ಡಬ್ಬಿಂಗ್: ತಾವು ತಿಂದರೆ ಅನ್ನ, ಉಳಿದವರು ತಿಂದರೆ ಅಮೇಧ್ಯ!

 

ಡಬ್ಬಿಂಗ್ ಬೇಕೇ? ಬೇಡವೇ? ಚರ್ಚೆಯಲ್ಲಿ ಈಗ ವಿಮರ್ಶಕ ಡಿ ಎಸ್  ರಾಮಸ್ವಾಮಿ ಮಾತನಾಡಿದ್ದಾರೆ 

ನೀವೂ ಭಾಗವಹಿಸಿ 

ನಿಮ್ಮ ನೋಟವನ್ನು [email protected] ಗೆ ಮೇಲ್ ಮಾಡಿ 

ಡಿ ಎಸ್ ರಾಮಸ್ವಾಮಿ 

ಬಳಕೆದಾರನಾದ ಪ್ರೇಕ್ಷಕನಿಗೆ ಆಯ್ಕೆಯ ಸ್ವಾತಂತ್ರ್ಯ ನೀಡದೇ ತಾವು ಹೇಳಿದ್ದನ್ನೇ / ಮಾಡಿದ್ದನ್ನೇ ಉಣ್ಣಬೇಕೆಂಬ ಫರ್ಮಾನು ಹೊರಡಿಸುವ ಈ ಕನ್ನಡ ಪರ ಹೋರಾಟಗಾರರು ಎರಡುವರೆ ಸಾವಿರ ವರ್ಷದ ಇತಿಹಾಸವಿರುವ ಕನ್ನಡ ಕಲಿಸಿದ “ವಿವೇಕ”ವೆಂಬ ಅದ್ಭುತ ವಿಷಯದ ಮೊದಲ ಪಾಠಗಳನ್ನೇ ಮರೆತಿರುವಂತಿದೆ.

ಈ ಕ್ಷಣ ನಿಮ್ಮ ನಿಮ್ಮ ಮನೆಯಲ್ಲಿರುವ ಡಿಶ್/ಸ್ಯಾಟಲೈಟ್/ಕೇಬಲ್ ಟಿವಿಗಳ ಇತರ ಭಾಷೆಯ ಸಿನಿಮಾ ಚಾನೆಲ್ಲುಗಳನ್ನು ಬ್ರೌಸ್ ಮಾಡಿ ನೋಡಿ. ಈ ಡಬ್ಬಿಂಗ್ ವಿರೋಧೀ ಪಾಳಯಪಟ್ಟಿನ ಹೀರೋಗಳೇ ನಟಿಸಿರುವ ಕನ್ನಡ ಚಿತ್ರವೊಂದು ಬೇರೆ ಭಾಷೆಯಲ್ಲಿ ಮಾತಾಡುತ್ತಿರುತ್ತದೆ.

ತಾವು ತಿಂದರೆ ಅನ್ನ, ಉಳಿದವರು ತಿಂದರೆ ಅಮೇಧ್ಯ!

ಡಬ್ಬಿಂಗ್ ಬೇಕೋ ಬೇಡವೋ ನಿರ್ಧರಿಸುವುದು ಪ್ರೇಕ್ಷಕನ ಹಕ್ಕು ಮತ್ತು ಅವನು ಸಿನಿಮಾದ ಬಳಕೆದಾರ. ಅವನು ಹಳಸಿದ್ದನ್ನು ತಿನ್ನುತ್ತಾನೋ, ಬಿಸಿಯಾದದ್ದನ್ನು ತಿನ್ನುತ್ತಾನೋ, ಖಾರ, ಉಪ್ಪು, ಹುಳಿ ಅವನ ಇಚ್ಛೆ. ಅದು ಬಿಟ್ಟು ಅವನಿಗೆ ಪಥ್ಯದ ಊಟ ಕೊಡಲು ನೀವೇನು ಡಯಟಿಷಿಯನ್ನುಗಳ?
ಸಿನಿಮಾಕ್ಕೆ ಭಾಷೆಯ ಹಂಗು ಏಕೆ ಬೇಕು?
ಸಂಗೀತಕ್ಕೆ ಭಾಷೆಯ ಹಂಗು ಏಕೆ ಬೇಕು?
ಸಾಹಿತ್ಯಕ್ಕೆ ಸಮೃದ್ಧಿ ಬಂದದ್ದೇ ಅನುವಾದಗಳಿಂದ!

ಮೆಕಾಲೆ ಬರದೇ ಹೋಗಿದ್ದರೆ ಇವತ್ತಿಗೂ ದಾಸ್ಯದಲ್ಲೇ ಇರುತ್ತಿದ್ದೆವು. ಇಂಗ್ಲಿಷ್ ಕಲಿಯದಿದ್ದರೆ ನಮಗೇ ನಷ್ಟವಾಗುತ್ತಿತ್ತೇ ವಿನಾ ಇಂಗ್ಲಿಷಿಗಲ್ಲ. ಹಾಗೇ ಡಬ್ಬಿಂಗ್ ಕೂಡ. ಗೆಲ್ಲುವುದೋ ಸೋಲುವುದೋ ಅದು ನಾಳೆಯ ಮಾತು. ಸ್ವಿಟ್ಸರ್ ಲ್ಯಾಂಡು, ಇಬ್ಬರು ನಾಯಕಿಯರು, ಅದ್ದೂರಿ ತಯಾರಿ ಇದ್ದೂ ಸೋತು ಸುಣ್ಣವಾಗುತ್ತಿರುವ ನೀವು ಮೊದಲು ಜನಕ್ಕೆ ಬೇಕಾದ್ದನ್ನು ಅರಿಯಿರಿ. ಅದು ಬಿಟ್ಟು ಸುಮ್ಮನೇ ತಿವಿಯುವ ಮಾತಾಡಿ ಕನ್ನಡದ ಉದ್ಧಾರದ ಮಾತಾಡಿ ನೀವು ಉದ್ಧಾರವಾಗಬೇಡಿ. ಸಿನಿಮಾ ಕಾಸು ಕೊಟ್ಟು ನೋಡುವ ಪ್ರೇಕ್ಷಕನದ್ದೇ ವಿನಾ ದುಡ್ಡು ಹಾಕಿ ಜೂಜಿಗೆ ಕೂತ ನಿಮ್ಮದಲ್ಲ.

 

‍ಲೇಖಕರು admin

March 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: