ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಶ್ಮಿ ಕಾಸರಗೋಡು ಕವಿತೆ: ಟೀವಿ ಟಿಆರ್‌ಪಿ ಏರುತ್ತಲಿತ್ತು

ಪಾಪದ ಹೂವು

ರಶ್ಮಿ ಕಾಸರಗೋಡು

 
ಆಷಾಢ ಮಾಸದ ಮಳೆ
ಯಂತೆ ಎಡೆಬಿಡದೆ
ಸುರಿದ ಕಷ್ಟಗಳು
ಮೈ ಮನವನ್ನು ಹರಿದು
ಚಿಂದಿಯಾಗಿ ಬಿಸಾಡಿದಾಗ
ಜನ ಕಣ್ಣು ಮುಚ್ಚಿ ನಕ್ಕಿದ್ದರು!
 
ಇರುಳಲ್ಲಿಯೂ, ಮರೆಯಲ್ಲಿಯೂ
ನನ್ನ ದೇಹ ಸುಖ ಅನುಭವಿಸ
ಬಂದವರು
ಹಗಲಲ್ಲಿ ಕಂಡಾಗ ಕಲ್ಲೆಸೆದರು
ದಿನಕೂಲಿ ಆಳುಗಳು
ಮಹಲಲ್ಲಿ ಕುಳಿತ ಮಹನೀಯರು
ನನ್ನ ದೇಹಕ್ಕೆ ಬೆಲೆ ಕಟ್ಟುತ್ತಾ
ಚೌಕಾಶಿ ಮಾಡಿದರು

ವ್ಯಾಪಾರವಲ್ಲವೇ?
ಮಾರುವವನಿಗೂ ಕೊಳ್ಳುವವನಿಗೂ
ಲಾಭವೇ ಬೇಕಿತ್ತು
ಬಿಗಿಯಾಗಿದ್ದ ನನ್ನ ರವಿಕೆಯ
ಕೊಂಡಿಗಳು ಅವರೆದುರು
ಕಳಚಿದರೆ
ಮಾತ್ರ ನನ್ನ ಕಂದಮ್ಮನಿಗೆ
ಕೈ ತುತ್ತು…
 
ಪಾಪವೋ ಪುಣ್ಯವೋ ನಾ ಕಾಣೆ
ಅವರ ಕಾಮದ ಹಸಿವಿಗೆ
ನಾ ಬೆಂದರೇನಂತೆ?
ಪಾಪುವಿನ ಹಸಿವು
ದೂರವಾಗಿತ್ತು.
 
ಸುಖ ಅನುಭವಿಸಿದವರ
ದೃಷ್ಟಿ ನನ್ನ ಕಂದಮ್ಮನ ಮೇಲೂ
ಬಿದ್ದಾಗ,
ನಡುಗಿದೆ
 
ನನ್ನ ಕೂಸು…
ವಯಸ್ಸು ಆರೇಳು
ಬಿಟ್ಟು ಬಿಡಿ ಎಂದು ಗೋಗರೆದೆ
ಉಹೂಂ…ರಕ್ಕಸರ ನರ್ತನ
ಕೈಗೆ ಸಿಕ್ಕಿದವಳು
ಅವಳು ಶವವಾದಳು
ನಾನು ಹುಚ್ಚಿಯಾದೆ…
 
ಅಲೆಮಾರಿಯಾದ ನನ್ನ
ಕಂಡ ಕಂಡವರೆಲ್ಲಾ ಸುಖಿಸಿದರು
ಬಿಟ್ಟಿಯಾಗಿ!
ಕತ್ತಲಿನ ಲೋಕದಲಿ
ನಾನೀಗ ಏಕಾಂಗಿ
 
ಕಣ್ತೆರೆದು ನೋಡಿದೆ
ಬೆಳಕು ಬಿದ್ದಿತ್ತು ಮುಖಕ್ಕೆ
ಕ್ಯಾಮೆರಾ, ಮೈಕ್ ಹಿಡಿದು
ನಿಂತಿದ್ದ ಆ ಜನರು
ಕರೆದೊಯ್ದರು
ನೇರ ಸ್ಟುಡಿಯೋಗೆ…
 
 
ಅವರ ವಾಹಿನಿಯಲ್ಲಿ
ಕ(ವ್ಯ)ಥೆ ಪ್ರಸಾರವಾಯ್ತು
ಸಾಂತ್ವನದ ಕರೆಗಳು
ಸಹಾಯದ ಹಸ್ತಗಳು
ಬಾಚಿ ತಬ್ಬಿದಾಗ
ಕಣ್ಮುಚ್ಚಿ ಕುಳಿತೆ
 
ಮೇಡಂ, ನಿಮಗೇನು ಅನಿಸುತ್ತಿದೆ?
ನಿರೂಪಕಿಯ ಪ್ರಶ್ನೆಗೆ ನಾನು
ಬೆಚ್ಚಿ, ಕಣ್ತೆರೆದೆ
 
ಟೀವಿ ಟಿಆರ್‌ಪಿ ಏರುತ್ತಲಿತ್ತು
ನಾನು ಕುಗ್ಗುತ್ತಾ ಹೋದೆ…

‍ಲೇಖಕರು G

3 June, 2013

11 Comments

  1. mmshaik

    vaastavada katu chitraNa..!!!!! TRP erisidavaru naave allave…????!!!!!!!!!!!

  2. Tejaswini Hegde

    ಅಬ್ಬಾ… ಯಾತನೆ ಕೊಡುವ ವಾಸ್ತವ….. ಸತ್ಯವಾದರೂ ತುಂಬಾ ಸಂಕಟವಾಗುತ್ತದೆ… 🙁

  3. suguna mahesh

    ಕಟು ಸತ್ಯ… ಸಂಕಟವೆನಿಸುತ್ತೆ ಪ್ರತಿ ಸಾಲುಗಳು ಓದುವಾಗ… ಇಂತಹ ಪರಿಸ್ಥಿತಿಯಲ್ಲಿದ್ದವರ ಕಥೆ ನೆನೆದರೇ ಭಯವೆನಿಸುತ್ತೆ.

  4. Pravara kottur

    Adestu satyavenisuva saalugalu, istavaytu ennuvudakkinta, manassannu aavarisuva kavite…

  5. Arpitha

    Olleya kavithe. Ishtavaytu.

  6. Gururaja kathriguppe

    Your poem made me ‘silent’, obsolutely no words. I felt the same way when I first read Niranjana’s story ‘koneya giraki’. The same ‘shock’ you have given me through your poem. we are living in such a cruel world, where getting TRP by hurting one’s conscience is ‘tollerable’. I believed that a good poem is a mirror ,which must reflects our society. your poem does the same, means your poem is ‘good poem’

    • Vijay

      can you please give me the link of “koneya Giraaki” story, or please tel me where can i get the book.

  7. nagraj.harapanahalli

    ರಶ್ಮಿ , ನಿಮ್ಮ ಅಭಿವ್ಯಕ್ತಿ ಧೈರ್ಯಕ್ಕೆ ಮೆಚ್ಚಬೇಕು. ಸ್ತ್ರೀವಾದಿ ಸಾಲುಗಳು ಇಣುಕಿದರು ….ದೃಶ್ಯ ಮಾದ್ಯಮದ ಹಸಿವನ್ನು ಬಿಂಬಿಸಿದ್ದು ,ಧ್ವನಿ ಪೂರ್ಣವಾಗಿತ್ತು

  8. rashmi

    ಕವನ ಮೆಚ್ಚಿ ಪ್ರತಿಕ್ರಿಯಿಸಿದವರಿಗೆಲ್ಲಾ ಧನ್ಯವಾದಗಳು
    ರಶ್ಮಿ ಕಾಸರಗೋಡು

  9. ನಾಗರಾಜ್ ಹೆತ್ತೂರ್

    ಕಾಡುವ ಕವಿತೆ

  10. Vijay

    hennina shoshanege hidida kaigannadi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading