ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಘವೇಂದ್ರ ಜೋಷಿ ಕವಿತೆ: ಲೈಫು ಇಷ್ಟೇನಾ ಪುರಂದರ ವಿಠಲ

“ಕೃಪಯಾ ಬ್ಯಾಂಗಲೋರ್ ಕೋ

ಜಾನೇವಾಲೇ ಪ್ಯಾಸೆಂಜರ್ಸ್..”

–

ಹೈತಾಪೂರವೆಂಬ

ಕುಗ್ರಾಸ ಹಳ್ಳಿಗೂ

ದೆಹಲಿಯ

ನಿಜಾಮುದ್ದೀನ ಸ್ಟೇಶನ್ನಿಗೂ

ಭಾರತೀಯ ರೈಲ್ವೇದು

ಒಂದೇ ರೀತಿಯ ಸೇವೆ:

ಒಂದೇ ಧ್ವನಿ

ಒಂದೇ ಏರಿಳಿತ.

ಮಿಕ್ಕಂತೆ

ಎಲ್ಲಾ differs.

ಎಲ್ಲಾ matters.

–

ಬರೀ ಕುಡುಗೋಲು

ಮತ್ತು ಸಿಟ್ಟಿಗೆ

ರೂಪಕವಾಗಿದ್ದ ‘ಕೆಂಪು’ ಬಣ್ಣ

ಕಿಂಗ್ ಫಿಷರ್

ವಿಮಾನದಲ್ಲಿ ಮಾತ್ರ

ತಾನೇ ತಾನಾಗಿ

ಅಮಲೇರಿಸಿಕೊಂಡು

ಕರಗಿದ್ದಂತೂ ಸತ್ಯ.

ಎಲ್ಲೂ ಸಿಟ್ಟಿಲ್ಲ

ಸಿಡುಕಿಲ್ಲ.

–

ರೈಲಿನಲ್ಲಿ ಕುಳಿತ ಮದುಮಗಳಿಗೆ

ಅಂಗೈಯಲ್ಲಿನ ಮೆಹಂದಿ

ಯಾಕೆ ಕೆಂಪೇರಿಲ್ಲ

ಅನ್ನುವ ಚಿಂತೆ.

ವಿಮಾನದಲ್ಲಿ ಹುರಿದ ಮೀನು

ತಿನ್ನುತ್ತಿರುವ ಮದುಮಗನಿಗೆ

ಎಂದೋ ನೋಡಿದ್ದ

ಯಾರದೋ

ಮೀನಖಂಡದ ಚಿಂತೆ.

ತೊಟ್ಟ ಬಾಣವ

ಮತ್ತೇ ತೊಡಬಾರದಂತೆ!

–

ಮೇಲಿರುವವನು ಜಾಣ ಕಣ್ರೀ,

ತುಂಟ ಗಾಳಿ

ಸೃಷ್ಟಿಸುವವನೂ ಅವನೇ

ತೊಟ್ಟ ಫ್ರಾಕು

ಹಾರಿಸುವವನೂ ಅವನೇ

ಮತ್ತು

ಇದನ್ನೆಲ್ಲ ನೋಡಬಯಸಿದ

ನೂರಾರು ಕಣ್ಣುಗಳಲ್ಲಿ

ಧೂಳು ಚಿಮುಕಿಸುವವನೂ ಅವನೇ.

ಯಾರಿಗೆ

ಯಾರು ಬೇಲಿ?

ಯಾರಿಗೆ ಯಾರೋ

ಪುರಂದರ ವಿಠಲ!

 

‍ಲೇಖಕರು G

25 April, 2011

2 Comments

  1. dattathri

    very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading