ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ ಇನ್ನಿಲ್ಲವಾದಾಗ ದೇವನೂರು ಹೇಳಿದ್ದು..

‘…ರಾಜ್ ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ ಆಗ ಓಲೈಕೆ ರಾಜಕಾರಣದಲ್ಲಿ ನಿರತವಾಗಿದ್ದವು..’ ಎಂದು ಗೆಳೆಯ ಕೆ. ಪುಟ್ಟಸ್ವಾಮಿ ‘ಸಿನಿಮಾ ಯಾನ’ದಲ್ಲಿ ಬರೆದಿದ್ದಾರೆ. ಚಿಂತನಾರ್ಹ ಮಾತುಗಳು.

ಈ ಪುಸ್ತಕದಲ್ಲಿ ರಾಜ್ ಕುರಿತ ಅಧ್ಯಾಯದಲ್ಲಿ ನನ್ನ ಮೆಚ್ಚಿನ ಇನ್ನೊಂದು ಸಾಲು- ‘ರಾಜ್ ರ ತೆರೆಯ ಮೇಲಿನ ಅಭಿನಯ ಮನುಷ್ಯಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ಕೃತಕವೆಂಬಂತೆ ಕಾಣುತ್ತಿತ್ತು…’! ಎಂದು ಎನ್ ಎಸ್ ಶಂಕರ್ ತಮ್ಮ ನೆನಪುಗಳನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಅದನ್ನು ಓದಿದಾಗ, ಡಾ ರಾಜ್ ತೀರಿಕೊಂಡಾಗ ದೇವನೂರರು ಹೇಳಿದ ಮಾತು ನೆನಪಾಯ್ತು..

`ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ ಎಂದು ಸಾಹಿತಿ ದೇವನೂರು ಮಹಾದೇವ ತಮ್ಮ ಅನಿಸಿಕೆ ಹೇಳಿಕೊಂಡಿದ್ದರು.

 

‍ಲೇಖಕರು g

24 April, 2016

4 Comments

  1. ಹುಲಿಕುಂಟೆ ಮೂರ್ತಿ

    ಇದು ಮಹದೇವ…. ಗ್ರೇಟ್

  2. Radhika

    So true! I have always wondered how a person who has acted in versatile roles on screen can (pretend to) be so naive and innocent in real life.

  3. Suprabha

    nage tumba ishtavada patrike, modala sala odutiddene, nan e mail kottidene, kalistira?

  4. ningaraju

    ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ amazing sentence

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading