಮ ಅರಿವನ್ನು , ಅನುಭವದ ಪರಿಧಿಯನ್ನು ವಿಸ್ತರಿಸಲಿ. ಹಾಗೇ ಜಗತ್ತಿನೆಲ್ಲಾ ಚಲನ ಚಿತ್ರಗಳೂ ಬರಲಿ. ಫಿಲ್ಮ್ ಫೆಸ್ಟಿವಲ್ ಮಾತ್ರ ಏಕೆ, ಫಿಲ್ಮ್ ಸೊಸೈಟಿ ಎಂಬುದನ್ನೊಂದು ಚಳುವಳಿಯಾಗಿಸಿ ವರ್ಷವೆಲ್ಲಾ ನೋಡುವ ಅವಕಾಶ ಪಡೆದುಕೊಳ್ಳೋಣ.

ಅದನ್ನು ಈಗ ಇಂಗ್ಲಿಷ್ ಉಪ ಶೀರ್ಷಿಕೆಗಳ ಬದಲಾಗಿ ಕನ್ನಡ ಉಪ ಶೀರ್ಷಿಕೆಗಳೊಂದಿಗೆ ನೋಡುವಷ್ಟು ಪ್ರೇಕ್ಷಕರನ್ನು ಪಡೆದುಕೊಳ್ಳೋಣ. ಮುಂದೆ ಅಂತಹ ಚಿತ್ರಗಳನ್ನು ಫಿಲ್ಮ್ ಸೊಸೈಟಿ ಚಳುವಳಿಯ ಭಾಗವಾಗಿ ಡಬ್ಬಿಂಗ್ ಕೂಡ ಮಾಡಿ ನೋಡುವ ಪರಿಸರ ಸೃಷ್ಟಿಸಿಕೊಳ್ಳೋಣ.

‍ಲೇಖಕರು avadhi

March 6, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: