ರಾಜಶೇಖರ ಬಂಡೆ ಕವಿತೆ

– ರಾಜಶೇಖರ್ ಬಂಡೆ

ನನ್ನ ಬದುಕಿನ ಬಣ್ಣಗಳು, ನಾದಗಳು,
ವೈವಿಧ್ಯಮಯ ತಿರುವುಗಳು,
ಸಾಂದ್ರೀಕೃತಗೊಂಡ ನೆನಪುಗಳು,
ಲಯಬದ್ಧ ಸೋಲುಗಳು,
ರಾತ್ರಿಗಳನ್ನ ಕಣ್ತುಂಬಿಕೊಂಡು
ತುಳುಕುವ ಕಣ್ಣಾಲಿಗಳು,

ಎದೆಗಿಳಿವ ಪದ್ಯಗಳೂ, ಗಜ಼ಲ್ಗಳೂ,
ನನ್ನನ್ನು ಕುಡಿಯುವಂತೆ ಪ್ರೇರೇಪಿಸುತ್ತವೆ,
ನಾನೇನು ಹುಟ್ಟಿನಿಂದಲೇ ಕುಡುಕನಲ್ಲ,
ನೀವದನ್ನು ಒತ್ತಿ ಹೇಳುವುದು ಸೂಕ್ತವಲ್ಲ.
ನಾನು ಕುಡಿದ ಅಮಲಿನಲ್ಲಿ,
ಮಾಯಾಲೋಕದ ಸ್ವಪ್ನ ಸುಂದರಿಯರ
ಸೊಂಟವನ್ನು ಬಳಸಿ ಕೂತಂತೆ ಅನಿಸುತ್ತದೆ,
ಅವರೆಲ್ಲರ ಹೊಕ್ಕುಳಿನಲ್ಲಿ ರಾಶಿ ರಾಶಿ
ಹೂಗಳು ಘಮಲನ್ನು ಹೊಮ್ಮಿಸಿ,
ಆಯಕಟ್ಟಿನ ಉಬ್ಬುತಗ್ಗುಗಳತ್ತ ನನ್ನನ್ನ
ಸೆಳೆಯುತ್ತವೆ, ನಾನು ನನ್ನೆಲ್ಲ
ನಿಯತ್ತುಗಳನ್ನು ಅಲ್ಲಿಯೇ ಸ್ಖಲಿಸಿ
ವಾಪಸ್ಸು ಬಂದುಬಿಡುತ್ತೇನೆ, ನನ್ನವಳ
ತೋಳತೆಕ್ಕೆಯನ್ನ ಬಯಸಿಕೊಂಡು
ಬಟ್ಟೆ ಕಳೆದಿಟ್ಟು ಮಲಗುತ್ತೇನೆ.
ನಾನು ಕುಡಿದ ಅಮಲಿನಲ್ಲಿ ತೂಕ
ಕಳೆದುಕೊಂಡು, ಬೆಲೆಯುಳ್ಳ
ಮಾತುಗಳನ್ನ ಹಗುರವಾಗಿ ಚೆಲ್ಲಿಬಿಡುತ್ತೇನೆ,
ನನ್ನ ಸಿದ್ಧಾಂತಗಳು ರೆಕ್ಕೆ ಕಟ್ಟಿಕೊಂಡು ಹಾರುತ್ತವೆ.
ನಾನು ಕುಡಿದ ಅಮಲಿನಲ್ಲಿ ಹಾಡುಗಳ
ಆಳಕ್ಕೆ ಇಳಿಯುತ್ತೇನೆ, ತಪ್ಪು ಒಪ್ಪುಗಳ
ತಿದ್ದಿಕೊಳ್ಳಬೇಕಿತ್ತೆಂದು ಉರಿಯುತ್ತೇನೆ,
ಎಲ್ಲೋ ಒಂದೆರಡು ಸಾಲುಗಳು ಇಷ್ಟವಾಗಿ
ನನ್ನೆಲ್ಲ ಭಂಡತನಗಳು ನನ್ನನ್ನು ತಿವಿದುಬಿಡುತ್ತವೆ,
ನಾನು ರಕ್ತಕಾರಿಕೊಂಡು ಸತ್ತಂತೆ
ಕನಸು ಕಾಣುತ್ತೇನೆ, ಮಧ್ಯಾಹ್ನಕ್ಕೂ
ಮೊದಲೆ ಎದ್ದು ಕೂರುತ್ತೇನೆ,
ಇನ್ನೇನೆನೋ ಮಾಡಿ ಗೊಜ್ಜೆಯೆನ್ನಿಸಿಕೊಂಡ
ನಾನು ನಿಜಕ್ಕೂ ಶುದ್ಧವಿದ್ದೇನೆ,
ನಾನೇನು ಹುಟ್ಟಿನಿಂದಲೇ ಕುಡುಕನಲ್ಲ,
ಮತ್ತು ನೀವದನ್ನು ಒತ್ತಿ ಹೇಳುವುದು ಸೂಕ್ತವಲ್ಲ.
 

‍ಲೇಖಕರು G

January 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಶೇಷಗಿರಿ ಜೋಡಿದಾರ್

    ಸಾಂದ್ರೀಕೃತಗೊಂಡ ನೆನಪುಗಳು,
    ಲಯಬದ್ಧ ಸೋಲುಗಳು,…… Raahashekara…. already I did like this poem and commented on..it is nice…submission of an honest and an innocent soul…..

    ಪ್ರತಿಕ್ರಿಯೆ
  2. Anonymous

    ರಾಜಶೇಖರ್ , ಪದ್ಯ ಬಹಳ ಚೆನ್ನಾಗಿದೆ. ಹುಟ್ಟುಕುಡುಕನೆ ಬರೆದರೂ ಅವನ ಗೋಳನ್ನು ಇಷ್ಟು ಚೆಂದವಾಗಿ ಹೇಳಿಕೊಳ್ಳಲಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: